ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Monday, February 7, 2011

ಮನ್ಸಿಗ್ ಒಂದ್ ಹಾಯ್ ಅಂದ್ನೋಡಿ.......


            ಎಷ್ಟೋ ಬಾರಿ ಕಾರಣವೇ ಇಲ್ಲದೇ ಸಂತಸದ ವರತೆ ಹುಟ್ಟಿಬಿಡುತ್ತದೆ. ನಾವದಕ್ಕೆ ಮಾಡಿದ್ದು ಏನು ಅಂದರೆ ಏನೂ ಇರುವುದಿಲ್ಲ. ಹುಡುಕಿಕೊಂಡು ನಾವು ಹೋಗುವುದೂ ಇಲ್ಲ. ಹೇಳಿಕೊಂಡು ಅದು ಬರುವುದೂ ಇಲ್ಲ. ತನ್ನಿಂತಾನೇ ಎದುರಿಗೆ ನಿಂತು ಮುಖದಲ್ಲೊಂದು ಮಂದಹಾಸ ಮೂಡಿಸಿಬಿಡುತ್ತದೆ. ಅಂತಹ ಸಂತಸಗಳಲ್ಲಿ ನಾನು ತೂಂಬಾ ಖುಷಿಯನ್ನನುಭವಿಸಿದ್ದೇನೆ. ಈ ಮನಸ್ಸೆಂಬೋದೇ ತುಂಬಾ ವಿಚಿತ್ರ. ಅದು ಈವತ್ತು ನಾನು ಖುಷಿಯಾಗಿರಬೇಕು ಅಂತ deside ಮಾಡ್ಕೊಂಡ್ಬಿಟ್ರೆ ಏನೇ ಆದ್ರು ದುಃಖ ಪಡೋಲ್ಲಾ.... ಬೇಜಾರ್ ಮಾಡ್ಕೊಳ್ಳೊಲ್ಲಾ....  ರೇಗೋಲ್ಲಾ... ಏನೇ ಬಂದ್ರೂ just chill. ಅಂದ್ಕೊಂಡ್ಬಿಡುತ್ತೆ...  ಆದರೆ ಒಂದು ವಿಷಯ ಗೊತ್ತಾ....? ಅದಕ್ಕೂ ಕೂಡಾ ನಮ್ಮ support ಬೇಕಾಗುತ್ತೆ.  ಬೆಳ್ ಬೆಳಿಗ್ಗೇನೇ ಒಂದ್ ಬಾರಿ ನಾವು ನಮ್ ಮನ್ಸಿಗೆ ಒಂದು  gud morning  ಅಂದು ಕೈಕುಲುಕಿ ಬಿಟ್ರೆ ಸಾಕು..... ದಿಲ್ ಖುಷ್ ಆಗಿ ದಿನವನ್ನು ಓಡಿಸಿಬಿಡುತ್ತೆ.... ಆಡಿಸಿಬಿಡುತ್ತೆ....
            ಎಲ್ಲೋ ಅರಳುವ ಹೂವಿನ ಸುಮವನ್ನ... ಅಷ್ಟಷ್ಟಾಗಿ ಬಿರಿದು ಮೊಗ್ಗು ಹೂವಾಗುವ ಸೌಂದರ್ಯವನ್ನ....  ಯಾವುದೋ ಮರದ ತೆಕ್ಕೆಯಿಂದ ಕೇಳಿ ಬರುವ ಕೋಗಿಲೆಯ ದನಿಯನ್ನ.... ಬೆಳ್ಳಂಬೆಳಿಗ್ಗೆ ಭೂಮಿಗೆ ನಾಟುವ ಸೂರ್ಯನ ಕಿರಣದ ಕೆಂಪಿನ ಕನಲನ್ನ.... ಅದರಲ್ಲಿ ಮಿಂದು ಮಿಂಚಾಗಿ ಹೊಳೆಯುವ ಮಂಜಿನ ಮುತ್ತನ್ನ....  ಹಾರುವ ಹಕ್ಕಿಗಳ ಸಾಲನ್ನ... ಸಂಜೆ ಸೂರ್ಯನ ಕೆಂಪನ್ನ....ಹರಿಯುವ ನೀರನ್ನ... ಪಕ್ಕದಿಂದ ಸರಿದು ಹೋದ ನೀರೆಯ ಸೀರೆಯ ಸೆರಗಿನ ಗಾಳಿಯನ್ನೂ ಕೂಡಾ ನಿನಗಾಗಿಯೇ ತರಿಸಿದ್ದೇನೆ ಎನ್ನುವಷ್ಟು ಪ್ರೀತಿಯನ್ನ ನಮ್ಮ  ಮುಂದೆ ಹಿಡಿದು ನಿಂತು ಬಿಡುತ್ತದೆ ಈ ನಮ್ಮ ಮನಸ್ಸೆಂಬೋ ಮನಸ್ಸು.......
                         ಅದು ಅಷ್ಟೆಲ್ಲಾ ಸಂತಸವನ್ನು ಕಡೆದು ನಮ್ಮ ಮುಂದಿಡುವಾಗ ಬೆಳ್ ಬೆಳಿಗ್ಗೆ ಒಂದು gud morning ಅಂದು ಈ ದಿನ ಖುಷಿಯಾಗಿರ್ಲಿ ಅಂತ ನಮ್ ಮನ್ಸಿಗೆ ಹಾರೈಸಿ ಕಳಿಸೋದು ಕಷ್ಟಾನಾ?
ಬೆಳಿಗ್ಗೆ ಏಳ್ತೀವಿ ಜಾಗಿಂಗ್ ಮಾಡ್ತೀವಿ.... ಎಲ್ಲೋ ಇರೋ friends ಗಳಿಗೆ ಮನ್ಸಿದ್ದೋ ಇಲ್ದೇನೋ gud morning ಅಂತ forword ಮೆಸೇಜ್ ಹಾಕ್ತೀವಿ... ತಿಂಡಿ ಆಯ್ತು ಬೇಗ ಬರ್ಬಾರ್ದಾ ಅಂತ ಅಮ್ಮ ಕರೆದು ಕರೆದು .ಸುಸ್ತಾಗಬೇಕು, ಆಮೇಲೆ ಹೋಗೋ ರೂಢಿ ಮಾಡ್ಕೊಂಡಿರ್ತೀವಿ... ಸ್ವಲ್ಪ ಹೊತ್ತು ತಂಗಿ ಜೊತೆ ಜಗಳ... ಅವಳ ಸ್ಕೂಲ್ ಬ್ಯಾಗನ್ನ ಎಲ್ಲೋ ಅಡಗಿಸಿಟ್ಟು ಕಾಡ್ಸ್ತಿರ್ತೀವಿ... ಒಂದ್ ಸ್ವಲ್ಪ ಹೊತ್ತು ಪಕ್ಕದ್ಮನೆ ಹುಡ್ಗಾನೋ ಹುಡ್ಗೀನೋ ಕಾಲೇಜ್ ಗೆ ಹೋಗೋದನ್ನ ನೋಡೋ ರೂಢಿ ಇಟ್ಕೊಂಡಿರ್ತೀವಿ.... ಇಂಥಾದ್ದೇ ಅಂತ ಅಲ್ಲಾ.... ಒಟ್ಟಿನಲ್ಲಿ ನಮ್ಮ ಏನೇನೋ ಯದ್ವಾ ತದ್ವಾ ದಿನಚರಿಗಳು....... ದಿನಾಲೂ ಅವು ರಿಪೀಟ್ ಆಗ್ತಾನೇ ಇರುತ್ವೆ.... ಇವುಗಳ ಜೊತೆಗೆ ನಿಮ್ ಮನ್ಸಿಗೆ ನೀವು ಒಂದ್ ಹಾಯ್ ಅನ್ನೋ ರೂಢಿ ಮಾಡ್ಕೊಂಡ್ ನೋಡಿ... ಅದರ ಜೊತೆ ಮಾತಾಡಿ... ಯಾವುದೇ ಕೆಟ್ ಕೆಲ್ಸಾ ಮಾಡಲ್ಲಾ.. ಕೆಟ್ ಮಾತ್ ಆಡಲ್ಲಾ ಅಂತ ಹೇಳ್ಕೋಳಿ... ಇವತ್ತು ನಾನು ಯಾರಿಗೂ ರೇಗೋದಿಲ್ಲ .. ಯಾರಿಗೂ ಬೇಜಾರ್ ಮಾಡೋದಿಲ್ಲಾ ಅಂತ ನಿಮ್ಮನ್ಸಿಗೇ
ನೀವು promise ಮಾಡಿ.. ಹಾಗೇ ಈ ಮಾತಿಗೆಲ್ಲಾ ನೀವು ಒಂದ್ ಬಾರಿ commit ಆಗಿ.. ಆಗ ನೋಡಿ..... ದಿನ ಅನ್ನೋದು ಎಷ್ಟ್ ಖುಷ್ ಖುಷಿಯಾಗಿ ನಮ್ ಮೊಂದೆ ನಿಲ್ಲುತ್ತೆ ಅಂತಾ..

  ಖುಷಿ ಅನ್ನೋದು ಯಾರೊ ನಮಗೆ ತಂದು ಕೊಡೋದಲ್ಲಾ..... ನಮ್ಮಲ್ಲಿ ನಾವು ಕಂಡುಕೊಳ್ಳೋದು.... ನಾವು ಸಂತೋಷವಾಗಿರೋದು ಇನ್ಯಾರದೋ ಕೈಲಿ ಹೇಗಿರುತ್ತೆ. ನಾವಿರೋ ವಾತಾವರಣವನ್ನು ಸಂತೋಷಕರವಾಗಿಡೋದು ನಮ್ಮದೇ ಜವಾಬ್ದಾರಿ... ನಮ್ ಗ್ರೂಪ್ ನಲ್ಲೊಂದು ಅಪರೂಪದ friend ಇದಾನೆ.... ವತ್ಸ ಅಂತ ಅವನಿಂದ ಸಾಕಷ್ಟು ಕಲ್ತಿದ್ದೇನೆ. ಅವನು ಯಾವಾಗ್ಲೂ ಖುಷಿಯಾಗಿರ್ತಾನೆ.... ಅವನು ಎಲ್ಲಾದ್ರೂ entry ಕೊಟ್ಟಾ ಅಂತಂದ್ರೆ ಅವನು ಬರೊಕ್ಕಿಂತ ಮುಂಚೆ ಅವನ ನಗು ಬಂದಿರುತ್ತೆ ಆ ಮನೆಗೆ..... ಅವನಿರೋವಲ್ಲಿ ಸಂತೋಷ ಮಾತ್ರ  ಇರುತ್ತೆ. ಅವನಿರೋ ವಲಯವನ್ನು ಅವನು ಸಂತೋಷವಾಗಿರಿಸ್ತಾನೆ...... ಅವನಿಂದ ನಾನೂ ಸ್ವಲ್ಪ ಮಟ್ಟಿಗೆ ಕಲ್ಕ್ತೊಂಡಿದೀನಿ......  ಸ್ವಲ್ಪ ಅಷ್ಟೇ........ ನಮ್ ನಮ್ ನಡುವೇನೇ ಕಲಿಯೋದ್ ಎಷ್ಟೊಂದಿರುತ್ತಲ್ವಾ? friends ನೀವೂ try ಮಾಡಿ........ ನಾನೂ ಜೊತೆಗಿದೀನಿ......  ಸಂತೋಷಾನಾ ಹಂಚಿಬಿಡಿ... ಸಂತೋಷ ನಮ್ ಸುತ್ತಾನೇ ಇದ್ರೆ ಎಷ್ಟ್ ಚೆನ್ನ ಅಲ್ವಾ.......
ಜೀವನಕ್ಕೆ ನಗುವ ಗಂಧವಿರಲಿ..

ಖುಷಿಯಾಗಿ ಹರಗಿಬಿಡು
ನಿನ್ನೆಲ್ಲ ಸಂತಸವ
ರವಿ ಜಗಕೆ ಹರಡಿರುವ
ಕಿರಣದಂತೆ...
ಒಲವಲ್ಲಿ ಬಾಗಿಬಿಡು
ಎಲ್ಲರೆದುರಿಗೆ ನೀನು
ಅಳಿಸಿಬಿಡು ತಾನೆಂಬೊ
ಅಹಂನ ಚಿಂತೆ||

ಬರಲೇ ಸ್ನೇಹಿಗಳೇ...?
ಅನಿಸಿಕೆಗಳು ಜನ್ಮ ತಳೆದಾಗಲೆಲ್ಲ ಬರ್ತೇನೆ....5 comments:

 1. ಕಂಗಳ ತುಂಬೆಲ್ಲ ಕನಸು ಹೊತ್ತಿರುವ ಹುಡುಗನ ಬರವಣಿಗೆ ಚೆನ್ನಾಗಿದೆ. :)ಆತ್ಮೀಯವಾಗಿದೆ.:) ಸಂತಸ ನಮ್ಮ ಕೈಯಲ್ಲೇ ಇದೆ ಎನ್ನುವ ಸತ್ಯವನ್ನು ನವಿರಾಗಿ ಹೇಳಿದ್ದೀರಿ ಇಷ್ಟವಾಯ್ತು. :) ಅನಿಸಿದಾಗಲೆಲ್ಲ ಬರೆಯುತ್ತಿರಿ, ನಾವು ಓದುತ್ತಿರುತ್ತೇವೆ :)

  ReplyDelete
 2. Yes...
  ಅಳಿದಾಗ ಮಾತ್ರ ಅಹಂನ ಚಿಂತೆ.
  ಒಲವಲ್ಲಿ ಬಾಗಲು ಸಾಧ್ಯ.
  ಒಲವು ಬಾಳಲು ಸಾಧ್ಯ..
  ನಿನ್ನ ಮನದಾಳದಲಿ ಮಧುರ ಭಾವದ ಒರತೆ ಸದಾ ಚಿಮ್ಮುತಿರಲಿ..

  ReplyDelete
 3. ಓದಿ ಮೆಚ್ಚಿ ಹಾರೈಸಿದ್ದೀರಿ ಖುಷಿಯಾಯ್ತು......

  ReplyDelete
 4. ದೋಸ್ತ.. ನಿನ್ನ ಈ ಲೇಖನ.. ಕಸ್ತೂರಿ ಮೃಗದಂತೆ.. ಸಂತೋಷವನ್ನ ಹುಡುಕುವ.. ಬಹುತೇಕ ಜನರಿಗೆ.. ನೈಸ್ ಟಾನಿಕ್.. ಯಾರ್..ಆಯ್ ಲೈಕ್ ಇಟ್..

  ReplyDelete