ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Wednesday, February 16, 2011

ನಿನ್ನ ಪ್ರೀತಿಯ ಭಾರ......


ಕಡೆದಿರುವೆ ನನ್ನೊಲವೆ
ನಿನ್ನ ಈ ಮೂರ್ತಿಯನು
ಎನ್ನ ಹೃದಯಂಗಳದ 
ಪ್ರೀತಿ ಕೂಡಿ.
ಹುಲುಸಾಗಿ ಬೆಳೆಸಿರುವೆ
ಈ ಪ್ರೇಮ ವೃಕ್ಷವನು
ಒಲವು ನಲಿವುಗಳೆಂಬ
ಭಕ್ಷ್ಯ ನೀಡಿ ||

ನನ್ನ ಪ್ರೀತಿಯ ಹುಡುಗಿ
ನಿನ್ನ ಮನಸನು ಅರಿವೆ
ಕಚ್ಚುವಾ ನಾಗರಕೂ
ಒಲವ ಕ್ಷೀರವ ಎರೆವೆ ||

ಗುಬ್ಬಿ ಮರಿಯನು ಕಂಡು
ಏಕಾಂಗಿ ನೀನೆಂದು
ಮರುಗುವಾ ಮನಸವಳೆ
ನೀ ನನ್ನ ಚಲುವೆ||

ಹುಚ್ಚು ಹುಡುಗಿಯೆ ನನ್ನ
ಕಾಲ ಕಿರುಗಾಯವೂ
ತನಗೇನೆ ಎಂಬಂತೆ
ದುಃಖವೇಕೆ?
ನಿನ್ನ ಈ ಪ್ರೀತಿಯನು
ಹೊತ್ತು ನಾ ಬಾಗಿಹೆನು
ಇಷ್ಟು ಪ್ರೀತಿಯ ಹೊರೆಸಿ
ನಡೆಸಬೇಕೆ?
******************* ರಾಘವ್

Sunday, February 13, 2011

ಹೃದಯ ಹೂ ಬಿಡುವ ಕಾಲ....


ಒಲ್ಮೆಯಲಿ ಕರೆದಿರುವೆ
ಬಾಳ ಬಳಿ ಬಾರೆಂದು
ಯಾವ ಉಲಿತಕೆ ನೀನು
ಕರಗೋ ಹೆಣ್ಣು
ವರುಷವಾಯಿತು ಚಿನ್ನ
ಪ್ರೀತಿ ಕನಸನು ಕೂಡಿ
ನೀ ಬರದಿರೆ ಹೃದಯ
ಬರಿಯ ಹುಣ್ಣು ||
   ಪ್ರೀತಿ ಎನ್ನುವುದು ಗುಬ್ಬಚ್ಚಿ ಗೂಡು ಕಟ್ಟಿದ ಹಾಗೆ. ತುಂಬಾ ನಾಜೂಕಾಗಿ ಹೆಣೆದಿರುವಂತಹ ಬಂಧ ಇದು. ಎಷ್ಟೆಷ್ಟೋ ಕಾಲ ಕನಸುಗಳನ್ನು ಕೂಡಿ.....ಹೃದಯವನ್ನು ಹದಮಾಡಿ ಅದಕ್ಕೊಂದು ಒಲ್ಮೆಯ ಭಾವದ ಕಲೆಕೊಟ್ಟು ಕಡೆದಿರುವಂತಹ ಸ್ಪಟಿಕದಞ್ಟು ತಂಪು ತಂಪು ಈ ಪ್ರೀತಿ.
ಇಂದು ಪ್ರೇಮಿಗಳ ದಿನ........
ಎಷ್ಟು ಹೃದಯಗಳಲ್ಲಿ ಪ್ರೀತಿ ಮೊಗ್ಗಾಗಿ ಕುಳಿತು ಈ ದಿನಕ್ಕಾಗಿ ಕಾಯುತ್ತಿದೆಯೋ....... ನಿನ್ನೆಯ ರಾತ್ರಿಗಳಲ್ಲಿ ನಿದ್ರಿಸದೇ ಅದೆಷ್ಟು ಪ್ರೀತಿ ಹೃದಯದ ಒಡೆಯರು, ನಾಳೆಯ    ದಿನವಾದರೂ ಅವಳೆದುರಿಗೆ ಪ್ರೀತಿ ಹೇಳಿಬಿಡೋ ಧೈರ್ಯ ಕೊಡು ಭಗವಂತಾ  ಅಂತ ಪ್ರಾರ್ಥಿಸಿದ್ದಾರೋ...... ಎಷ್ಟು ಹೃದಯದ ಗೂಡುಗಳು ಭಾವುಕತೆಯ ಪ್ರಕಂಪನದ ಭೂಕಂಪಕ್ಕೆÌ ನಡುಗಿಬಿಟ್ಟಿದ್ದಾವೋ?

ಪ್ರತಿದಿನ ಬೆಳಿಗ್ಗೆ ಬಾಗಿಲು ತೆರೆದೊಡನೆ ಕಾಣುವ ಎದುರುಮನೆಯ ರಂಗೋಲಿಯ ಹುಡುಗಿ, ಬಸ್ ಸ್ಟಾಪಿನಲ್ಲಿ ಜೊತೆಯಾಗಿ ಬಸ್ಸಿಗಾಗಿ ಕಾಯುವವರು, ವಾರಕ್ಕೊಮ್ಮೆ ಬಸ್ಸಿನಲ್ಲಿ ಕಾಣೋ ಅರೆಪೇಟೆ ಹುಡುಗ, ಶನಿವಾರ ಮಾತ್ರ ಹನುಮಂತನ ಗುಡಿಯಲ್ಲಿ ಪ್ರದಕ್ಷಿಣೆ ಹಾಕುತ್ತಾಕಣ್ಣ ಕೊನೆಯಿಂದ ನೋಡುವ ಎರಡು ಜಡೆಯ ಹುಡುಗಿ, ತಾರಸಿಯ ಮೇಲೆ ಬಾಡಿಗೆಗಿರುವ ಪಕ್ಕಾ ಹಳ್ಳಿಯ ಹುಡುಗ, ವಯಸ್ಸು ಇಪ್ಪತ್ತಾದರೂ ಓಣಿಯ ಮಕ್ಕಳ ಜೊತೆ ಕುಂಟಾ ಬಿಲ್ಲೆ ಆಡುವ ಲಂಗಾ ದಾವಣಿ ಹುಡುಗಿ, ಹೀಗೆ ಯಾರ ಪ್ರೀತಿ ಯಾರ ಕಡೆ ಹರಿಯುತ್ತಿರುತ್ತದೋ.....? ಎಷ್ಟು ಪ್ರೇಮಿಗಳು ಅವಳೆಡೆಗೆ/ಅವನೆಡೆಗೆ ಸಾಗಲು ಭಾವ ಸೇತುವೆಯನ್ನು ನಿರ್ಮಿಸಿ   ಈ ದಿನಕ್ಕಾಗಿ ಕಾಯುತ್ತಿದ್ದಾರೋ.....ಅವರೆಲ್ಲರಿಗೂ ಇದು ಹೃದಯ ಹೂಬಿಡುವ ಕಾಲ......

ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ
ನನ್ನ ಮನಸು ||
ಪ್ರೀತಿ ಎನ್ನುವುದು ಹೃದಯದಲ್ಲೊಂದು ಮಧುರವಾದ ಭಾವನೆಯನಗನು ಹುಟ್ಟಿಸಿಬಿಡುತ್ತೆ.. ಪ್ರೀತಿಸಿದವರನ್ನು ಒಂದು ಕ್ಷಣವೂ ಬಿಟ್ಟಿರದಂತೆ ಮಾಡಿ ಬಿಡುತ್ತೆ. ಯಾವಾಗ ನಮ್ಮೆದೆಯ ಗೂಡಿನಲ್ಲಿ ಬಂದು ಕೂಳಿತು ಇದು  ನನ್ನ ಮನೆ ಎಂದು ಬಿಡುತ್ತೋ ಗೊತ್ತೇ ಆಗುವುದಿಲ್ಲ . ಹೃದಯದ ನರಗಳನ್ನೆಲ್ಲಾ ಯಾರೋ ಜಗ್ಗಿ ಹಿಡಿದಂತೆ ಯಾತನೆ.... ಊಹೂಂ ಮಧುರವಾದ ಯಾತನೆ. ಆ ಯಾತನೆಗೊಂದು ಮಧುರತೆಯಿರುವುದರಿಂದಲೇ ಇರಬೇಕು ಇದು ಎಲ್ಲರ ಭಾವನೆಗಳನ್ನು Gಉತ್ಕೃಷ್ಟತೆಗೆ ಎಳೆದು ನಿಲ್ಲಿಸೋದು.

ಪ್ರೀತಿ ತಾಜಮಹಲ್ ಕಟ್ಟಿಸುತ್ತದೆ, ಪ್ರೀತಿ ತೇಲಾಡಿಸುತ್ತದೆ, ಪ್ರೀತಿ ಬಣ್ಣ ತೋರಿಸುತ್ತದೆ, ಪ್ರೀತಿ ಕನಸ ಕಾಣಿಸುತ್ತದೆ, ಪ್ರೀತಿ ಒಲವ ತೋರಿಸುತ್ತದೆ, ಪ್ರೀತಿ ಪ್ರಾಣ ನೀಡುತ್ತದೆ, ಪ್ರೀತಿ ಪಾತಕಗಳನ್ನು ಮಾಡಿಸುತ್ತದೆ. ಪ್ರೀತಿ ಪ್ರಾಣ ಬೇಡುತ್ತದೆ, ಉತ್ಕೃಷ್ಟರೆಯ ಪ್ರೀತಿ ಏನೇನೆಲ್ಲವನ್ನೂ ಮಾಡಿಸಿಬಿಡುತ್ತದೆ. ಪ್ರೀತಿಯಲ್ಲಿ ಒಂದಾದವರಿಂದ ಹಿಡಿದು ಪ್ರೀತಿಯಿಂದ ತಳ್ಳಲ್ಪಟ್ಟವರ ವರೆಗೆ ಪ್ರತಿಯೊಬ್ಬರೂ ಕೂಡಾ ಒಂದಿಲ್ಲೊಂದು ಸಲ ಕೇಳಿಕೊಂಡಿರುತ್ತಾರೆ.. “ಪ್ರೀತಿ ನೀ ಹೀಗೇಕೆ?”

ಕಷ್ಟ ಎನ್ನುವುದು ಎಲ್ಲದರಲ್ಲಿಯೂ ಇದೆ. ಪ್ರೀತಿಯಲ್ಲಿ ಕೂಡಾ...ಆದರೆ ಅದಕ್ಕಿಂತ ಹೆಚ್ಚು ಪ್ರೀತಿಯಲ್ಲಿ ಮಧುರತೆಯಿದೆ,ಒಲವಿದೆ, ಗೆಲುವಿದೆ, ಸುಖವಿದೆ, ಭಾವನೆಗಳಿವೆ, ಕನಸುಗಳಿವೆ, ಕಲ್ಲನ್ನೂ ಸಹ ಕರಗಿಸುವಂತಹ ಮೃದುತನವಿದೆ.

ಇಂದು ಪ್ರೇಮಿಗಳ ದಿನ. ಪ್ರೀತಿಯನ್ನು ಯಾಚಿಸಿ ಅದೆಷ್ಟು ಪ್ರೇಮ ಹೃದಯಗಳು ಮುಂದೆ ನಿಲ್ಲುತ್ತವೋ.... ನಿಮ್ಮ ಮುಂದೂ ನಿಲ್ಲಬಹುದು. ಇಷ್ಟವಿದ್ದರೆ ಒಪ್ಪಿಕೊಂಡು ಬಿಡಿ. ಬಿಂಕ ತೋರಿಸಬೇಡಿ. ಇಷ್ಟವಿಲ್ಲದಿದ್ದರೆ ಸಾರಿ ಅಂದುಬಿಡಿ.. reject  ಮಾಡಿದಾಗ ಬೇಸರ ಆಗೇ ಆಗುತ್ತದೆ ನಿಜ.... ಆದರೆ ಆದಷ್ಟು ಕಡಿಮೆ hurt ಆಗೋ ಹಾಗೆ ನಯವಾಗಿ reject  ಮಾಡಿ.. ಯಾವುದೇ ಕಾರಣಕ್ಕೂ ಪ್ರೀತಿ ಬೇಡಿ ಬಂದವರನ್ನ ಆಡ್ಕೋಬೇಡಿ. ಏಕೆಂದರೆ ನಿಮಗೇ ಗೊತ್ತಿಲ್ಲದೇನೇ ಅವರು ನಿಮಗೋಸ್ಕರ ಏನೇನೋ ಮಾಡಿರಬಹುದು.. ಬರವಣಿಗೆಯೇ ಗೊತ್ತಿಲ್ಲದಿದ್ರೂ ವಾರವಿಡೀ ಕೂತು ಚಂದವಾಗಿ ಅಕ್ಷರಗಳನ್ನು ಹೆಣೆದು ಎರಡು ಪೇಜ್ ಓಲೆ ಬರೆದಿರ್ತಾರೆ..... ಜೀವನದಲ್ಲಿ ಒಂದೇ ಒಂದು ಪದ್ಯ ಓದಿಲ್ದೇ ಇದ್ರೂ ನಿಮಗೋಸ್ಕರ ಒಂದು ಚಂದನೆಯ ಕವನ ಬರೆದಿರ್ತಾರೆ....  ನಿಮಗಿಷ್ಟವಿಲ್ಲಾಂತ ಸಿಗರೇಟ್ ಸೇದೋದನ್ನ ಬಿಟ್ಟಿರ್ತಾರೆ, ನಿಮಗಿಷ್ಟಾಂತ ಇನ್ ಶರ್ಟ ಮಾಡ್ತಿರ್ತಾರೆ,  ನಿಮಗೆ ದೇವರ ಮೇಲೆ ಭಕ್ತಿ ಜಾಸ್ತಿ ... s so ವರು ದೇವಸ್ಥಾನಕ್ಕೆ ಹೋಗೋದನ್ನ ರೂಢಿ ಮಾಡ್ಕೊಂಡಿರ್ತಾರೆ...

ಅವಳಾದರೂ ಹಾಗೇ...
ನಿಮಗಿಷ್ಟಾಂತ ಹಣೆಮೇಲೆ ಕುಂಕುಮ ಇಟ್ಕೊಳ್ಳೋದನ್ನ ರೂಢಿ ಮಾಡ್ಕೊಂಡಿರ್ತಾಳೆ, ನಿಮಗಿಷ್ಟವಿಲ್ಲಾಂತ ಜೀನ್ಸ್ì ಹಾಕೋದನ್ನ ಕಡಿಮೆ ಮಾಡಿರ್ತಾಳೆ, ನಿಮಗಿಷ್ಟಾಂತ ಹಾಡೋದನ್ನ ಕಲ್ತಿರ್ತಾಳೆ, ನಿಮಗಿಷ್ಟವಿಲ್ಲಾಂತ ಹುಡುಗರ ಜೊತೆ ಹರಟೆ ಹೊಡೆಯೋದನ್ನ ಕಡಿಮೆ ಮಾಡಿರ್ತಾಳೆ.. ಅವಳ ಇಷ್ಟಗಳನ್ನೆಷ್ಟೋ ನಿಮಗೋಸ್ಕರ 
sacrifice ಮಾಡ್ಕೊಂಡಿರ್ತಾಳೆ. ಇವೆಲ್ಲವೂ ಕೂಡಾ ಹುಚ್ಚು ಅಂತಾ ಅನ್ಸಬಹುದು.. ಆದರೆ ಅವರದೂ ಕೂಡಾ ಒಂದು ಹೃದಯ ತಾನೇ? ಆ ಹೃದಯದಲ್ಲಿ ನಿಮಗೋಸ್ಕರ ಒಂದು ತಾಜಮಹಲನ್ನು ಕಟ್ಟಿ ಅಲ್ಲಿ ದಿನವೂ ದೀಪ ಹಚ್ಚುತ್ತಿರಬಹುದು. ನಿಮಗೋಸ್ಕರ ಅವರು ಆ ಹೃದಯಕ್ಕೊಂದು ನಿಯತ್ತು ಕಲಿಸಿಕೊಟ್ಟಿರ್ತಾರೆ. ತಪ್ಪು ಎಷ್ಟೋ ಮಾಡಿರ್ಬಹುದು..... ನಿಮಗೋಸ್ಕರ ಶುದ್ಧರಾಗೋ ಪ್ರಾಮಾಣಿಕರಾಗೋ ಪ್ರಯತ್ನ ಮಾಡಿರ್ತಾರೆ. ಹೃದಯದಲ್ಲೊಂದು ಅರಮನೆಯನ್ನು ಕಟ್ಟಿ ಅಲ್ಲಿè ನಿಮ್ಮನ್ನು ರಾಣಿಯನ್ನಾಗಿಸಿಕೊಂಡಿರ್ತಾರೆ. ತಮ್ಮನ್ನು ರಾಜರ ಬದಲು ಸೇವಕರನ್ನಾಗಿ ಮಾಡಿಕೊಂಡಿರ್ತಾರೆ.  ನಿಮ್ಮೆದುರಿಗೆ ಬಾಗುತ್ತಿರುತ್ತಾರೆ.. ಪ್ರೀತಿಗೆ ಬಾಗಿಸುವ ಶಕ್ತಿಯಿದೆ… ಮತ್ತು ಅವರು ನಿಮ್ಮನ್ನು ಪ್ರೀತಿಸ್ತಿರ್ತಾರೆ.

Friends ನಿಮ್ಮ ಹೃದಯದಲ್ಲೂ ಪ್ರೇಮ ಮೂಡಿರ್ಬಹುದು.. ನಿಮ್ಮ ಕನಸುಗಳೂ ಕಮಾನು ಕಟ್ಟುತ್ತಿರಬಹುದು.. ಕನಸುಗಣ್ಣು ಕಾಮನ ಬಿಲ್ಲಿನ ಏಳು ಬಣ್ಣಗಳನ್ನು ಎಣಿಸಲಿಕ್ಕಾಗದೇ ಇರುವಷ್ಟು ಬಣ್ಣಗಳಿಂದ ತುಂಬಿರಬಹುದು.. ಓಡಿಸಲು ಸಾಧ್ಯವೇ ಇಲ್ಲ ಎನ್ನುವಷ್ಟುÖ ದಟ್ಟವಾದ ನಗು ಮುಖದಲ್ಲಿ ಮಂದಹಾಸ ಮೂಡಿಸಿರಬಹುದು.. ಮುಟ್ಟಿದರೆಲ್ಲಿè mark ಆಗಿಬಿಡುತ್ತೋ ಎನ್ನುವಷ್ಟು ಹೃದಯ ಮೃದುವಾಗಿರಬಹುದು.. ಭಾವನೆಗಳು ಒಸರುತ್ತಿರಬಹುದು.. ಅವನ/ಅವಳ ನೆನಪಾದಾಗಲೆಲ್ಲಾ ಹೃದಯ ರಚ್ಚೆ ಹಿಡಿಯುತ್ತಿರಬಹುದು..  ಹಾಗಿದ್ದರೆ ತಡಮಾಡಬೇಡಿ.. ಹೇಳಿಬಿಡಿ... ನನ್ ಹೃದಯ ಬೃಂದಾವನದಲ್ಲಿ ಅರಳೋ ಹೂಗಳೆಲ್ಲಾ ನಿನಗೋಸ್ಕರ ಅಂತಾ.
ಕೂಗಿ ಹೇಳಿಬಿಡಿ
                                           

    I LOVE U….

(Hello….  ನಂಗೂ ಹೇಳೋದಿದ್ರೆ ಹೇಳ್ಬಿಡಿ.. next time ಈ ಅವಕಾಶ ಸಿಗ್ಲಿಕ್ಕಿಲ್ಲಾ..
be brave.. think +++)


************************** ರಾಘವ್.

Friday, February 11, 2011

ಪೌರ್ಣಿಮೆಯ ಬೆಳದಿಂಗಳು........


ನೀಲ ಗಗನವು ತುಂಬಿ ತೂಳುಕಿದೆ
ಒಂದೆ ಒಂದು ದಿನ
ಬೆಳ್ಳಿ ಬೆಳದಿಂಗಳನು ಕಂಡು
ತಂಪು ತಂಪು ಮನ ||

ಹಾಲು ಬೆಳದಿಂಗಳಲಿ ಮಿಂದು
ಮರವಾಗಿದೆ ಬೆಳ್ಳಿ
ಅದಕಬ್ಬಲು ಹಾತೊರೆದಿದೆ
ಮನುಜನ ಮನ ಬಳ್ಳಿ ||

ಮೋಡಿ ಮಾಡುವ ನಿನ್ನ
ತಂಪು ಮನಸಿನ ಛಾಯೆ
ಹೃದಯ ಹೊಸ್ತಿಲ ಬಳಿಯ
ಮುಗ್ಧ ಮಾಯೆ ||

ಒಂದು ಹುಣ್ಣಿಮೆ ದಿನವೇ
ನೂರು ಮನಸನು ಹುಡುಕಿ
ಎರೆದಿರುವ ನಿನ್ನ ಭಾವನೆಗಳು
ಸ್ವಚ್ಛ ಪೌರ್ಣಿಮೆಯ ಬೆಳದಿಂಗಳು ||

************************** gÁWÀªï.

Monday, February 7, 2011

ಮನ್ಸಿಗ್ ಒಂದ್ ಹಾಯ್ ಅಂದ್ನೋಡಿ.......


            ಎಷ್ಟೋ ಬಾರಿ ಕಾರಣವೇ ಇಲ್ಲದೇ ಸಂತಸದ ವರತೆ ಹುಟ್ಟಿಬಿಡುತ್ತದೆ. ನಾವದಕ್ಕೆ ಮಾಡಿದ್ದು ಏನು ಅಂದರೆ ಏನೂ ಇರುವುದಿಲ್ಲ. ಹುಡುಕಿಕೊಂಡು ನಾವು ಹೋಗುವುದೂ ಇಲ್ಲ. ಹೇಳಿಕೊಂಡು ಅದು ಬರುವುದೂ ಇಲ್ಲ. ತನ್ನಿಂತಾನೇ ಎದುರಿಗೆ ನಿಂತು ಮುಖದಲ್ಲೊಂದು ಮಂದಹಾಸ ಮೂಡಿಸಿಬಿಡುತ್ತದೆ. ಅಂತಹ ಸಂತಸಗಳಲ್ಲಿ ನಾನು ತೂಂಬಾ ಖುಷಿಯನ್ನನುಭವಿಸಿದ್ದೇನೆ. ಈ ಮನಸ್ಸೆಂಬೋದೇ ತುಂಬಾ ವಿಚಿತ್ರ. ಅದು ಈವತ್ತು ನಾನು ಖುಷಿಯಾಗಿರಬೇಕು ಅಂತ deside ಮಾಡ್ಕೊಂಡ್ಬಿಟ್ರೆ ಏನೇ ಆದ್ರು ದುಃಖ ಪಡೋಲ್ಲಾ.... ಬೇಜಾರ್ ಮಾಡ್ಕೊಳ್ಳೊಲ್ಲಾ....  ರೇಗೋಲ್ಲಾ... ಏನೇ ಬಂದ್ರೂ just chill. ಅಂದ್ಕೊಂಡ್ಬಿಡುತ್ತೆ...  ಆದರೆ ಒಂದು ವಿಷಯ ಗೊತ್ತಾ....? ಅದಕ್ಕೂ ಕೂಡಾ ನಮ್ಮ support ಬೇಕಾಗುತ್ತೆ.  ಬೆಳ್ ಬೆಳಿಗ್ಗೇನೇ ಒಂದ್ ಬಾರಿ ನಾವು ನಮ್ ಮನ್ಸಿಗೆ ಒಂದು  gud morning  ಅಂದು ಕೈಕುಲುಕಿ ಬಿಟ್ರೆ ಸಾಕು..... ದಿಲ್ ಖುಷ್ ಆಗಿ ದಿನವನ್ನು ಓಡಿಸಿಬಿಡುತ್ತೆ.... ಆಡಿಸಿಬಿಡುತ್ತೆ....
            ಎಲ್ಲೋ ಅರಳುವ ಹೂವಿನ ಸುಮವನ್ನ... ಅಷ್ಟಷ್ಟಾಗಿ ಬಿರಿದು ಮೊಗ್ಗು ಹೂವಾಗುವ ಸೌಂದರ್ಯವನ್ನ....  ಯಾವುದೋ ಮರದ ತೆಕ್ಕೆಯಿಂದ ಕೇಳಿ ಬರುವ ಕೋಗಿಲೆಯ ದನಿಯನ್ನ.... ಬೆಳ್ಳಂಬೆಳಿಗ್ಗೆ ಭೂಮಿಗೆ ನಾಟುವ ಸೂರ್ಯನ ಕಿರಣದ ಕೆಂಪಿನ ಕನಲನ್ನ.... ಅದರಲ್ಲಿ ಮಿಂದು ಮಿಂಚಾಗಿ ಹೊಳೆಯುವ ಮಂಜಿನ ಮುತ್ತನ್ನ....  ಹಾರುವ ಹಕ್ಕಿಗಳ ಸಾಲನ್ನ... ಸಂಜೆ ಸೂರ್ಯನ ಕೆಂಪನ್ನ....ಹರಿಯುವ ನೀರನ್ನ... ಪಕ್ಕದಿಂದ ಸರಿದು ಹೋದ ನೀರೆಯ ಸೀರೆಯ ಸೆರಗಿನ ಗಾಳಿಯನ್ನೂ ಕೂಡಾ ನಿನಗಾಗಿಯೇ ತರಿಸಿದ್ದೇನೆ ಎನ್ನುವಷ್ಟು ಪ್ರೀತಿಯನ್ನ ನಮ್ಮ  ಮುಂದೆ ಹಿಡಿದು ನಿಂತು ಬಿಡುತ್ತದೆ ಈ ನಮ್ಮ ಮನಸ್ಸೆಂಬೋ ಮನಸ್ಸು.......
                         ಅದು ಅಷ್ಟೆಲ್ಲಾ ಸಂತಸವನ್ನು ಕಡೆದು ನಮ್ಮ ಮುಂದಿಡುವಾಗ ಬೆಳ್ ಬೆಳಿಗ್ಗೆ ಒಂದು gud morning ಅಂದು ಈ ದಿನ ಖುಷಿಯಾಗಿರ್ಲಿ ಅಂತ ನಮ್ ಮನ್ಸಿಗೆ ಹಾರೈಸಿ ಕಳಿಸೋದು ಕಷ್ಟಾನಾ?
ಬೆಳಿಗ್ಗೆ ಏಳ್ತೀವಿ ಜಾಗಿಂಗ್ ಮಾಡ್ತೀವಿ.... ಎಲ್ಲೋ ಇರೋ friends ಗಳಿಗೆ ಮನ್ಸಿದ್ದೋ ಇಲ್ದೇನೋ gud morning ಅಂತ forword ಮೆಸೇಜ್ ಹಾಕ್ತೀವಿ... ತಿಂಡಿ ಆಯ್ತು ಬೇಗ ಬರ್ಬಾರ್ದಾ ಅಂತ ಅಮ್ಮ ಕರೆದು ಕರೆದು .ಸುಸ್ತಾಗಬೇಕು, ಆಮೇಲೆ ಹೋಗೋ ರೂಢಿ ಮಾಡ್ಕೊಂಡಿರ್ತೀವಿ... ಸ್ವಲ್ಪ ಹೊತ್ತು ತಂಗಿ ಜೊತೆ ಜಗಳ... ಅವಳ ಸ್ಕೂಲ್ ಬ್ಯಾಗನ್ನ ಎಲ್ಲೋ ಅಡಗಿಸಿಟ್ಟು ಕಾಡ್ಸ್ತಿರ್ತೀವಿ... ಒಂದ್ ಸ್ವಲ್ಪ ಹೊತ್ತು ಪಕ್ಕದ್ಮನೆ ಹುಡ್ಗಾನೋ ಹುಡ್ಗೀನೋ ಕಾಲೇಜ್ ಗೆ ಹೋಗೋದನ್ನ ನೋಡೋ ರೂಢಿ ಇಟ್ಕೊಂಡಿರ್ತೀವಿ.... ಇಂಥಾದ್ದೇ ಅಂತ ಅಲ್ಲಾ.... ಒಟ್ಟಿನಲ್ಲಿ ನಮ್ಮ ಏನೇನೋ ಯದ್ವಾ ತದ್ವಾ ದಿನಚರಿಗಳು....... ದಿನಾಲೂ ಅವು ರಿಪೀಟ್ ಆಗ್ತಾನೇ ಇರುತ್ವೆ.... ಇವುಗಳ ಜೊತೆಗೆ ನಿಮ್ ಮನ್ಸಿಗೆ ನೀವು ಒಂದ್ ಹಾಯ್ ಅನ್ನೋ ರೂಢಿ ಮಾಡ್ಕೊಂಡ್ ನೋಡಿ... ಅದರ ಜೊತೆ ಮಾತಾಡಿ... ಯಾವುದೇ ಕೆಟ್ ಕೆಲ್ಸಾ ಮಾಡಲ್ಲಾ.. ಕೆಟ್ ಮಾತ್ ಆಡಲ್ಲಾ ಅಂತ ಹೇಳ್ಕೋಳಿ... ಇವತ್ತು ನಾನು ಯಾರಿಗೂ ರೇಗೋದಿಲ್ಲ .. ಯಾರಿಗೂ ಬೇಜಾರ್ ಮಾಡೋದಿಲ್ಲಾ ಅಂತ ನಿಮ್ಮನ್ಸಿಗೇ
ನೀವು promise ಮಾಡಿ.. ಹಾಗೇ ಈ ಮಾತಿಗೆಲ್ಲಾ ನೀವು ಒಂದ್ ಬಾರಿ commit ಆಗಿ.. ಆಗ ನೋಡಿ..... ದಿನ ಅನ್ನೋದು ಎಷ್ಟ್ ಖುಷ್ ಖುಷಿಯಾಗಿ ನಮ್ ಮೊಂದೆ ನಿಲ್ಲುತ್ತೆ ಅಂತಾ..

  ಖುಷಿ ಅನ್ನೋದು ಯಾರೊ ನಮಗೆ ತಂದು ಕೊಡೋದಲ್ಲಾ..... ನಮ್ಮಲ್ಲಿ ನಾವು ಕಂಡುಕೊಳ್ಳೋದು.... ನಾವು ಸಂತೋಷವಾಗಿರೋದು ಇನ್ಯಾರದೋ ಕೈಲಿ ಹೇಗಿರುತ್ತೆ. ನಾವಿರೋ ವಾತಾವರಣವನ್ನು ಸಂತೋಷಕರವಾಗಿಡೋದು ನಮ್ಮದೇ ಜವಾಬ್ದಾರಿ... ನಮ್ ಗ್ರೂಪ್ ನಲ್ಲೊಂದು ಅಪರೂಪದ friend ಇದಾನೆ.... ವತ್ಸ ಅಂತ ಅವನಿಂದ ಸಾಕಷ್ಟು ಕಲ್ತಿದ್ದೇನೆ. ಅವನು ಯಾವಾಗ್ಲೂ ಖುಷಿಯಾಗಿರ್ತಾನೆ.... ಅವನು ಎಲ್ಲಾದ್ರೂ entry ಕೊಟ್ಟಾ ಅಂತಂದ್ರೆ ಅವನು ಬರೊಕ್ಕಿಂತ ಮುಂಚೆ ಅವನ ನಗು ಬಂದಿರುತ್ತೆ ಆ ಮನೆಗೆ..... ಅವನಿರೋವಲ್ಲಿ ಸಂತೋಷ ಮಾತ್ರ  ಇರುತ್ತೆ. ಅವನಿರೋ ವಲಯವನ್ನು ಅವನು ಸಂತೋಷವಾಗಿರಿಸ್ತಾನೆ...... ಅವನಿಂದ ನಾನೂ ಸ್ವಲ್ಪ ಮಟ್ಟಿಗೆ ಕಲ್ಕ್ತೊಂಡಿದೀನಿ......  ಸ್ವಲ್ಪ ಅಷ್ಟೇ........ ನಮ್ ನಮ್ ನಡುವೇನೇ ಕಲಿಯೋದ್ ಎಷ್ಟೊಂದಿರುತ್ತಲ್ವಾ? friends ನೀವೂ try ಮಾಡಿ........ ನಾನೂ ಜೊತೆಗಿದೀನಿ......  ಸಂತೋಷಾನಾ ಹಂಚಿಬಿಡಿ... ಸಂತೋಷ ನಮ್ ಸುತ್ತಾನೇ ಇದ್ರೆ ಎಷ್ಟ್ ಚೆನ್ನ ಅಲ್ವಾ.......
ಜೀವನಕ್ಕೆ ನಗುವ ಗಂಧವಿರಲಿ..

ಖುಷಿಯಾಗಿ ಹರಗಿಬಿಡು
ನಿನ್ನೆಲ್ಲ ಸಂತಸವ
ರವಿ ಜಗಕೆ ಹರಡಿರುವ
ಕಿರಣದಂತೆ...
ಒಲವಲ್ಲಿ ಬಾಗಿಬಿಡು
ಎಲ್ಲರೆದುರಿಗೆ ನೀನು
ಅಳಿಸಿಬಿಡು ತಾನೆಂಬೊ
ಅಹಂನ ಚಿಂತೆ||

ಬರಲೇ ಸ್ನೇಹಿಗಳೇ...?
ಅನಿಸಿಕೆಗಳು ಜನ್ಮ ತಳೆದಾಗಲೆಲ್ಲ ಬರ್ತೇನೆ....