ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Thursday, November 17, 2011

ಕಾಡು ಹೂ.....


ಕಾಡು ಪುಷ್ಪವಾದರೇನು
ಬೀರಿತದರ ಪ್ರೀತಿ
ಕಣ್ಣ ತುಂಬ ಕನಸ ಹೊತ್ತು
ಅರಳಿ ನಿಂತ ರೀತಿ ||

ಕಾಡು ಪುಷ್ಪವಾದರೇನು
ಹಾಸಿ ತನ್ನ ಸೆರಗು
ಕೊಡಲಿಲ್ಲವೇನು ತಾನು
ಅರಳಿ ನಿಂತು ಮೆರಗು||

ಕಾಡು ಪುಷ್ಪವಾದರೂನು
ಅರಳಿ ತನ್ನ ಆಸೆಗೆ
ಸೋಗು ಹಾಕಿ ಮೆರೆದಿಲ್ಲವೇ
ಪ್ರಕೃತಿಯೊಡಲ ಭಾಶೆಗೆ||

ಕಾಡು ಪುಷ್ಪವಾದರೇನು
ಇರಲಾರದೇ ಕನಸು
ಹತ್ತು ಕನಸ ಹೊತ್ತು ನಿಂತು
ನನಸಾಗಿಸೋ ಮನಸು ||

----------- ರಾಘವ್.16 comments:

 1. ಕಾಡು ಪುಷ್ಪವಾದರೇನು
  ಹಾಸಿ ತನ್ನ ಸೆರಗು
  ಕೊಡಲಿಲ್ಲವೇನು ತಾನು
  ಅರಳಿ ನಿಂತು ಮೆರಗು||

  ಇಷ್ಟ ಆತು... :)

  ReplyDelete
 2. ಹೂಂ......
  simple ಆಗಿ ಬರದ್ದೆ.....
  ಏನ್ ದೊಡ್ಡ್ ವಿಷ್ಯ ಇಟ್ಕಂಡಲ್ಲಾ......

  thank u...

  ReplyDelete
 3. ಧನ್ಯವಾದ ಕಮಲ್.....

  ಹೂಂ. simple ಆಗಿ ಬರೀವಾ ಅಂತಾ.....

  ReplyDelete
 4. ತು೦ಬಾ ಚನ್ನಾಗಿದ್ದು....ಇಷ್ಟ ಆತು...

  ReplyDelete
 5. Thank u ಶೃತಿ.....

  ಬರ್ತಾ ಇರು.....

  ReplyDelete
 6. ಪ್ರಕಾಶಣ್ಣಾ thank u.....

  ಸಲಹೆಗಳೂ ಬೇಕು.......

  ReplyDelete
 7. ಚಿಕ್ಕ ಚೊಕ್ಕ ಕವನ.....ನೈಸ್....ಎಳೆಎಳೆಯಾಗಿ ಬಿಡಿಸುತ್ತ ಅರ್ಥೈಸಿಕ್ಕೊಂಡು ಓದಿದರೆ ನಾನರ್ಥ ಪಡಕ್ಕೊಳ್ಳುವ ಕವಿತೆ....
  ಚೆನ್ನಾಗಿದೆ ರಾಘವ್...

  ReplyDelete
 8. ಸುಷ್ಮಾ....
  ಕವನವೆಂದರೇನೇ ಹಾಗಲ್ವಾ....
  ನಾಲ್ಕು ಜನ ಓದಿದರೆ ನಾಲ್ಕು ರೀತಿ ಭಾವವನ್ನೇ
  ನಾಲ್ಕರ್ಥವನ್ನೇ ಕೊಡುತ್ತೆ.....
  ಧನ್ಯವಾದ...
  ಹೀಗೇ ಬಂದು ಓದ್ತಾ ಇರಿ....

  ReplyDelete
 9. ಇಲ್ಲಿ ಭಾವನೆಯ ಅರಳುವಿಕೆಯ ಸೋಜಿಗ ಮನ ಮುಟ್ಟಿತು. ಕಾವ್ಯದ ಅಂತಃಸತ್ವವಾಗಿ ನಿಂತ ಆ ಕಾಡು ಪುಷ್ಪ ಹಲ ಪ್ರಶ್ನೆಗಳ ಮೂಲ.

  ಭೇಷ್!

  ಬಿಡುವು ಮಾಡಿಕೊಂಡು ನನ್ನ ಬ್ಲಾಗಿಗೂ ಬನ್ನಿರಿ.
  ನನ್ನ face book profile:
  badarinath palavalli

  ReplyDelete
 10. ಭದ್ರಿನಾಥವರೇ.....

  ಪ್ರಶ್ನೆಗಳು ಹುಟ್ಟಿಕೋಡಾಗ ಮಾತ್ರ ತಾನೆ
  ತಿರುಳ ಗಂಧ ಪಸರಿಸೋದು.....

  ಧನ್ಯವಾದ....

  ಖಂಡಿತಾ ನಿಮ್ blog ಗೂ ಬರ್ತೀನಿ...

  ReplyDelete
 11. ಬಹಳಷ್ಟು ಕಾಡು ಹೂಗಳು ತಮ್ಮ ಸೊಬಗಿಂದ, ಕಂಪಿಂದ 'ಕಾಡುವ' ಹೂವುಗಳೆ
  ಎಂಬ ಅರ್ಥದಲ್ಲಿ ಮೊಗ್ಗಿದ ಈ ಕಾವ್ಯ ಕುಸುಮ ಚೆಂದವಿದೆ. :)

  ReplyDelete