ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Tuesday, April 5, 2011

ನಿನ್ನ ನೆನಪಿನಲ್ಲಿ ಹ್ರದಯ ಪಲ್ಲವಿಸಿಕೊಂಡ ಕ್ಷಣ..............

   
         
ಹೇಯ್ ... ದೇವತೆ ಕಣೇ ನೀನು.... ಒಂದು ಕ್ಷಣ ಎಂತಹ ದಿಗಿಲು ಕೊಟ್ಟುಬಿಟ್ಟೆ..
ಸುಂದರವಾದ ಜಲಪಾತ, ಆಗತಾನೇ ಅರಳಿದ ಹೂವು, ಸದ್ದಿಲ್ಲದೇ ಇಳಿಯುವ ಮಂಜು,ಹಸಿರೆಲೆಯ ಮೇಲೆ ಕಣ್ಣರಳಿಸಿ ಕುಳಿತ ಇಬ್ಬನಿ, ಹರಿಯುವ ನೀರು, ಹಾರುವ ಹಕ್ಕಿ, ಅಮ್ಮನ ಪ್ರೀತಿ ತುಂಬಿದ ಕಣ್ಣು ಹೀಗೆ ಸುಂದರವಾದುದೆಲ್ಲಾ ದಿಗಿಲೇ..... ನಿನ್ನಂತೆ.
ಅದಕ್ಕೇ ಅಲ್ಲವಾ ವಿಜಯದ ನಂತರವೂ ಕೂಡಾ ಕಣ್ಣೀರು ಬರುವುದು......

ಸಂಜೆಯ ಶಾಂತ ತಂಗಾಳಿಯು ಹೂವಿನ ಪರಿಮಳವನ್ನು ನವಿರಾಗಿ ತೇಲಿಸಿ ನಡು ನಡುವೆ ಇಳಿಸಿದಂತೆ....
ಮತ್ತೆ ಮತ್ತೆ ಹೃದಯವನ್ನು ಮತ್ತಾಗಿಸುತ್ತೀಯಲ್ಲೇ....
ನಿನ್ನ ಹುಣ್ಣಿಮೆಯ ಮುಖಕ್ಕೆ ಸೋತೆನೋ.......
ನಿನ್ನ ಮುಂಗುರುಳ ಮಾಲೆಗೆ ಸೋತೆನೋ.....
ನಿಷ್ಕಲ್ಮಶ ಹೃದಯದ ಭಾವಕ್ಕೆ ಸೋತೆನೋ...
ಬೆಳ್ಳಂಬೆಳಗಿನ ಹೋಸದಂತಿರುವ ನಗುವಿಗೆ ಸೋತೆನೋ........
ಯಾವ ಭಾವದ ಬಂಧದಲ್ಲಿ ನನ್ನ ಹೃದಯವನ್ನು ಪಲ್ಲವಿಸಿಕೊಂಡಿದ್ದೇನೆಂದು ಹೇಳಲಿ ಗೆಳತಿ.......

ನಿನ್ನ ಒಲುಮೆಯ ಸೆಳೆತಕ್ಕೆ ಸಿಕ್ಕುವಾಗ ರಾಹುಕಾಲ, ಗುಳಿಕಾಲ, ಯಮಗಂಡಕಾಲ .....
ಊಹೂಂ..... ಯಾವುದೂ ಯಾವ ಲೆಕ್ಕಕ್ಕೂ ಬರಲಿಲ್ಲವಲ್ಲೇ......
ನಿನ್ನ ಕಂಡ ಕ್ಷಣ ಗ್ರಹ ಗತಿಗಳೇ ಬದಲಾದವೇನೋ......
ಅದು ನನ್ನ ಪಾಲಿಗೆ ಎಂತಹ ಅದ್ಭುತ ಕ್ಷಣವಿರಬೇಕು ನೋಡು.....
ಒಂದು ಕ್ಷಣದ ನಂತರ ಎಂತಹ ಬದಲಾವಣೆಗಗಳು ಗೊತ್ತಾ ನನ್ನ ಹೃದಯದ ಪ್ರಪಂಚದಲ್ಲಿ.....

ನನಗೆ ನಾನೇ ಹೇಳಿಕೊಂಡ ಮಾತುಗಳೆಷ್ಟೋ.........
ಕಣ್ಣೊಳಗೆ ಕಟ್ಟಿಕೊಂಡ ಕನಸುಗಳೆಷ್ಟೋ........
ನಿನ್ನ ನೆನಪಿನೊಂದಿಗೆ ಹೃದಯ ಪಲ್ಲವಿಸಿಕೊಂಡ ಕ್ಷಣಗಳೆಷ್ಟೋ......
ನೀ ಕಂಡಾಗಿನಿಂದ ನಿನಗಾಗಿ ಹೆಕ್ಕಿ ತಂದ ಕಪ್ಪೆ ಚಿಪ್ಪುಗಳಳೆಷ್ಟೋ......
ನನ್ನೊಳಗೆ ನಾನೇ ಹಾಡಿಕೊಂಡ ಹಾಡುಗಳು, ನಿನಗಾಗಿ ನಾನು ಬರೆದ ಓಲೆಗಳು,
ನಿನ್ನ ನೆನಪಾದಾಗಲೆಲ್ಲ ಉದ್ಭವಿಸಿದ ಕವನಗಳು, ಹುಣ್ಣಿಮೆಯ ಚಂದ್ರನ ಗೋಲದಲ್ಲಿ
ಕಾಣುವ ನಿನ್ನ ಮುಖ, ಹೊತ್ತಲ್ಲದ ಹೊತ್ತಿನಲ್ಲಿ ಹೃದಯಕ್ಕೆ ಬಂದು ಲಗ್ಗೆ ಇಡುವ ನಿನ್ನ ನೆನಪ ಸುಖ,
ನಿನ್ನ ಪ್ರೇಮದ  ಓಂಕಾರದಲ್ಲಿ ತೇಲಿ ಹೋಗಬೇಕೆಂಬ ತವಕ.....
ಗೆಳತೀ ಇವುಗಳನ್ನೆಲ್ಲವನ್ನೂ ನೀ ನನ್ನೆಡೆಗೆ ನೋಡಿ ನಕ್ಕ ಕ್ಷಣ ನಿನ್ನ ಮಡಿಲಿಗೆ ಸುರಿದು
"ಒಪ್ಪಿಸಿಕೋ" ಎಂದು ಹೃದಯ ಹಗುರಾಗಿಸಿಕೋಬೇಕೆಂದು ಕೊಂಡಿದ್ದೇನೆ........
ಕ್ಷಣಕ್ಕಾಗಿ ಕಾಯುತ್ತಾ ಕುಳಿತಿರುವ ಹಂಸವಾಗಿದ್ದೇನೆ........
ಬರುತ್ತೀಯಲ್ಲವಾ?

                        - ರಾಘವ್ ಲಾಲಗುಳಿ.

16 comments:

  1. Sakattagiddu... :) adu sari.. yav koosapa adu...;)

    ReplyDelete
  2. ಹುಣ್ಣಿಮೆಯ ಚಂದ್ರನ ಗೋಲದಲ್ಲಿ
    ಕಾಣುವ ನಿನ್ನ ಮುಖ, ಹೊತ್ತಲ್ಲದ ಹೊತ್ತಿನಲ್ಲಿ ಹೃದಯಕ್ಕೆ ಬಂದು ಲಗ್ಗೆ ಇಡುವ ನಿನ್ನ ನೆನಪ ಸುಖ,
    ನಿನ್ನ ಪ್ರೇಮದ ಓಂಕಾರದಲ್ಲಿ ತೇಲಿ ಹೋಗಬೇಕೆಂಬ ತವಕ.....ಎಂಬ ಸಾಲುಗಳು ಸೂಪರ್.ನಿಮ್ಮ ಕನಸಿನ ದೇವತೆ ಆದಷ್ಟು ಬೇಗ ನಿಮ್ಮವಳಾಗಲಿ.

    ReplyDelete
  3. ಸುಮಿತ್ರಕ್ಕಾ ಥ್ಯಾಂಕ್ಯೂ......
    ಅದು ಯಾವ ಹುಡುಗಿ ಅಂತಾ ನಾನೂ ಹುಡುಕ್ತಾನೇ ಇದ್ದೆ..
    ಕನಸಲ್ಲಿ ಬರ್ತಾಳೆ... ಏನೇನೋ ಕೀಟಳೆ ಅವಳದ್ದು.....
    ಯಾರು ನೋಡ್ಬೇಕು ಅಂತಾ ಕಣ್ ತೆರೆದ್ರೆ... ಬೆಳಗಾಗಿರುತ್ತೆ...
    ಕನಸಿನ ಕನ್ಯೆ ಅವಳು...

    ಅವಳ್ಯಾರು ಅಂತಾ ಗೊತ್ತಾದ್ರೆ first ನಿಂಗೇ ಹೇಳ್ತೆ.....

    ***********

    ನಾಗ್ರಾಜಣ್......
    ಥ್ಯಾಂಕ್ಯೂ ಪಾ......
    ನನ್ ಸಾಲುಗಳು ಇಷ್ಟಾ ಆಗಿದ್ದಕ್ಕೂ... ಮತ್ತೆ...
    spl ಆಗಿ ಹಾರೈಸಿದ್ದಕ್ಕೂ....

    ReplyDelete
  4. ರಾಘವ..

    ಪ್ರೇಮವೆಂಬ ಹುಚ್ಚು ಹೊಳೆಯಲ್ಲಿ..
    ಏನೆಲ್ಲಾ ಭಾವಗಳು...!

    ಪ್ರತಿ ಸಾಲಿನಲ್ಲೂ ಪ್ರೇಮ ತುಳುಕುತ್ತಿದೆ...

    ReplyDelete
  5. ಸಿಮೆಂಟಣ್ಣಾ..............................................................................................................................

    ReplyDelete
  6. ಗೆಳತೀ ಇವುಗಳನ್ನೆಲ್ಲವನ್ನೂ ನೀ ನನ್ನೆಡೆಗೆ ನೋಡಿ ನಕ್ಕ ಕ್ಷಣ ನಿನ್ನ ಮಡಿಲಿಗೆ ಸುರಿದು
    "ಒಪ್ಪಿಸಿಕೋ" ಎಂದು ಹೃದಯ ಹಗುರಾಗಿಸಿಕೋಬೇಕೆಂದು ಕೊಂಡಿದ್ದೇನೆ........ ultimate lines...!! ರಾಶಿ ಚೊಲೋ ಬರ್ದೆ... ನಿನ್ನ ಕನಸಿನ ಹುಡುಗಿ ಬೆಳ್ಗೆ ಕಣ್ಣು ಬಿಟ್ಟಾಗ ಆದಷ್ಟು ಬೇಗ ಕಾಣುವಂತಾಗ್ಲಿ.... :) :)

    ReplyDelete
  7. ಚೆಂದದ ಸಾಲುಗಳು ರಾಘವ್‍ರವರೇ..

    ReplyDelete
  8. ವಾಣಿಶ್ರೀ ಧನ್ಯವಾದ...

    *******

    ಕಾವ್ಯಾ ಹಾರೈಕೆ ಹಿಂಗೇ ಇರ್ಲಿ....
    ಬರೆದ ಸಾಲುಗಳು ನಿಮಗೆ ಖುಷಿ ಕೊಟ್ರೆ ನಂಗೂ ಖುಷಿ.......

    *******

    ಪ್ರದೀಪ್ ಅವರೇ..... ಧನ್ಯವಾದ.....
    ಹೀಗೇ ಓದ್ತಾ ಇರಿ...

    *******

    ReplyDelete
  9. ಹೋಯ್ -
    ಪ್ರೇಮ ಪೂಜಾರಿ ಆಗೋದ್ಯಲ್ಲ್ಲೋ.

    ಪ್ರೇಮದ ಕನಸು...
    ಪ್ರಣಯದ ಗಂಧ...ಸೇರಿ
    ಕಣ್ಮುಂದಿನ ದಿನವೆಲ್ಲ ದಿವ್ಯ ಸಂರ್ಭಮ...

    ಬರಹಕ್ಕೂ...ಬದುಕಿಗೂ...ಇದೇ ಮಾಧುರ್ಯವಿರಲಿ.
    ಸದಾ - ಸರ್ವದಾ...

    ReplyDelete
  10. ರಾಘವ್ ಪ್ರೇಯಸಿಯಲ್ಲಿ ದೇವತೆಯನ್ನು ಕಾಣುವ ನಿಮ್ಮ ಆರಾಧ್ಯ ಪ್ರೇಮಕ್ಕೆ ಸಲಾಮ್...ಚನ್ನಾಗಿದೆ...ಮುಂದುವರೆಯಲಿ

    ReplyDelete
  11. ವತ್ಸಾ... ಖರೆ ಅಂದಿ ನೋಡು....
    ನನ್ನಾಸೇನೂ ಅದೇ ಐತ್ರಿ ಯಪ್ಪಾ....
    ಪ್ರೇಮ ಪೂಜಾರಿ ಅಲ್ಲಪ್ಪಾ.....
    ಹಾಗೇ ಸುಮ್ನೆ ಅನ್ಸಿದ್ದು....

    ******

    ReplyDelete
  12. ನಿನ್ನವಳನ್ನು ಅರಸುತ್ತ ಬರೆದ ಚಂದದ ಬರಹ
    ಬೇಗನೆ ಸಿಗಲೆಂದು ಹಾರೈಸುತ್ತೇನೆ :)

    ReplyDelete
  13. ಹಲೋ ಮೇಡಂ, ಯಾಕ್ರಿ ನಮ್ಮ ಹುಡುಗನಿಗೆ.. ತ್ರಾಸು ಕೊಡ್ತೀರ.. ಫಸ್ಟ್ ಆಫ್ ಆಲ್ ನೀವು ಅವನ ಕನಸಲ್ಲಿ ಬಂದಿರೋದೆ ದೊಡ್ಡ ತಪ್ಪು.. ಇನ್ನೂ... ತಡ ಮಾಡಿ ಮತ್ತೊಮ್ಮೆ ತಪ್ಪು ಮಾಡ ಬೇಡಿ.. ಹುಂ ಅಂದು.. ನಮ್ಮ ಹುಡುಗನ ಕನಸನ್ನ ನನಸಾಗಸ್ರಿ... ಹಲೋ ದೋಸ್ತ. ಸೂಪರ್ article

    ReplyDelete
  14. ಜಲನಯನ..
    ಧನ್ಯವಾದಗಳು ಸರ್....

    *********

    ಹೆಗ್ಡೆ ಜೀ ಬ್ಲಾಗ್ ಗೆ ಸ್ವಾಗತ...
    ಜೊತೆಗೆ
    ಧನ್ಯವಾದಗಳು...

    ********

    ಥ್ಯಾಂಕ್ಸ್ ರಿ ಕಮಲಾ.....
    ನನ್ ಪರವಾಗಿ ಬೇಡ್ಕೊಂಡಿದೀರಲ್ಲಾ....
    ಓದ್ತಾ ಇರೋ......

    ********

    ReplyDelete
  15. ಹಾಯ್,
    ಸಾಹಿತ್ಯ ತುಂಬಾ ಚೆನ್ನಾಗಿದ್ದು ಮುಂದುವರೆಯಲಿ

    ReplyDelete