ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Tuesday, April 12, 2011

ನಾನರಿಯದ ನೀನು...


ಹೇಗಿರಬೇಕು ನನ್ನೀ ಮನವು
ನೀನೆ ತೀಡಿಬಿಟ್ಟೆ
ಬಣ್ಣದ ಭಾವವು ಸೋಕುವ ಪ್ರೀತಿಯ
ಬಾಣ ಹೂಡಿಬಿಟ್ಟೆ..

ನನ್ನದು ಪ್ರೀತಿಯೋ ನಿನ್ನೆಡೆ ಸೆಳೆತವೋ
ನಾನೇನನು ಬಲ್ಲೆ..
ನೀನುಣಿಸಿದ್ದನು ಉಣ್ಣುವ ನನಗೆ
ನೀನೆಲ್ಲವು ನಲ್ಲೆ..

ನನ್ನಯ ಪ್ರೀತಿಯ ನದಿಯದು ಹರಿಯುವ
ದಿಕ್ಕು ನೋಡಲಿಲ್ಲ..
ಹರಿಯುವ ಸೊಬಗನು ಕಲಿಸಿದ ನಿನಗೇ
ಅದರ ಪ್ರೀತಿಯೆಲ್ಲಾ...

ತಿದ್ದಿದೆ ತೀಡಿದೆ ಮನ ಹದಗೊಳಿಸಿದೆ
ಏನದು ನನ್ನಲ್ಲಿ...
ಪ್ರೀತಿಯ ಮಾಡಲು ಕಲಿಸಿ ಹೋದವಳೆ
ನಿನ್ನೊಲವ್ಯಾರಲ್ಲಿ?

ನನ್ನೆದೆ ಮಹಲಲಿ ಹಚ್ಚಿಹ ದೀಪ
ನಿನ್ನೊಲವಿನ ಪ್ರತಿರೂಪ..
ಹೃದಯವೇ ಉರಿದರೂ ಬೆಳಕನು ನೀಡುತ
ಸಾಯುವ ತ್ಯಾಗದ ಶಾಪ..
-----ರಾಘವ್ ಲಾಲಗುಳಿ.

22 comments:

  1. ಹರಿಯುವ ಸೊಬಗನು ಕಲಿಸಿದ ನಿನಗೇ
    ಅದರ ಪ್ರೀತಿಯೆಲ್ಲಾ...

    ಯಾರಾಕೆ...?
    ನಿನ್ನೆದೆಯ ಒಲವನಾಳುವ ಅಭಿಸಾರಿಕೆ...

    ReplyDelete
  2. ರಾಘವ..

    ಸುಂದರ ಭಾವ ಪೂರ್ಣ ಸಾಲುಗಳು...
    ಇನ್ನಷ್ಟು ಬರಲಿ..

    ಹದಿಹರೆಯದ
    ಹಸಿ,... ಹಸಿರಾದ ಕನಸುಗಳು.. ಬಹಳ ಚಂದ..

    ReplyDelete
  3. sakhattagiddu... hey... kannada prabhadalli prema patra bareyuva spardhe iddu, ondu haku nodva..

    ReplyDelete
  4. ಪ್ರೀತಿಯ ಮಾಡಲು ಕಲಿಸಿ ಹೋದವಳೆ
    ನಿನ್ನೊಲವ್ಯಾರಲ್ಲಿ?
    ಸುಂದರ ಸಾಲುಗಳು...

    ನೀನುಣಿಸಿದ್ದನು ಉಣ್ಣುವ ನನಗೆ
    ನೀನೆಲ್ಲವು ನಲ್ಲೆ..
    ಚೆನ್ನಾಗಿದೆ....

    ReplyDelete
  5. ವತ್ಸಾ.... ನನ್ನೆದೆಯ ರಾಜ್ಯಕ್ಕೆ ಯಾವಾಗ ಯಾರು ಬಂದು ಧಾಳಿ ಮಾಡಿ
    ವಶಪಡಿಸಿಕೊಂಡು ಆಳುತ್ತಾರೋ ಕಾದು ನೋಡಬೇಕು....
    ಯಾರಾಕೆ? ಅದೇ ನನ್ನದೂ ಪ್ರಶ್ನೆ.....

    *******

    ಸಿಮೆಂಟಣ್ಣಾ....
    ಆವಾಗಾವಾಗ ಇಂಥಾ ಸಾಲುಗಳು ಬರ್ತಾ ಇರ್ತು
    ಬಂದಾಗೆಲ್ಲಾ ಇಡೋದು ನಿಮ್ ಮುಂದೆ ತಾನೇ?
    ಧನ್ಯವಾದ.
    ಪ್ರಕಾಶಣ್ಣಾ ಹರೆಯದಲ್ಲಿ ಬರೆದ ಸಾಲುಗಳೆಲ್ಲಾ ಹದಿಹರೆಯದ ಹಸಿ ಹಸಿ ಕನಸಂತೀಯಾ.....?

    ******

    ವಾಣಿಶ್ರೀ ಧನ್ಯವಾದ...

    ******

    ವೈ........ ಧನ್ಯವಾದ.
    ಹೂಂ. ಬರೆದು ಹಾಕುವ ಪ್ರಯತ್ನ ಮಾಡ್ತೆ.
    ಹೇಳಿದ್ಯಲಿ ಖುಷಿ ಆತು....

    ******

    ಕಾವ್ಯಾ ನಿಮ್ ಖುಷೀನೇ ನಮ್ ಖುಷಿ...

    ಹೀಗೇ ಓದ್ತಾ ಇರಿ.......
    ಹಾಗೇ ಕಾವ್ಯ ಕುಸುಮದಿಂದಲೂ ಏನಾದ್ರೂ ಬರ್ತಾ ಇರ್ಲಿ....

    *******

    ReplyDelete
  6. ತುಂಬಾ ಚೆನ್ನಾಗಿದೆ ರಾಘವ್‍ರವರೇ.. ಮನಸ್ಸಿಗೆ ಮುದ ನೀಡಿತು!

    ReplyDelete
  7. ನಿಮ್ಮ ಖುಷಿಯೇ ನಮ್ಮ ಖುಷಿ...

    ಧನ್ಯವಾದಗಳು ಪ್ರದೀಪ್ ರಾವ್...

    *****

    ReplyDelete
  8. ಚೆಂದದ ಸಾಲುಗಳು. ಗೆಳತಿಯ ಬಗ್ಗೆ ಸುಂದರ ಭಾವಗಳ ಸಾಲುಗಳು.
    ನಿಮಗೆ ನಿಮ್ಮ ಕನಸುಗಳನ್ನು ಅರ್ಥ್ಯೆಸಿಕೊಳ್ಳುವಾಕೆ ಸಿಗಲೆಂಬ ಹಾರಯಿಕೆ.

    ReplyDelete
  9. ಹೆಗ್ಡೆ ಜೀ......
    ಧನ್ಯವಾದ....

    *********

    ಶಾಲ್ಮಲೀ......

    ಒಳ್ಳೆಯವರ ಹಾರೈಕೆ ಇದ್ದರೆ ಹಾಗೇ ಆಗುತ್ತೆ ಬಿಡಿ...
    ಹರಸಿದ್ದೀರಿ ಮೆಚ್ಚಿದ್ದೀರಿ...

    ಧನ್ಯವಾದ.

    ********

    ReplyDelete
  10. ನನ್ನಯ ಪ್ರೀತಿಯ ನದಿಯದು ಹರಿಯುವ
    ದಿಕ್ಕು ನೋಡಲಿಲ್ಲ..
    ಹರಿಯುವ ಸೊಬಗನು ಕಲಿಸಿದ ನಿನಗೇ
    ಅದರ ಪ್ರೀತಿಯೆಲ್ಲಾ... ವಾವ್......ಸುಂದರ ಕವಿತೆ.

    ReplyDelete
  11. ನಾಗ್ರಾಜಣ್....
    ತುಂಬಾ ಥ್ಯಾಂಕ್ಸ್ ಪಾ.....

    ಖುಷಿಯಾದ್ರಾತು.....

    ReplyDelete
  12. ಪ್ರೀತಿಯ ಮಾಡಲು ಕಲಿಸಿ ಹೋದವಳೆ
    ನಿನ್ನೊಲವ್ಯಾರಲ್ಲಿ?
    ha ha nice.. line & also nice poem with lot of feelings.. Hello dost.. it happens.. don't worry.. be happy...Once side lover feeling aa macchi.. adaanna chanda madi kavanavagi ponisidde.. Aa hudgi.. adastu.. beka..ninage sigali.. all the best..

    ReplyDelete
  13. ಹೇ ದೋಸ್ತ್....

    ಓವರ್ ಸೀನ್ ಏನೂ ಇಲ್ಲೆ....
    one side love ಕೂಡಾ ಅಲ್ಲಾ....
    ನನ್ ಮನ್ಸಿನ feelings ನ ಬಾಡಿಗೆಗೆ ಪಡೆದು ಹೀಗೇ
    ಏನೇನೋ ಬರೀತೆ.....
    ಆದ್ರೆ ಎಲ್ರೂ ಕೂಡಾ ಆ ಹುಡ್ಗಿ ಬೇಗ ಸಿಗ್ಲಿ ಅಂತಾ ಹೇಳ್ತಿದ್ದಿ....
    ಎಲ್ಲಿದಾಳೋ ಹೇಗಿದಾಳೋ .....

    ReplyDelete
  14. ನನ್ನೆದೆ ಮಹಲಲಿ ಹಚ್ಚಿಹ ದೀಪ
    ನಿನ್ನೊಲವಿನ ಪ್ರತಿರೂಪ..
    ಹೃದಯವೇ ಉರಿದರೂ ಬೆಳಕನು ನೀಡುತ
    ಸಾಯುವ ತ್ಯಾಗದ ಶಾಪ..
    ನಂಗೆ ಇಷ್ಟವಾದ ಸಾಲುಗಳು .. ಮನಸ್ಸಿಗೆ ತಾಟಿತು ... ಭಾವಪೂರ್ಣ ಸಾಲುಗಳು.

    ReplyDelete
  15. ಆಶಾ ಧನ್ಯವಾದಗಳು.....
    ನಿಮ್ಮ ಒಂದು ಮೆಚ್ಚುಗೆಗಳು ಇಂತಹ ನೂರು ಸಾಲುಗಳನ್ನು ಬರೆಸುತ್ವೆ.....

    ReplyDelete
  16. ನನ್ನಯ ಪ್ರೀತಿಯ ನದಿಯದು ಹರಿಯುವ
    ದಿಕ್ಕು ನೋಡಲಿಲ್ಲ..
    ಹರಿಯುವ ಸೊಬಗನು ಕಲಿಸಿದ ನಿನಗೇ
    ಅದರ ಪ್ರೀತಿಯೆಲ್ಲಾ...
    ಮುದ್ದಾದ ಸಾಲುಗಳು
    ಬರೆಯುತ್ತಿರಿ
    ಸ್ವರ್ಣ

    ReplyDelete
  17. ಸ್ವರ್ಣರವರೇ.....

    ಧನ್ಯವಾದಗಳು.....

    ಪ್ರೋತ್ಸಾಹ ಇರಲಿ...

    ReplyDelete
  18. Amazing.....!!!
    Ninn kavanavannu hindomme samyukta karnatakadalli odidnoo...

    ReplyDelete