ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Thursday, November 15, 2012

ಏನು ಹೇಳುವೆ ಮಗನೆ..... ಕಲಿಗಾಲ ತಾನೇ?.......


ಬದುಕು ಮಾಯೆ ಎಂದವರೆಲ್ಲ,
ಕಾವಿ ತೊಟ್ಟು
ಗಡ್ಡ ಬಿಟ್ಟು
ಕೈ ಎತ್ತಿದವರೆಲ್ಲ,
ಮೀಡಿಯಾದ ಕೈಗೆ ಸಿಕ್ಕಿ
ನಂದುವ ದೀಪದಂತೆ
ಜೋರಾಗಿ ಉರಿವಂತೆ
ಸುದ್ದಿಯಾಗಿ ಮಾಯವಾದರು.

ಆದಿಯ ಅರಿವು ಇಲ್ಲದೇ
ಅಂತ್ಯ ತನ್ನಿಷ್ಟದಂತೆಯೇ ಎಂದು
ಕಾದಿ ತೊಟ್ಟು
ಲಜ್ಜೆ ಬಿಟ್ಟು
ಗದ್ದುಗೆ ಏರಿ ಕುಂತ ಕಮಂಗಿಗಳೆಲ್ಲಾ
ಅವರವರದೇ ಗಾಳದಲ್ಲಿ ಸಿಕ್ಕಿ
ಜೈಲ ಕೋಣೆಯಲ್ಲಿ ವಿಲಿವಿಲಿಯಾಗಿ
ಗೋಡೆಗೆ ಬೆನ್ನ ಚಾಚಿದರು.

ಪ್ರೀತಿ ಮಾತಾಡಲು ಟೈಮೇ ಇಲ್ಲದೇ
ಪ್ರೀತಿ ಜಾಗದಲ್ಲಿ ಹಣ ಇಟ್ಟು
ಕರಿ ಕೋಟು ತೊಟ್ಟು
ಏಸಿಯಲ್ಲಿ ಕುಳಿತೂ
ಬೆವರು ಒರೆಸುತ್ತಾ ಹೊರಟ
ಪಕ್ಕಾ ಬಿಸಿನೆಸ್ ಮಂದಿ

ಒಂದು ರಾತ್ರಿಯೂ ನಿದ್ರೆಯಿಲ್ಲದೇ
ಹೊರಳಾಡಿ ಹೊರಳಾಡಿ
ಗುಂಡಿ ಸೇರಿದರು.

8 comments:

  1. ಸಂಧ್ಯಾ ಜೀ..... ಏನ್ ಮಾಡೋಣ ಹೇಳಿ.......

    ಧನ್ಯವಾದ........

    ReplyDelete
  2. ಧನ್ಯವಾದಗಳು ಸರ್......

    ಕಣ್ಣೆದುರಿಗೆ ಕಾಣುತ್ತೆ....
    ಯಾರಿಗೆ ಗೌರವ ಕೊಡೋಣ..... ಯಾರು ಬದುಕುವ ರೀತಿ ಸರಿ ಅನ್ನೋಣ....
    ಯಾವ ತಟ್ಟೆಯ ಅನ್ನವನ್ನು ಉಂಡರೂ ಬಾಯಿಗೆ ಕಲ್ಲು ಸಿಕ್ಕಿ ಬಿಡುತ್ತೆ....
    ನಮ್ಮ ತುತ್ತನ್ನು ನಾವು ಆರಿಸಿ ಉಣ್ಣಬೇಕಷ್ಟೆ...... ಏನಂತೀರಿ?

    ReplyDelete
  3. ಚೆನ್ನಾಗಿದೆ. ನೈಜತೆಯ ವಸ್ತುನಿಷ್ಟ ಚಿತ್ರಣ.

    ReplyDelete
    Replies
    1. ಮೌನದಲ್ಲೇ ವೀಣೆಯಾ.......
      ಮೌನವೇ ವೀಣೆಯಾ.....
      ಧನ್ಯವಾದ ವೀಣಾ......

      Delete
  4. ಚೆನ್ನಾಗಿದ್ದು....ಇಂದಿನ ಜೀವನವೇ ಹಾಗೆ..ಯಾವುದಕ್ಕೂ ಸಮಯವಿಲ್ಲ..ಗಳಿಸಿಲ್ಲ ಪ್ರೀತಿ ವಿಶ್ವಾಸವನ್ನು, ಗಳಿಸಬಹುದೇನೋ ಹಣವೊಂದನ್ನು...

    ReplyDelete
  5. ಪದ್ಮಾ........
    ಧನ್ಯವಾದಗಳು...... ಗಡಿಬಿಡಿಯ ಪ್ರಪಂಚದಲ್ಲಿ ನಾವು ಪಡೆದುಕೊಳ್ಳೊದಕ್ಕಿಂತ
    ಕಳೆದುಕೊಳ್ಳೋದೇ ಹೆಚ್ಚೇನೋ......
    ಆದಷ್ಟು ಪ್ರೀತಿ ವಿಶ್ವಾಸಗಳನ್ನು ಮೊಗೆಯುವ ಅವಕಾಶ ನಮ್ಮದಾಗಲಿ.....
    ಏನಂತೀರಿ?

    ReplyDelete