ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Wednesday, February 16, 2011

ನಿನ್ನ ಪ್ರೀತಿಯ ಭಾರ......


ಕಡೆದಿರುವೆ ನನ್ನೊಲವೆ
ನಿನ್ನ ಈ ಮೂರ್ತಿಯನು
ಎನ್ನ ಹೃದಯಂಗಳದ 
ಪ್ರೀತಿ ಕೂಡಿ.
ಹುಲುಸಾಗಿ ಬೆಳೆಸಿರುವೆ
ಈ ಪ್ರೇಮ ವೃಕ್ಷವನು
ಒಲವು ನಲಿವುಗಳೆಂಬ
ಭಕ್ಷ್ಯ ನೀಡಿ ||

ನನ್ನ ಪ್ರೀತಿಯ ಹುಡುಗಿ
ನಿನ್ನ ಮನಸನು ಅರಿವೆ
ಕಚ್ಚುವಾ ನಾಗರಕೂ
ಒಲವ ಕ್ಷೀರವ ಎರೆವೆ ||

ಗುಬ್ಬಿ ಮರಿಯನು ಕಂಡು
ಏಕಾಂಗಿ ನೀನೆಂದು
ಮರುಗುವಾ ಮನಸವಳೆ
ನೀ ನನ್ನ ಚಲುವೆ||

ಹುಚ್ಚು ಹುಡುಗಿಯೆ ನನ್ನ
ಕಾಲ ಕಿರುಗಾಯವೂ
ತನಗೇನೆ ಎಂಬಂತೆ
ದುಃಖವೇಕೆ?
ನಿನ್ನ ಈ ಪ್ರೀತಿಯನು
ಹೊತ್ತು ನಾ ಬಾಗಿಹೆನು
ಇಷ್ಟು ಪ್ರೀತಿಯ ಹೊರೆಸಿ
ನಡೆಸಬೇಕೆ?
******************* ರಾಘವ್

10 comments:

  1. ಇಷ್ಟೆಲ್ಲಾ ಚಂದ್ ಕೂಸ್ನ ಮನ್ಸಲ್ಲಿ ಕಡದಿಟ್ಕಂಡ್ರೆ ಕಷ್ಟಿದ್ದೋ ಹುಡ್ಕುದು...
    ಕವನ ಚಂದ್ ಇದ್ದೋ...
    ಕಚ್ಚುವಾ ನಾಗರಕೂ ಒಲವ ಕ್ಷೀರವನೆರೆವೆ..ಸೋ ನೈಸ್..

    ReplyDelete
  2. ಓದಿ ನಿಮಗೆ ಖುಷಿಯಾಗಿದ್ದರೆ
    ಅದೇ ನನಗೆ ಖುಷಿ.......

    ReplyDelete
  3. ರಾಘವ...

    ಕವನ ಚೆನ್ನಾಗಿದೆ...

    ಜೈ ಹೋ.. !

    ReplyDelete
  4. ಇಟ್ಟಿಗೆ ಸಿಮೆಂಟಣ್ಣ ಧನ್ಯವಾದ....

    ReplyDelete
  5. ಕವನ ಚೆನ್ನಾಗಿದೆ...

    ReplyDelete
  6. ಪ್ರೋತ್ಸಾಹ ಯಾವತ್ತೂ ಇರಲಿ....

    ReplyDelete
  7. ಮಸ್ತ್ ಮಸ್ತ್ ಕವನ ಬರೀದ್ಯಲೋ.... ಖುಶಿ ಆತು ಕವನ ಓದಿ.

    ReplyDelete
  8. ನಾಗ್ರಾಜಣ್....
    ನಿಮ್ ಖುಷೀನೇ ನಮ್ ಖುಷಿನಪ್ಪಾ....
    ಓದ್ತಾ ಇರು..
    ಹಾಗೇ
    ನನ್ blog ಗೆ ತುಂಬು ಸ್ವಾಗತ.

    ReplyDelete