ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Thursday, April 5, 2012

ನನಗೆ ಪ್ರಿಯವಾಗಿ ಕಾಡಿದ್ದು....

5 ವರ್ಷದ ಒಂದು ಪುಟ್ಟ ಹುಡುಗಿ 7 ವರ್ಷದ ಅದರ ಅಣ್ಣನಿಗೆ ಕೇಳುತ್ತೆ.....
what is love? ಪ್ರೀತಿ ಅಂದರೇನು?


ಅದಕ್ಕವ್ನು ಹೇಳ್ತಾನೆ....


ನೀನು ನನ್ನ bag ನಿಂದ ಪ್ರತಿದಿನ ಚೊಕೋಲೇಟ್ ಕದಿತೀಯಾ ಅಂತ ಗೊತ್ತಿದ್ದೂ
ಮಾರನೇ ದಿನ ನಾನು ಅದೇ ಜಾಗದಲ್ಲಿ ಚೊಕೋಲೇಟ್ ಇಡ್ತೀನಲ್ಲಾ... ಅದು...


ಒಂಥರಾ ಚಂದ ಅನ್ಸ್ತು.....


ಪ್ರೀತಿಗೆ ನೂರಾರು ವ್ಯಾಖ್ಯೆಗಳು...
ಒಬ್ಬೊಬ್ಬರು ವ್ಯಾಖ್ಯಾನಿಸೋದು ಒಂದೊಂಥರಾ.....


ನಂಗಿಷ್ಟ ಆಯ್ತು......
ನಿಮ್ಮುಂದಿಡೋಣಾ ಅಂತಾ.....

.......................................raghav

(ನಾಗ್ರಾಜನ ಮೆಸೇಜು)

15 comments:

  1. ಪ್ರೀತಿ ಮಧುರ ಅನುಭೂತಿ....ನನಗೂ ಇಷ್ಟವಾಯಿತು....

    ReplyDelete
    Replies
    1. ಮೌನ ರಾಗದಲ್ಲಿ ಪ್ರೀತಿಯ ಕಲ್ಪನೆ ಹೇಗಿದೆಯೋ.....

      ಧನ್ಯವಾದ....

      Delete
    2. ಪ್ರೀತಿ ಬ್ಲಾಕ್ & ವೈಟ್ ಕನಸುಗಳಲ್ಲಿದೆ ಅಲ್ಲಿ ಅರಳುತ್ತಿದೆ......ಒಮ್ಮೆ ಬೇಟಿ ಕೊಡಿ....

      Delete
    3. ಬ್ಲಾಕ್ & ವೈಟ್ ಕನಸುಗಳಲ್ಲಿಯೂ ಸಹ ಮಾಧುರ್ಯಗಳಡಗಿರುತ್ವೆ...

      i mean ನೆನಪುಗಳೇ ಹಾಗೆ......

      ಹಳೆಯದಾದಂತೆ ಮಧುರತೆ ಹೆಚ್ಚು.....

      (ಭೆಟ್ಟಿ ಕೊಟ್ಟಿದ್ದೇನೆ)

      Delete
  2. ಸೂರ್ಯಕಿರಣದ ಮೃದುಸ್ಷರ್ಶದಿಂದ ಹೂವರಳಿ ನಗುವುದೂ ಪ್ರೀತಿ
    ತನ್ನೊಡಲಿನ ಕುಡಿಗಾಗಿ ತನ್ನ ಜೀವ ತೇಯುವ ತಾಯಿ
    ಪ್ರೀತಿಯ ಸಾಕಾರ ಮೂರ್ತಿ
    ಚಂದ ಇದ್ದೋ......

    ReplyDelete
    Replies
    1. ಹೂಂ ನೀನಂದ ಪ್ರೀತಿಯೂ ಚಂದ......

      ಪ್ರೀತಿಯಲಿ ಎಲ್ಲವೂ ಚಂದ.....

      Delete
  3. ಪ್ರೀತಿ ಇಷ್ಡ ಆಯ್ತು ಕಣೋ...

    ReplyDelete
  4. ಹೋ... ಇಷ್ಟಾ ಆದ್ರೆ ಆತು.....

    ReplyDelete
  5. ಹೌದಲ್ದಾ ಎಷ್ಟೊಂದು ವ್ಯಾಖ್ಯೆ ಪ್ರೀತಿಗೆ.. . ಇಷ್ಟ ಆತು :-)

    ReplyDelete
  6. ಹೂಂ.....
    ವಿಚಾರಾ ಮಾಡಿದ್ರೆ ಎಲ್ಲಾ ಹೊಸ ಹೊಸದು.....

    ಎಲ್ಲಾದ್ರಲ್ಲೂ ಹೊಸತನ....

    ಅಂಥಾದ್ರಲ್ಲಿ ಪ್ರೀತಿಗೆ ಇರದೇ ಹೋಗ್ತಾ....

    ಧನ್ಯವಾದ....

    ReplyDelete
  7. This comment has been removed by the author.

    ReplyDelete
  8. ಶಿವರಾಂ ಭಟ್ರೆ ಧನ್ಯವಾದ....

    ReplyDelete