ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Tuesday, March 15, 2011

ಕಲೆ ಕೊಟ್ಟ ಶಿಲ್ಪಿಗೆ....


ಶಿಲ್ಪಿ ನಿನ್ನಾಟ
ರಸಿಕಮನಕೂಟ
ಶಿಲೆಯಲ್ಲ ಕಲೆಯಾಗಿ
ಹಬ್ಬುತಿಹುದು |


 

ಕೈ ಕುಣಿತದೊಂದಿಗೆ
ಕಲ್ಲಿಗಿಡೊ ಚಾಣ
ಶಿಲೆಯೊಳಗೆ ರಸಿಕತೆಯ
ತೆರೆದಿಡುವ ಜಾಣ |



ಎಷ್ಟು ಜ್ಞಾತರು
ನಶಿಸಿದರು ಇಲ್ಲಿ
ಕೊಟ್ಟ ಕಲೆಮಾತ್ರ
ಉಳಿದಿಹುದು ಶಿಲೆಯಲ್ಲಿ |

ಶಿಲೆಯೆಲ್ಲ ಶಿಲೆಯಾಗಿ
ಉಳಿದಿಲ್ಲ ನೋಡು
ಶಿಲೆಯರಳಿ ಕಲೆಯಾಗಿ
ಹಂಪೆ ಹಳೆಬೀಡು |



ಮತ್ತೊಮ್ಮೆ ಬಾ ಜಗಕೆ
ಕಲೆಯ ಒಡಲೊಳಗಿಟ್ಟು
ಕರೆಯುತಿರುವೆನು ಶಿಲ್ಪಿ
ಕುಂಭ ಸ್ವಾಗತ ಕೊಟ್ಟು |

******************** ರಾಘವ್.
[ಈಗರು ವರ್ಷಗಳ ಹಿಂಹೆ ಹಂಪೆ ಹಳೆಬೀಡಿಗೆ ಹೋದಾಗ ಏನೋ ನ್ಸಿದ್ದನ್ನ ಬರ್ದುಬಿಟ್ಟಿದ್ದೆ. ಒಂದಕ್ಷರಾನೂ ಹಿಂದೆ ಮುಂದೆ ಮಾಡದೇ ಈಗ ನಿಮ್ ಮುಂದೆ ಇಟ್ಟಿದೀನಿ..
(ಹೊಸ ಸೀಸೆ ಹಳೆ ಮದ್ಯ)]




12 comments:

  1. Raghu, that's a sweet little poem!

    ReplyDelete
  2. ಚೆಂದದ ಸಾಲುಗಳು.. :)

    ReplyDelete
  3. ಧನ್ಯವಾದ ಪ್ರದೀಪ್.

    ಹಾಗೆಯೇ... ಕನಸಿಗೆ ಸ್ವಾಗತ..

    ReplyDelete
  4. ಮಧ್ಯ ಹಳೆಯದಾದಷ್ಟೂ ರುಚಿಯಂತೆ ಕಣೋ...

    ReplyDelete
  5. ಹೂಂ.... ಅದರ ಬಗ್ಗೆ ಸರೀ ಕಲ್ಪನೆ ಇಲ್ಯೋ ನಂಗೆ....
    ಹ್ಹ ಹ್ಹ ಹ್ಹಾ....
    ******

    ಧನ್ಯವಾದಗಳು ವಸಂತ್....

    ReplyDelete
  6. ಶಿಲೆಯಲ್ಲ ಶಿಲೆಯಾಗಿ
    ಉಳಿದಿಲ್ಲ ನೋಡು
    ಶಿಲೆಯರಳಿ ಕಲೆಯಾಗಿ
    ಹಂಪೆ ಹಳೆಬೀಡು |

    ಮೇಲಿನ ಸಾಲು "ಶಿಲೆಯಿಲ್ಲಿ...: ಅಂತ ಇರಬೇಕಿತ್ತಲ್ವಾ? ಪದ್ಯ ಚೆನ್ನಾಗಿದೆ. ನೀವು ಹೇಳಿದಂತೆ (ಹಳೆ ಮದ್ಯ ಹೊಸ ಸೀಸೆ)ಮಾಡದೆ. ಮತ್ತೊಮ್ಮ ತಿದ್ದಿದ್ದರೆ ಇದು ಸರಿಯಾಗುತ್ತಿತ್ತೇನೋ?

    ಚೆಂದದ ಪದ್ಯಕ್ಕೆ ಅಭಿನಂದನೆಗಳೊಂದಿಗೆ,
    ಪ್ರೀತಿಯಿಂದ, ಗುಬ್ಬಚ್ಚಿ ಸತೀಶ್.

    ReplyDelete
  7. ಸೊಗಸಾದ ಸಾಲುಗಳಿಗೆ...
    ಅದರ ಭಾವಗಳಿಗೆ ವಂದನೆಗಳು...

    ಜೈ ಹೋ !

    ReplyDelete
  8. ಸತೀಶ್ ಅವರೆ ನಿಮ್ಮ ಸಲಹೆಗಳಿಗೆ ಧನ್ಯವಾದಗಳು.
    "ಶಿಲೆಯೆಲ್ಲ" ಅನ್ನುವುದನ್ನು ಯೋಚಿಸಿಯೇ ಬರೆದಿದ್ದೇನೆ. ಆ ಪದದ ಬಳಿ ಸ್ವಲ್ಪ ಅನುಮಾನ ಕಾಡುವುದು ಸಹಜ.ಅಥಱದಲ್ಲಿ ಸ್ವಲ್ಪವಷ್ಟೇ ವ್ಯತ್ಯಯ ಅಷ್ಟೇ... "ಶಿಲೆಯೆಲ್ಲ ಶಿಲೆಯಾಗಿ" ಅಂದರೆ ಶಿಲೆಗಳೆಲ್ಲಾ ಕೇವಲ ಶಿಲೆಯಾಗಿ ಮಾತ್ರ ಉಳಿದಿಲ್ಲ.. ಶಿಲ್ಪಿಯ ಚಾಣಕ್ಕೆ ಸಿಕ್ಕಿ ಕಲೆಗಳಾಗಿ ಅರಳಿವೆ ಅಂತಾ...
    *"ಶಿಲೆಯಲ್ಲಿ ಶಿಲೆಯಾಗಿ" ಅಂದರೆ ಶಿಲೆಗಳ ಮಧ್ಯ ಇವುಗಳು ಶಿಲೆಗಳಾಗಿಯೇ ಅಳಿದು ಹೋಗಲಿಲ್ಲ ಮೂರ್ತಿಗಳಾಗಿ ಆರಳಿದವು ಅಂತಾ...

    ಎರಡೂ ರೀತಿ ಹೇಳಬಹುದು...
    ತಮ್ಮ ಸಲಹೆಗಳು ಯಾವತ್ತೂ ಬೇಕು ನಮಗೆ...

    ReplyDelete
  9. ಥ್ಯಾಂಕ್ಯೂ ಪ್ರಕಾಶಣ್ಣಾ....

    ReplyDelete