ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Tuesday, January 1, 2013

ಬಾ ಸುಧೆಯೆ ಬೊಗಸೆಯಲಿ ಪ್ರೀತಿಯಿರಿಸಿ....

  
 ಪ್ರೀತಿಯಲಿ ನಾ ಬರೆದ ನೂರಾರು ಪತ್ರಗಳು
ಹಾಳೆಯಲಿ ಮಂಕಾಗಿ ಮೂಲೆ ಸೇರಿವೆ ನೋಡು
ನೀನಿರದ ಜೀವ ನಾ ಬರೆದ ಹಾಡು
ಪ್ರೀತಿ ಸಿಕ್ಕದ ಬರಡು ಬಂಜರಿನ ಗೂಡು||

ಸಹ್ಯವಾಗದೇ ನಿನಗೆ ನನ್ನ ಹೃದಯದ ಕೇಕೆ
ಕಾಡಿ ಬೇಡಿದೆ ನಿನ್ನ ಬರಲಿಲ್ಲವೇಕೆ?
ನೆಪಮಾತ್ರಕೆ ಜೀವ ಬದುಕಿದರೆ ಸಾಕೇ?
ಅತೃಪ್ತ ಬದುಕಿನಡಿ ಮರುಗಬೇಕೆ? ||

ನನ್ನೊಳಗಿನಾ ನನ್ನ ಹೃದಯದಲಿ ಇಂದೇಕೋ
ನಿನ್ನದೇ ನೆನಪಲ್ಲಿ ಮೌನ ಶೋಕ
ಮುಸ್ಸಂಜೆ ಬಾನಲ್ಲಿ ಮಧುಗಂಗೆ ತಟದಲ್ಲಿ
ನೀನಿಲ್ಲದೇ ಮನವು ಮತ್ತೆ ಮೂಕ ||

ನನ್ನಾಣೆ ನಾ ಕಾಯ್ವೆ ನೀ ಬರುವ ದಾರಿಯನು
ಹೃದಯ ಬಾಗಿಲ ಬಳಿಯೆ ದೀಪ ಉರಿಸಿ
ಕ್ಷಣಕ್ಷಣಕೂ ಜೀವ ನಿನಗಾಗಿ ಕಾಯುತಿದೆ
ಬಾ ಸುಧೆಯೆ ಬೊಗಸೆಯಲಿ ಪ್ರೀತಿಯಿರಿಸಿ||

........................................ರಾಘವ್  ಲಾಲಗುಳಿ

12 comments:

 1. tumbaaaa chennaagide...
  raagakke bareda haagide...
  innu bareyiri...

  ReplyDelete
 2. ಇಬ್ಬರು ದೊರೆಗಳಿಗೂ ಧನ್ಯವಾದಗಳು.....

  ರಾಗಕ್ಕೆ ಬರತೆದದ್ದಲ್ಲ...... ಬರೆದದ್ದಕ್ಕೆ ರಾಗ ಹಾಕ್ಬೇಕಷ್ಟೆ...

  ReplyDelete
 3. ಕೆ.ಎಸ್.ಎನ್ ಪ್ರೇಮಗೀತೆಗಳ ನೆನಪಾಯಿತು, ಭಾವಗೀತೆಯ ಸೊಗಸಿದೆ, ಚೆಂದನೆಯ ಸಾಲುಗಳು ಹೀಗೆ ಮೂಡಿಬರಲಿ ನಿರಂತರ...

  ReplyDelete
 4. ನೆನಪಿನ ನೆಪ ಕಾಡಿದ ಹಾಡು ಚೆನ್ನಾಗಿದೆ..

  ReplyDelete
 5. ಖಂಡಿತಾ....

  ಓದುಗ ದೊರೆಗಳು ಇರೋವರೆಗೆ ನಿರಂತರ.....

  ದೊಡ್ಡ ದೊಡ್ಡವ್ರೆಲ್ಲಾ ನೆನಪಾಗ್ತಾರೆ ಅಂದ್ರೆ.....
  ಬರೆಯುವಾಗ ಡಗ ಡಗ ಆಗುತ್ತೆ ಹ್ಹಾ....

  ಧನ್ಯವಾದ........

  ReplyDelete
 6. ಧನ್ಯವಾದ ವೀಣಾ.....

  ನಿನ್ ಕಾಮೆಂಟಿಗೆ ಏನ್ ಬರೀಬೇಕು ಗೊತ್ತಾಗ್ತಿಲ್ಲಾ.....

  ಅವರವರ ಭಾವಕ್ಕೆ........

  ReplyDelete
 7. This comment has been removed by the author.

  ReplyDelete
 8. ಈ ನೀರಿಕ್ಷೆಗೆ ಸುಧೆ ಒಲಿದಾಗಿದೆಯಲ್ಲವೇ ?
  ಚಂದದ ಸಾಲುಗಳು

  ReplyDelete
 9. ಹ್ಹ ಹ್ಹ ಹ್ಹ,,,,,
  ನನ್ನ ಸುಧೆ ಒಲಿದಾಗಿದೆಯಲ್ಲಾ....

  ಸ್ಡರ್ಣಾರವರೆ ಹಾಗಾದರೆ ಈ ಸಾಲುಗಳು ಬೇರೆ ಯಾರಾದರು
  ಪ್ರೇಮಿಗಳಿಗೇ ಇರಲಿ ಅಂತೀರಾ?


  ReplyDelete
 10. ಉತ್ತಮ ಸಾಲುಗಳು.... ನೆಪ ಮಾತ್ರಕೆ ಜೀವ ಬದುಕಿದರೆ ಸಾಕೆ? ಎ೦ಬ ಸಾಲು ಬಹಳ ಇಷ್ಟವಾಯಿತು... ನೋವು ಅ೦ತಲ್ಲಾ, ಈಗಿನ ಜನರು ಬದುಕುವುದೆ ಹೀಗೆ ಅನಿಸಲು ಶುರುವಾಗಿದೆ ಈಗೀಗ...

  ReplyDelete
 11. ಶೃತಿ.... ಮಾತೇನೋ ನಿಜವೇ.....

  ಆದರೆ ನಮ್ಮ ಅನಿಸಿಕೆಗಳೂ ಕೂಡಾ ಎಷ್ಟೋ ಬಾರಿ ಪರಿಸ್ಥಿತಿ
  ಅವಲಂಬಿತ ಅಲ್ಲವಾ?

  ಆದರೆ ಹುಟ್ಟಿದ್ದಕ್ಕಾಗಿ ಬದುಕಬೇಕು ಅನ್ನೋವವರೇ ಹೆಚ್ಚಿರುವವರ ಲೋಕ ಇದು.....
  ಬದುಕಿಗೊಂದು ಅರ್ಥ ಕಾಣಿಸಬೇಕೆನ್ನುವವರ ಬದುಕು ಏಕೋ ಚಿಕ್ಕದಾಗಿಯೇ ಇರುತ್ತೇನೋ...
  ವಿಪರ್ಯಾಸ ಅಲ್ವಾ?

  "ಈಗಿನ ಜನರು ಬದುಕುವುದೆ ಹೀಗೆ ಅನಿಸಲು ಶುರುವಾಗಿದೆ ಈಗೀಗ..."

  ತುಂಬಾ serious ಆಗಿ ವಿಚಾರ ಮಾಡಿದರೆ ಹೀಗೆಲ್ಲಾ ಅನಿಸೋಕೆ ಶುರುವಾಗುತ್ತೆ...
  ವಿಚಾರಗಳು ಆದಷ್ಟು ಸಹಜವಾಗಿದ್ದರೆ ಹೀಗೆಲ್ಲಾ ಅನಿಸೋದು ಸ್ವಲ್ಪ ಕಡಿಮೆ ಆಗಬಹುದು...
  ಸುಮ್ನೆ ಪ್ರಯತ್ನಿಸಿ ಅಷ್ಟೇ....

  ನಿಮ್ಮ ಬರಹ ಓದುವ ಹಂಬಲದಲ್ಲಿ ನಾವಿದ್ದೇವೆ...
  ಬೇಗ ಬರಲಿ....

  ReplyDelete