ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Tuesday, March 15, 2011

ಕಲೆ ಕೊಟ್ಟ ಶಿಲ್ಪಿಗೆ....


ಶಿಲ್ಪಿ ನಿನ್ನಾಟ
ರಸಿಕಮನಕೂಟ
ಶಿಲೆಯಲ್ಲ ಕಲೆಯಾಗಿ
ಹಬ್ಬುತಿಹುದು |


 

ಕೈ ಕುಣಿತದೊಂದಿಗೆ
ಕಲ್ಲಿಗಿಡೊ ಚಾಣ
ಶಿಲೆಯೊಳಗೆ ರಸಿಕತೆಯ
ತೆರೆದಿಡುವ ಜಾಣ |



ಎಷ್ಟು ಜ್ಞಾತರು
ನಶಿಸಿದರು ಇಲ್ಲಿ
ಕೊಟ್ಟ ಕಲೆಮಾತ್ರ
ಉಳಿದಿಹುದು ಶಿಲೆಯಲ್ಲಿ |

ಶಿಲೆಯೆಲ್ಲ ಶಿಲೆಯಾಗಿ
ಉಳಿದಿಲ್ಲ ನೋಡು
ಶಿಲೆಯರಳಿ ಕಲೆಯಾಗಿ
ಹಂಪೆ ಹಳೆಬೀಡು |



ಮತ್ತೊಮ್ಮೆ ಬಾ ಜಗಕೆ
ಕಲೆಯ ಒಡಲೊಳಗಿಟ್ಟು
ಕರೆಯುತಿರುವೆನು ಶಿಲ್ಪಿ
ಕುಂಭ ಸ್ವಾಗತ ಕೊಟ್ಟು |

******************** ರಾಘವ್.
[ಈಗರು ವರ್ಷಗಳ ಹಿಂಹೆ ಹಂಪೆ ಹಳೆಬೀಡಿಗೆ ಹೋದಾಗ ಏನೋ ನ್ಸಿದ್ದನ್ನ ಬರ್ದುಬಿಟ್ಟಿದ್ದೆ. ಒಂದಕ್ಷರಾನೂ ಹಿಂದೆ ಮುಂದೆ ಮಾಡದೇ ಈಗ ನಿಮ್ ಮುಂದೆ ಇಟ್ಟಿದೀನಿ..
(ಹೊಸ ಸೀಸೆ ಹಳೆ ಮದ್ಯ)]




Friday, March 11, 2011

ನಿರ್ದಯಿ ಸಾಗರದ ಸ್ವಾರ್ಥ ಬಯಕೆ...


ಸಮುದ್ರದ ಪ್ರೀತಿ ಉಕ್ಕಿಬಿಟ್ಟಿದೆ ಇಂದು…

ಈ ಸಮುದ್ರಕ್ಯಾಕೋ ಚಂದ್ರನ ಮೇಲೆ ಈ ಪರಿ ವ್ಯಾಮೋಹ? ಅದೆಷ್ಟು ಕಾಲ ಈ ಸಮುದ್ರವು ಉಕ್ಕಿ ಬರುವ ಪ್ರೀತಿಗೆ ಹೋಲಿಕೆಯಾಗಿತ್ತೋ… ಹುಣ್ಣಿಮೆಯ ಚಂದ್ರನ ನೋಡಿ ಉಕ್ಕಿ ಬರುವ ಸಾಗರದಂತೆ ಎಂದು ಅದೆಷ್ಟು ಕವಿಗಳು ವಣಿðಸಿದ್ದರೋ…?  ಅವುಗಳನ್ನೆಲ್ಲವನ್ನೂ ನಿಜ ಮಾಡಲೆಂಬಂತೆ ಉಕ್ಕಿಬಿಟ್ಟಿದೆ ಇಂದು….

       ಈ ಸಾಗರದ ದಡದಲ್ಲಿ ಕನಸು ಕಟ್ಟಿದವರೆಷ್ಟು ಮಂದಿಯೋ…. ಸಾಗರದ ದಡದಲ್ಲೊಂದು ಮನೆ ಮಾಡಬೇಕು… ಏರೇರಿ ಬರುವ ತೆರೆಗಳನ್ನು ನೋಡ್ತಾ ಇರಬೇಕು…. ಸಮುದ್ರದ ಮೊರೆತ ಕಿವಿಯ ಮೇಲೆ ಯಾವಾಗಲೂ ಕೇಳ್ತಿರಬೇಕು…… ಕಣ್ಣ ತುಂಬೆಲ್ಲಾ ಸಮುದ್ರವೇ ಹರಡಿರಬೇಕು…. ಹುಣ್ಣಿಮೆಯ ರಾತ್ರಿ ಮರಳ ದಡದ ಮೇಲೆ ಕುಳಿತು ಚಂದ್ರನಿಗಾಗಿ ಉಕ್ಕುಕ್ಕಿ ಬರುವ ಸಮುದ್ರವನ್ನು ನೋಡ್ತಾ ಆನಂದ ಪಡಬೇಕು ಅಂದುಕೊಂಡು ಸಾಗರದ ದಡದ ಮೇಲೆ ಅದೆಷ್ಟು ಸಾವಿರ ಸಾವಿರ ಮಂದಿ ಬೀಡು ಬಿಟ್ಟಿದ್ದರೋ……..  ಕೊನೆಗೂ ಸಮುದ್ರವು ತನ್ನ ಪ್ರೀತಿಯ ಕಟ್ಟೆ ಒಡೆದೇ ಬಿಟ್ಟಿತಲ್ಲಾ….

        ಇಷ್ಟು ವಷðಗಳ ಕಾಲ ಕೈಗೆ ಸಿಗದ ಚಂದಿರನಿಗಾಗಿ ಉಕ್ಕಿ ಉಕ್ಕಿ ಸುಸ್ತಾಗಿ ಬೇಸತ್ತು ಬಿಟ್ಟಿತ್ತೇನೋ….. ಭೂಮಿಗೆ ಚಂದ್ರ ಹತ್ತಿರವಾಗೋ ದಿನಕ್ಕಾಗಿ ಆ ಸಾಗರವೂ ಕಾಯುತ್ತಿದ್ದಿರಬೇಕು…. ಹತ್ತಿರವಾಗಿಯೇ ಬಿಟ್ಟಿತಲ್ಲಾ…. ಕೊನೆಯ ಬಾರಿಯ ಪ್ರಯತ್ನಕ್ಕೊಂದು ಮುನ್ನಾ ತಯಾರಿಯ ರೀತಿಯಲ್ಲಿ… ಚಂದಿರನ ಹೆಗಲೇರಿ  ಕುಂತುಬಿಡುವ ಆಸೆಯಲ್ಲಿ ಉಕ್ಕಿ ಬಿಟ್ಟಿತಲ್ಲಾ… ಎರಡು ಕೋಟಿ ಜೀವಗಳನ್ನು ತೆಕ್ಕೆಯಲ್ಲಿ ಉಸಿರುಗಟ್ಟಿಸಿಯಾದರೂ ಸರಿ ಚಂದ್ರನ ಸೇರಲೇ ಬೇಕೆಂಬ ಸಾಗರದ ನಿದðಯೀ ಸ್ವಾಥð ಪ್ರೀತಿಯಾ ಇದು?

        ಹೌದು ಇದೇ ಬರುವ ಹುಣ್ಣಿಮೆಗೆ ತಾನೇ ಭೂಮಿಗೆ ಚಂದ್ರನು ಅತೀ ಸಮೀಪದಲ್ಲಿ ಬರೋದು… ಹದಿನೆಂಟಕ್ಕೆ ಹುಣ್ಣಿಮೆ ಈವತ್ತಿನ್ನೂ ಹನ್ನೊಂದು….. ಮುನ್ನಾ ತಯಾರಿಯಾಗಿಯೇ ಲಕ್ಷಾಂತರ  ಜನರನ್ನು ಒಂದಿಡೀ ದೇಶವನ್ನು ಬಲಿತೆಗೆದುಕೊಂಡ  ಮೇಲಾದರೂ ಹಸಿದ ಬಿಸಿ ತಣಿದಿದೆಯೋ ಏನೋ…. ಸಾಗರದ ಒಡಲಿನ ಹಸಿವಿನ ಬಿಸಿ ಇಷ್ಟಾಗಿಯೂ ಆರದಿದ್ದರೆ ಹದಿನೆಂಟರೊಳಗೆ ಇನ್ನೆಷ್ಟು ಜೀವಗಳ ಬಲಿಯಿದೆಯೋ… ಹಾಗಾಗದಿರಲಿ….

             ಭೂಮಿ ನುಂಗುವ ಬಯಕೆ ನಿನಗೂ ಶುರುವಾಯಿತಾ?...
              ಪದೇ ಪದೇ ಜಪಾನಿನ ಮೇಲೇ ಕಣ್ಣು...

  ಮನೆಗಳೆಂದರೆ ಜನಗಳೆಂದರೆ ಜೀವವಿಲ್ಲದ ಕಲ್ಲಿದ್ದಲ್ಲಿನಂತೆ ಸುಟ್ಟು ಕರಕಲಾಗಿಬಿಟ್ಟವು.
   ಅಣು ಬಾಂಬ್ ನ ಮೊದಲ ಅನುಭವದಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಆಘಾತ.
                           ನಗರದ ತುಂಬೆಲ್ಲಾ ಕರಾಳ ಮೌನ.
ಅಣು ಅಣುವಿನಲ್ಲೂ ಅಪಾಯ ತುಂಬಿರುವ ಅಣು ಸ್ಥಾವರಕ್ಕೇ ಬೆಂಕಿ
ಜಪಾನ್  ಶ್ರಮಜೀವಿಗಳ ದೇಶ. ಹಿಂದೊಂದು ಯುದ್ಧದ ಸಮಯದಲ್ಲಿ ಪೂರ್ತಿ ನೆಲಸಮವಾದ ದೇಶ ಎಷ್ಟು ಬೇಗ ಎದ್ದು  ನಿಂತಿತ್ತು... ಏಳುವಷ್ಟರಲ್ಲಿ ಬೀಳಲಿಕ್ಕಾಯಿತು. ಮತ್ತಂತಹುದೇ ದುರಂತ...
ನಿರುಪದ್ರವೀ ದೇಶಕ್ಕೆ ಪ್ರಪಂಚದ ಎರಡನೇ ಬಲಿಷ್ಟ ದೇಶಕ್ಕೆ  ತಾನಾಯಿತು ತನ್ನ ಕೆಲಸವಾಯಿತು ಅಂತ ಇದ್ದ  ಈ ದೇಶಕ್ಕೆ  ಒದಗಿದ ಈ ಆಘಾತ ನಿಜಕ್ಕೂ ವಿಷಾದನೀಯ.
                     ದೇಶವೆಲ್ಲಾ ಕಸದ ತೊಟ್ಟಿಯಾಯಿತಲ್ಲಾ...
                                ನೆಲವೆಲ್ಲ ಮುಳುಗಿ ನೆನಪೊಂದುಳಿಯಿತಾ?


                ಕುಂಬಾರನಿಗೆ ವರುಷ.. ದೊಣ್ಣೆಗೆ ನಿಮಿಷ.

                    ಎಷ್ಟು ಭಯಂಕರ ಇರಬೇಕಲ್ವಾ.....
          
   ಪ್ರಳಯದ ಕಲ್ಪನೆ ನಿಜವಾಗುತ್ತಿದೆಯಾ........ ಕಣ್ಣಾರೆ ಕಂಡ ಮೇಲೆ ಏನನ್ನೋಣ....

Saturday, March 5, 2011

ಆಲಿಸುವ ಕಲೆಯಾ ಕಲಿಯೋಣ ಗೆಳೆಯಾ.........



ಕೇಳಲು ಕಲಿಯುವಾ ಗೆಳೆಯಾ
ನುಡಿಯುವ ಮುನ್ನ
ನುಡಿಯ ಕೇಳುವ ಕಲೆಯಾ
ಕಲಿತರೆ ಚನ್ನ......

ಇತರರು ಮಾತಾಡೋದನ್ನ ಸಂಯಮದಿಂದ ಕೇಳೋದೂ ಒಂದು ಕಲೆ. ಆಲಿಸುವುದು ಅಂದರೆ ಕೇವಲ ಒಬ್ಬರು ಹೇಳೋದನ್ನ ಸಂಯಮದಿಂದ ಕೇಳೋದಷ್ಟೇ ಅಲ್ಲ... ಕೇಳುವುದರ ಜೊತೆಗೆ ಅವರ  ಧ್ವನಿಯ ಏರಿಳತ, ಮುಖದ ಮುದ್ರೆ, ತುಟಿಗಳ ಚಲನ ವಲನ,  ನೋಟ ಅಂಗಚೇಷ್ಟೆ ಮೊದಲಾದ ಪ್ರತಿಯೊಂದು ಸಣ್ಣ ಪುಟ್ಟ ಸಂವಹನ  ಪ್ರಕ್ರಿಯೆಯನ್ನು ಗ್ರಹಿಸುವುದು. ಆಲಿಸುವಿಕೆಗೆ ಇರುವ ಶಕ್ತಿ ಸಾಮಥ್ಯð ಅಪಾರವಾದುದು. ಅದರಷ್ಟು ಪ್ರೀತಿ ಪೂಣð ಸಂವಹನ ಬೇರೊಂದಿಲ್ಲ.
ಅದಕ್ಕೆ ನಾವೆಲ್ಲಾ ಕೇಳುವ ಕಲೆಯನ್ನೂ ಕಲಿತ್ರೆ ಚನ್ನ ಅಲ್ವಾ..

ಇತರರು ಹೇಳೋದನ್ನ  ಪೂರ್ಣವಾಗಿ ಕೇಳಿಸಿಕೊಂಡು ಸಮಗೃವಾಗಿ ಗೃಹಿಸುವುದೂ ಒಂದು ಕಲೆ. ಇದು ಮನಸ್ಸಿನ ಆರೋಗ್ಯಕ್ಕೆ ಅವಶ್ಯ. ಕೇಳುವ ಕಲೆಯನ್ನು ಕರಗತ ಮಾಡಿಕೊಂಡು  ನಿತ್ಯ ಜೀವನದಲ್ಲಿ ಅಳವಡಿಸಿಕೊಂಡವರು ತೀರ ಕಡಿಮೆ. ಇತ್ತೀಚಿನ ದಿನಗಳಲ್ಲಿ ಬೇರೆಯವರು ಏನು ಹೇಳುತ್ತಾರೆಂದು ಕೇಳುವ ತಾಳ್ಮೆ, ಸಹನೆ ಯಾರಿಗೂ ಇಲ್ಲಾ.. ಕೆಲವೊಮ್ಮೆ ನಾವು ಇತರರ ಮಾತನ್ನು ಗಮನವಿಟ್ಟು ಕೇಳುತ್ತಿದ್ದೇವೆಂದು ಭ್ರಮಿಸುತ್ತಿರುತ್ತೇವೆ.. ಆದರೆ ವಾಸ್ತವದಲ್ಲಿ ಹಾಗಿರುವುದಿಲ್ಲ. ಕೆಲವರು ಏನನ್ನೂß ಕೇಳಿಸಿಕೊಳ್ಳುವುದಿಲ್ಲ.è. ಮತ್ತೆ ಕೆಲವರು ಅಧðದಷ್ಟನ್ನು ಮಾತ್ರ ಕೇಳಿಸಿಕೊಳ್ಳುತ್ತಾರೆ.

 ಕೆಲವು ಅತಿಮುಖ್ಯ ವಿಚಾರಗಳನ್ನು ಹೇಳುವಾಗ  ನಾವು ಸರಿಯಾಗಿ ಆಲಿಸದಿದ್ದರೆ ಅನ್ಯಾಯವಾಗುವುದು ನಮಗೇ ತಾನೇ?. ಮೌಲ್ಯವುಳ್ಳ ಏನೋ ಒಂದನ್ನು ಕಳೆದುಕೊಳ್ಳಬಹುದು. ಅಥವಾ ಯಾವುದೋ ಅವಕಾಶದಿಂದ ವಂಚಿತರಾಗಬಹುದು.. ಆದ್ದರಿಂದ ಬೇರೆಯವರ ಮಾತನ್ನು ಗಮನವಿಟ್ಟು ಕೇಳುವುದು ಅವಶ್ಯ.. ಮಾತನಾಡುವ ಹಾಗೂ ಆಲಿಸುವ  ಪ್ರಕ್ರಿಯೆಯನ್ನೊಳಗೊಂಡ  ಸಂವಹನದಿಂದ ವ್ಯಕ್ತಿತ್ವ ವಿಕಸನಕ್ಕೆ ದೊರಕುವ ಪ್ರಯೋಜನವನ್ನು  ಪೂಣð ಪ್ರಮಾಣದಲ್ಲಿ ಪಡೆಯಲು ನಾವು ಉತ್ತಮ ಕೇಳುಗರಾಗುವುದು ಅಗತ್ಯ.. ಅನೇಕ  ಬಾರಿ ನಾವು ಕೇಳಬೇಕಾಗಿರುವುದನ್ನು ಸರಿಯಾಗಿ ಕೇಳಿಸಿಕೊಳ್ಳದೇ ನಮಗೂ ಹೇಳುವವರಿಗೂ ಅರಿವಿಲ್ಲದಂತೆಯೇ ಇದ್ದುಬಿಡುತ್ತೇವೆ. ನಮ್ಮ ಮಾತುಗಳನ್ನು ಎಲ್ರೂ ಕೇಳಬೇಕೆಂಬ ಹಂಬಲ ಎಲ್ರಿಗೂ ಇರುತ್ತೆ. ಹಾಗೇ ಇತರರಿಗೂ ಕೂಡಾ ಅವರ ಮಾತನ್ನು  ನಾವು ಕೇಳಬೇಕೆಂಬುದಿರುತ್ತೆ ಅಲ್ವಾ? ನಮ್ಮ ಮಾತನ್ನು ಬೇರೆಯವರು ಆಲಿಸಬೇಕೆಂದರೆ ಮೊದಲು ನಾವು ಅವರ ಮಾತುಗಳನ್ನು ಆಲಿಸಬೇಕು.

ಬೇರೆಯವರು ಏನು ಹೇಳುತ್ತಾರೆಂಬುದರ ಬಗ್ಗೆ ತಾಳ್ಮೆ ಕಾಳಜಿ ಸಂಯಮ ತೋರಿಸಬೇಕು. ಗಂಡ ಹೆಂಡತಿಯರ ಮಧ್ಯೆ, ಸ್ನೇಹಿತರ ಮಧ್ಯೆ ಮಧುರ ಬಾಂಧವ್ಯವಿರಬೇಕಾದರೆ ಪರಸ್ಪರ ಮಾತನ್ನು ಚನ್ನಾಗಿ ಆಲಿಸಬೇಕು.. ಚಿಕ್ಕ ಹುಡುಗರಾಗಿದ್ರೂ ಕೂಡಾ CªÀgÀ ಮಾತನ್ನ ನಾವು ನಿಲðಕ್ಷ ಮಾಡಿದ್ರೆ ಅವು ತುಂಬಾ  ಬೇಸರಿಸುತ್ವೆ ಒಬ್ಬರ ಮಾತನ್ನು ನಾವು ಕೇಳುತ್ತಿದ್ದೀವೆಂದಾದರೆ ಅವರಿಗೆ ನಾವು ಪ್ರಾಮುಖ್ಯತೆಯನ್ನು ಕೊಡುತ್ತಿದ್ದೀವೆಂದಥð. ಇದರಿಂದ ಆ ವ್ಯಕ್ತಿಗೆ ನಮ್ಮ ಮೇಲೆ ಗೌರವ ಮೂಡುತ್ತದೆ.. ಅಂದರೆ ಮಾತ್ರ ಅವರ ಮನಸ್ಸನ್ನು ಸರಿಯಾಗಿ ಅರಿಯಲು ಸಾಧ್ಯ. ಈ ಕಾರಣ ಕೇಳುವ ಪೂಣð ಪ್ರಕ್ರಿಯೆ  ಹೆಚ್ಚು ಸಂವೇದನಶೀಲವಾದುದು.. ಇದನ್ನು ಕರಗತ ಮಾಡಿಕೊಳ್ಳೋದು ಒಂದು ಒಳ್ಳೆಯ ಕಲೆ.
ಪ್ರಯತ್ನಿಸೋಣ.