ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Monday, August 1, 2011

ನೀನೆನ್ನ ಜೀವಜಲ........


ನಿನ್ನೊಲುಮೆ ಹೇಗಿದೆಯೋ  ಹಾಗೇ ನನ್ನ ಮನಸ್ಸೂ ಕೂಡಾ ಇರಲಿ ಎಂದು ಬೇಡಿಕೊಳ್ಳುವಂತಹ ಪುಟ್ಟ ನಿಸ್ವಾರ್ಥ ಸ್ವಾರ್ಥಿ ನಾನು...

ದೇವಸ್ಥಾನಕ್ಕೆ ಹೋಗಿ ದೇವರ ಮುಂದೆ ನಿಂತು ಕೈ ಮುಗಿಯುವಾಗ ಆ ದೇವರ  ಶಿರದಿಂದ ಒಂದು ಹೂವಿನ ಎಸಳು ಬಿದ್ದರೂ ಸಾಕು.. ಅದು ದೇವರು ನೀ ನನಗೆ ಸಿಗುವಂತೆ ಕೊಟ್ಟ ಪ್ರಸಾದ ಎಂದು ಜತನದಿಂದ ಎತ್ತಿಟ್ಟುಕೊಳ್ಳುವಂತಹ ಮುಗ್ಧ ನಾನು.....

ನೀನು ಹಾಡುವಾಗ ನಾನು ನುಡಿಸಬೇಕೆಂಬಾಸೆ.. ನಮ್ಮಿಬ್ಬರ ನಡುವೆ ಹಾಡು ಝರಿಯಾಗಿ ಹರಿದು ಪುಟಿದು ಚಿಮ್ಮುವ ಕಾರಂಜಿಯನ್ನ ನಿನಗೆ ಕಣ್ತುಂಬ ತೋರಿಸುವಾಸೆ.. ಆಗ ನಿನ್ನ ಕಣ್ಣಲ್ಲಿ ಚಿಮ್ಮುತ್ತದಲ್ಲಾ ಆ ಸಂತಸದ ಕಾರಂಜಿಯನ್ನು ನೋಡಿ ನಲಿಯುವಾಸೆ ನನಗೆ...

ಕೈ ಕೈ ಹಿಡಿದು ಹಸಿರು ಗುಡ್ಡದ ಮೇಲೆ ಸುತ್ತುತ್ತಾ ಮನಸ್ಸಿನ ಭಾವನೆಗಳನ್ನೆಲ್ಲಾ ನಮ್ಮ ಮಧ್ಯೆ ಹರವಿಕೊಂಡು ಮಾತಾಡುತ್ತಾ ಮಾತಾಡುತ್ತಾ Û ಮಾತಿನಲ್ಲೇ ಕಳೆದು ಹೋಗುವಾಸೆ...

ಹೀಗೆ ನೀನು ದಿನವೆಲ್ಲ  ನಾನು ಸುತ್ತಿಸಿದ ಆಶ್ಚರ್ಯದ ಸಂತೆಯನ್ನು ಸುತ್ತಿ ಸುತ್ತಿ ಸುಸ್ತಾಗಿ ಬಂದು ಸುಸ್ತಾಯಿತೆಂದು ಮಲಗುತ್ತೀಯಲ್ಲಾ.. ಆಗ ಮೆಲುದನಿಯಲ್ಲಿ ಜೋಗುಳವನ್ನು ಹಾಡಿ  ಮಲಗಿಸುವಾಸೆ.. ಆ ಸುಖ ನಿದ್ದೆಯ ಕನಸಿನಲ್ಲೆಲ್ಲಾ ನಾನೇ ಓಡಾಡಬೇಕೆಂಬ ಸ್ವಾರ್ಥ ಕೂಡಾ.

ಸಮುದ್ರದ ದಂಡೆಯ ಮೇಲೆ ಆಕಾಶಕ್ಕೆ ಮುಖ ಮಾಡಿ ಮಲಗಿ ಹೊಂಚು ಹಾಕಿ ನಾವು ನಮ್ಮ ನಮ್ಮಲ್ಲೇ ಕಸಿದುಕೊಂಡ ಸ್ನೇಹದ ಪರಮಾಪ್ತತೆಯ ಕಳ್ಳತನವನ್ನು ಮತ್ತೆ ಮತ್ತೆ ಹೇಳಿಕೊಂಡು ನಗುವಾಸೆ.......

ಚಳಿಗಾಲದ  ಮಧ್ಯರಾತ್ರಿಯ ದಟ್ಟ ಚಳಿಯಲ್ಲಿ  ನಿನಗೊಂದು Ice-cream ತಿನ್ನಿಸಿ  ನೀನು ಚಳಿಯಿಂದ ನಡುಗುತ್ತಿದ್ದಾಗ ಗಟ್ಟಿಯಾಗಿ ನಿನ್ನ ಬೆಚ್ಚಗೆ ತಬ್ಬಿಕೊಳ್ಳಬೇಕಿದೆ ನನಗೆ....

ಇದೆಂತಹ ಆಸೆ ನಿನ್ನದು ಅನ್ನಬೇಡ.... ನನ್ನ ಬೆನ್ನ ಮೇಲೆ ಹತ್ತಿ ಕುಳಿತು ಹತ್ತು ಡಿಪ್ಸ್ ಹೊಡೆಸಬೇಕೆಂಬ ನಿನ್ನ ಆಸೆಗಿಂತ ಇದೇನು ದೊಡ್ಡದಲ್ಲ ....

ನೀನು ನನ್ನ ಕನವರಿಸಿದಾಗಲೆಲ್ಲಾ ಬಣ್ಣದ ದುಂಬಿಯಾಗಿ ಬಂದು ನೆನಪುಗಳ ಮೂಟೆ ಬೆನ್ನ ಮೇಲೆ ಹೊತ್ತು ತಂದು ನಿನ್ನ ಕಣ್ಣ ಕೊನೆಯಂಚಿನಲ್ಲಿ ನನ್ನ ಪ್ರತೀ ನೆನಪನ್ನೂ ಕೂಡಾ ನಿನ್ನ ಕನಸಿನ ಜೀವಂತಿಕೆಯನ್ನಾಗಿಸಬೇಕೆಂಬಾಸೆ......

ನಿನಗೆ ನಾನೇನೇನು ಆಗಬಲ್ಲೆನೋ ಅದೆಲ್ಲವೂ ನಾನಾಗುವೆ.... ಆಸೆ ಇದೆ ನನಗೆ...
ನೀನು ನನಗೇನೂ ಆಗಬೇಕೆಂಬುದಿಲ್ಲ.....
ನೀನು ನನ್ನೆದೆಯ ಜೀವ ಜಲ... ಅಷ್ಟು ಸಾಕು ನನಗೆ...

ನನ್ನವಳು ನೀ ನನ್ನಾಕೆ
ಹರಿಯುವ ನದಿಯಲ್ಲಾ....
ಸರಿವ ಸರಿತೆಯಲ್ಲಾ....
ನೀನೊಂದು ಪುಟ್ಟ ಕೊಳ...
ನನ್ನ ಬಾಳಿನ ಜೀವ ಜಲ....

********************ರಾಘವ್.
(ಫೋಟೋ ನೀಡಿದವರು.... ಸೌಮ್ಯಾ ಭಾಗ್ವತ್)

13 comments:

  1. ಚೊಲೋ ಬರ್ದೆ... ಹೀಗೆ ನೀನು ದಿನವೆಲ್ಲ ನಾನು ಸುತ್ತಿಸಿದ ಜೋಗುಳವನ್ನು ಹಾಡಿ ಮಲಗಿಸುವಾಸೆ.. ಸೂಪರ್...

    ReplyDelete
  2. oho.. great.. article man.. Only Rhagav Can dream this type dream.. She (who is in love with u) is lucky to have u...

    ReplyDelete
  3. ಕಾವ್ಯಾ ನಿಮ್ಗೆ ಓದಿ ಖುಷಿಯಾದ್ರೆ ನಂಗೂ ಖುಷಿ.....
    ಧನ್ಯವಾದ ಕಣ್ರೀ.....

    ನೋಡು ಇಲ್ಲಿ ಹಿಂಗೆಲ್ಲಾ ಬರೀತೆ ಅಲ್ಲಿ ಹೆಂಡ್ತಿ ಹತ್ರ ಜಗ್ಳಾ ಹೊಡೀತೆ....
    ಹ್ಹ ಹ್ಹ ಹ್ಹಾ.....

    ********

    ಹೇಯ್ ಕಮಲ್....
    thanks ಪಾ......
    ಹಿಂಗೇ ಓದ್ತಾ ಇರು........

    *********

    ReplyDelete
  4. ಓಹ್!! ಎಂಥ ಮಧುರ ಭಾವನೆಗಳು...ನಲ್ಮೆಯ ನಲ್ಲೆ ಬಗೆಗಿನ ಪ್ರೀತಿ ಅಮೃತ ಧಾರೆಯಾಗಿ ಜಿನುಗುತ್ತಿದೆ..ಹೀಗೆ ಚಿರನೂತನವಾಗಿರಲಿ..

    ReplyDelete
  5. @ nsru.
    ಹೂಂ.... ನನ್ನ ಕನಸೂ ಅದೇ......
    ಇರುತ್ತೆ ಬಿಡಿ......
    ನಿಮ್ಮ ಹಾರೈಕೆಗೆ ಧನ್ಯವಾದಗಳು......
    ಪ್ರೋತ್ಸಾಹ ಸದಾ ಬೇಕು.......
    ************************

    ReplyDelete
  6. chennaagide lekhana
    munduvaresi.abhinandanegalu.

    ReplyDelete
  7. @ ಕಲರವ

    ಧನ್ಯವಾದಗಳು.....

    ಹಾಗೇ ನನ್ನ ಬ್ಲಾಗಿಗೆ ಸ್ವಾಗತ ಕೂಡಾ.......

    ನೀವು ಮತ್ತೆ ಮತ್ತೆ ಬರ್ಬೇಕು..... ಓದ್ತಾ ಇರ್ಬೇಕು.....

    ReplyDelete
  8. ವಾವ್..ನನ್ನದು ಕನಸು ಕಂಗಳ ತುಂಬಾ ಅನ್ನೋ ಬ್ಲಾಗ್ ..ನಿಮ್ಮದು ಕನಸು ಕಂಗಳ ಹುಡುಗಾ ಅನ್ನೋ ಬ್ಲಾಗ್...ಒಂಥರಾ same to same...
    ಈ ಲೇಖನ ತುಂಬಾ ಇಷ್ಟ ಆಯಿತು...ಸ್ವಾರ್ಥಿ ಎಂದು ಹೇಳಹೆಳುತ್ತಲೇ.. ಪ್ರೀತಿ ಅನ್ನೋದನ್ನ ನಿಸ್ವಾರ್ಥವಾಗಿ ಚಿತ್ರಿಸಿದ್ದಿರಿ..
    "ನೀನು ನನಗೇನೂ ಆಗಬೇಕೆಂಬುದಿಲ್ಲ.....ನೀನು ನನ್ನೆದೆಯ ಜೀವ ಜಲ... ಅಷ್ಟು ಸಾಕು ನನಗೆ..."
    ಈ ಸಾಲು ತುಂಬಾ ಇಷ್ಟ ಆಯಿತು...
    ಅಂದ ಹಾಗೆ ಕನಸು ಕಂಗಳ ಹುಡುಗನ ನಾಮಧೇಯ ತಿಳಿಯಲಿಲ್ಲ...
    .

    ReplyDelete
  9. ಸುಷ್ಮಾ ಅವರೇ,,.....
    ಚನ್ನಾಗಂದ್ರಿ......
    ಇಷ್ಟಪಟ್ಟಿದ್ದಕ್ಕೆ ಖುಷಿಯಾಯ್ತು.......
    ರಾಘವ್ ಭಟ್ ಅಂತಾ ನನ್ ಹೆಸರು.......
    ಹೀಗೇ ಬರ್ತಾ ಇರಿ.... ಓದ್ತಾ ಇರಿ........
    once again..
    ಧನ್ಯವಾದ.........

    ReplyDelete
  10. ಚಂದ ಸಾಲುಗಳು... ತುಂಬಾ ಇಷ್ಟ ಆಯ್ತು...

    ReplyDelete
  11. ಇಷ್ಟಪಟ್ಟಿದ್ದಕ್ಕೆ..... ಧನ್ಯವಾದಗಳು.....

    ನನ್ blog ನ ಮನೆಗೆ ತಾವು ಹೊಸ ಅತಿಥಿ...

    ಖುಷಿಯಾಗಿದೆ ನನಗೆ.

    ReplyDelete
  12. ಬಹಳ ಅಂದವಾದ ಅಸೆಯಿದ್ದು
    ಈ ಕನಸು ಕಂಗಳ ಹುಡುಗಂಗೆ..
    ಚಂದವಾಗಿ ಬರದ್ದೆ...

    ReplyDelete
    Replies
    1. ಆಸೆಯೂ ಅಂದವಾಗಿರದಿದ್ದರೇನು ಬಂತು ಅಲ್ದಾ....
      ಾಸೆಗಳು ಯಾವತ್ತೂ ಹಾರಾಡ್ತಾ ಇರವು...

      ಧನ್ಯವಾದ..............

      Delete