ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Saturday, May 11, 2013

ಅವಳ ಕಂಬನಿ........











ಅವಳ ಕಂಬನಿ ಮಾತಾಗಿದೆ
ಹಲವು ವರ್ಷಗಳ ನೊಂದ-
ಬೆಂದ ಜೀವಕ್ಕೆ ಕನ್ನಡಿಯಾಗಿದೆ
ಕಂಡ ನೆನಪಿಲ್ಲ ಬದುಕಿನಾ ಚಂದ||

ಅವಳ ಕಂಬನಿ ದುರಂತಗಳಿಗೆ ಸಾಕ್ಷಿಯಾಗಿದೆ
ಅದಕ್ಕೆ ಅದರದೇ ಆದ ನೋವಿದೆ
ಪನ್ನೀರ ಬಟ್ಟಲಲಿ ಮುಖ ನೋಡಿಕೊಂಡ
ಚಂದದ ಮುಖ ನೆನಪಿನಿಂದ ಮಾಸುತ್ತಿದೆ||

ಅವಳ ಕಣ್ಣಿರು ಮಾಸುತ್ತಿರುವ ನೆನಪಾಗಿದೆ
ಪುಟ್ಟ ಲಂಗದಲ್ಲಿ ಜಿಗಿವ ನೆನಪು ಮಸುಕಾಗಿದೆ
ಜೋಡು ಜಡೆಯ ಹೆಣೆವ ಕೈ ನಡುಗುತ್ತಿದೆ
ಜೀವದಲ್ಲಿ ತ್ರಾಣವಿಲ್ಲದೇ ನೆನಪುಗಳೂ ಹೆಪ್ಪುಗಟ್ಟುತ್ತಿವೆ||

ಅವಳ ಕಣ್ಣಿರು ಅವಳು ಬದುಕಿದ್ದಕ್ಕೆ ಸಾಕ್ಷಿಯಾಗಿ ನಿಂತಿದೆ
ಕಟ್ಟಿಟ್ಟ ವಿಪರ್ಯಾಸಗಳ ಮೊಟ್ಟೆ ನಾರುತ್ತಿದೆ
ಬದುಕಿನುದ್ದಕ್ಕೂ ವಿಪರ್ಯಾಸಗಳೇ ತುಂಬಿ ಸೋರುತ್ತಿದೆ...
ಪರಿಸ್ಥಿತಿಗಳು ಚೂರಾದ ಬದುಕನ್ನು ಸಾರುತ್ತಿವೆ ||.

ಅವಳ ಕಣ್ಣಿರೇ ಅಕ್ಷಯದ ಕುರುಹಾಗಿ
ಕಹಿನೆನಪೇ ಗರ್ಭದಲಿ ಮನೆಕಟ್ಟಿದೆ
ಬದುಕೆಲ್ಲ ಹಣ್ಣಾಗಿ ಕನಸುಗಳು ಹುಣ್ಣಾಗಿ 
ನೆನಪುಗಳು ಧಾಳಿಯಲಿ ನೆಲಕಚ್ಚಿವೆ ||

ಅವಳ ಕಣ್ಣಿರು ಮತ್ತೆ ಮತ್ತೆ ನೆನಪಾಗುತ್ತಿದೆ
ಒಂದು ಹನಿ ಕಣ್ಣೀರು ಸಾವಿರದ ದುಃಖ
ಪಾಪ ಹಣ್ಣೆಲೆ ಅಳಲ ಕೇಳುವವರಿಲ್ಲ..
ಅವಳಾಸ್ತಿ "ಕಣ್ಣ ಹನಿ" ಕೊಳ್ಳುವವರಿಲ್ಲ..||

                                                      ------- ರಾಘವ್ ಲಾಲಗುಳಿ




4 comments:

  1. ಪಾಪ ಹಣ್ಣೆಲೆ ಅಳಲ ಕೇಳುವವರಿಲ್ಲ..
    ಅವಳಾಸ್ತಿ "ಕಣ್ಣ ಹನಿ" ಕೊಳ್ಳುವವರಿಲ್ಲ..||
    ಇಷ್ಟವಾಯಿತು ಭಾವ ಬರಹ....

    ReplyDelete
  2. ತುಂಬಾ ಚೆನ್ನಾಗಿ ಬಿಂಬಿಸಿದ್ದೀರ ...
    ಸೆರೆ ಹಿಡಿದ ಭಾವಗಳು ಮನ ತಟ್ಟಿ ಹೋಯ್ತೊಮ್ಮೆ
    ಬರೀತಾ ಇರಿ

    ReplyDelete
    Replies
    1. ಧನ್ಯವಾದ...
      ನೀವು ಬರ್ತಾ ಇರಿ....

      Delete