ಬದುಕು ಕಾಣಿಸಿಕೊಟ್ಟ
ನೂರು
ಕನಸುಗಳಿಗೆ
ಒಂದೊಂದಾಗಿ
ಒಬ್ಬೊಬ್ಬರು
ಒಂದೊಂದು
ರೀತಿ
ಜೀವ
ತುಂಬಿದ
ಜೀವ
ಧಾತುಗಳು
ನೀವು.
ನಿಮ್ಮ
ಪ್ರೀತಿಗೆ
ನಾನು
ಏನು
ಹೇಳಲಿ....?
ಆಪೇಕ್ಷೆಯಿಂದ
ಬಂದದ್ದಲ್ಲ...ಎಣಿಸಿರಲೂ
ಇಲ್ಲ...
ಯಾವ ಗೊತ್ತಿಲ್ಲದ
ರಾತ್ರಿಯಲ್ಲಿ
ಈ
ಹೊಸ
ಜೀವ
ತುಂಬುವ
ಕನಸುಗಳು
ಜೀವ
ತಾಳಲು
ಶುರುವಿಟ್ಟವೋ......
ಬದುಕೇ
ಬದಲಾಯಿತು
ನೋಡಿ.....
ಅಂದುಕೊಂಡಿದ್ದೆಲ್ಲ
ಆಗುತ್ತದೆ
ಎಂದು
ನಂಬಿಕೆಯಿಲ್ಲ....
ಅಂದುಕೊಂಡಿದ್ದು
ಆಗಲೇಬೇಕೆಂಬ
ಹಂಬಲವೂ
ಇಲ್ಲದೇ
ಬದುಕಿಬಿಡುತ್ತಿದ್ದ
ಜೀವ
ಇದಾಗುತ್ತಿತ್ತೋ
ಏನೋ....
ಎಲ್ಲೆಲ್ಲೋ
ಏನೇನೋ
ಕುತೂಹಲಗಳೇನೋ
ತುಂಬಾ
ಇತ್ತು.....
ಯಾರ್ಯಾರೋ
ಬಂದರು..
ಪ್ರೀತಿಸಿಕೊಂಡರು...
ನಗಿಸಿಕೊಂಡರು.... ಆತ್ಮೀಯರಾಗಿ ಹೃದಯದೊಳಗೆ
ಇಂಚಿಂಚೇ
ಜಾಗ
ಹೂಡಿಬಿಟ್ಟರು...
ನನ್ನ ಹೃದಯದೊಳಗೆ
ಇಷ್ಟೊಂದು
ಜಾಗವಿದೆ
ಎಂದು
ಅಂದುಕೊಂಡಿರಲೇ
ಇಲ್ಲ..
ಸ್ನೇಹಿತರೆಲ್ಲಾ
ಒಬ್ಬಬ್ಬರಾಗಿ
ಬಂದಿ
ಪ್ರೀತಿ
ಹರಿಸಿ
ಹೃದಯದಲ್ಲಿ
ಪ್ರತಿಷ್ಟಾಪಿಸುವವರೆಗೂ...
ಎಡೆಬಿಡದ ಶೆಡ್ಯೂಲ್ ಗಳು. ಏನೇನೋ ಆಗಿಬರದ ಜಂಜಾಟಗಳು, ತಲೆಯೊಳಗೊಂದಿಷ್ಟು ನಿಲ್ಲದ ಹನುಮಂತನಂತಹ ಜಂಪಿಂಗ್ ಲೆಕ್ಕಾಚಾರಗಳು, ಟೋಟಲೀ ಬ್ಯೂಸೀ ಲೈಪ್ ಗೆ ಸಿಕ್ಕಿ ಎಂದಿನಂತಿರದ ದೋಣಿ ಮುಗುಚಿ, ಮುಗುಚಿದ ದೋಣಿಯ ಕೆಳಗೆ ಬಿದ್ದಿದ್ದೇನೆ. ಬಿದ್ದವನು ಅಲ್ಲೇ ತಲೆಮರೆಸಿಕೊಂಡಿದ್ದೆನೇನೋ.. ಅಷ್ಟರಲ್ಲಿ ನಿಮ್ಮಂಥವರು ಬಂದು ಮುಗುಚಿದ ದೋಣಿ ಎತ್ತಿ ಏಯ್ಕಳ್ಳಾ ಇಲ್ಲಿದ್ದೀಯಾ... ಬ್ಲಾಗ್ ಕಡೆ ಬರದೇ ಇಲ್ಲಿ ತಲೆಮರೆಸಿಕೊಂಡಿದ್ದೀಯಾ ಎಂದು ಮೂಗುತೂರಿಸಿಬಿಡುತ್ತೀರಿ.... ಯಪ್ಪಾ ಯಾರ್ ಬಿಟ್ರೂ ನೀವ್ ಬಿಡಲ್ಲಾ ಕಣ್ರೀ... s ssSo sweet of U…
ಎಡೆಬಿಡದ ಶೆಡ್ಯೂಲ್ ಗಳು. ಏನೇನೋ ಆಗಿಬರದ ಜಂಜಾಟಗಳು, ತಲೆಯೊಳಗೊಂದಿಷ್ಟು ನಿಲ್ಲದ ಹನುಮಂತನಂತಹ ಜಂಪಿಂಗ್ ಲೆಕ್ಕಾಚಾರಗಳು, ಟೋಟಲೀ ಬ್ಯೂಸೀ ಲೈಪ್ ಗೆ ಸಿಕ್ಕಿ ಎಂದಿನಂತಿರದ ದೋಣಿ ಮುಗುಚಿ, ಮುಗುಚಿದ ದೋಣಿಯ ಕೆಳಗೆ ಬಿದ್ದಿದ್ದೇನೆ. ಬಿದ್ದವನು ಅಲ್ಲೇ ತಲೆಮರೆಸಿಕೊಂಡಿದ್ದೆನೇನೋ.. ಅಷ್ಟರಲ್ಲಿ ನಿಮ್ಮಂಥವರು ಬಂದು ಮುಗುಚಿದ ದೋಣಿ ಎತ್ತಿ ಏಯ್ಕಳ್ಳಾ ಇಲ್ಲಿದ್ದೀಯಾ... ಬ್ಲಾಗ್ ಕಡೆ ಬರದೇ ಇಲ್ಲಿ ತಲೆಮರೆಸಿಕೊಂಡಿದ್ದೀಯಾ ಎಂದು ಮೂಗುತೂರಿಸಿಬಿಡುತ್ತೀರಿ.... ಯಪ್ಪಾ ಯಾರ್ ಬಿಟ್ರೂ ನೀವ್ ಬಿಡಲ್ಲಾ ಕಣ್ರೀ... s ssSo sweet of U…
ಪ್ರೀತಿಸಿಕೊಂಡವರು
ಸ್ನೇಹಿಸಿಕೊಂಡವರೆಲ್ಲಾ
ಹೃದಯ
ಕಳ್ಳುವ
ಹುನ್ನಾರದಲ್ಲಿದ್ದಾಗಲೇ
ಮೊದಲ
ಮಾತು
ನನ್ನ
ಮನದಂಗಳಕ್ಕೆ
ಮೊದಲ
ಅಡಿಯಿಟ್ಟಿದ್ದು......
ಮತ್ತು
ಕುವೆಂಪುರವರರ
ಈ
ಸಾಲುಗಳನ್ನು
ನೆನಪಿಸಿಕೊಂಡು
ಮುಗುಳ್ನಕ್ಕಿದ್ದು.....
"
ಚೋರರು
ಹೃದಯದೊಳಗಿರುವರು
ಮೌನವೇ
ಬಲು
ಜೋಕೆ..."
ಮತ್ತೆ ತುಂಬಾ ಪ್ರೀತಿಸಿಕೊಂಡ
ಅವಳು.....
ಅಯ್ಯೋ ಹಾಳಾದ ನೆನಪುಗಳೇ......
ಅವಳ ಬಿಸಿಯುಸಿರು
ಇನ್ನೂ
ಎದೆಗೆ
ತಾಕಿಕೊಂಡಂತೆಯೇ
ಇದೆ..
ಡಿವಿಜಿ
ಯವರ ಸಾಲು ನೆನಪಾಗಿಸುವಂತೆ.....
"ಎದೆಯ ಗೂಡಿನೊಳಗೇನೋ
ಗಲಭೆಯಾಗಿಹುದು...."
ಹಿಂದೆಂದೋ
ನೆನಪುಗಳ
ಮೂಟೆಯನ್ನು
ಕಟ್ಟಿಕೊಂಡು
ಹೋಗುವಾಗ
ಅಂದುಕೊಂಡಿದ್ದೆ...
ಇವಳ
ನೆನಪೊಂದನ್ನು
ಇಳಿಸಿ
ಬಿಟ್ಟು
ಹೋಗಿಬಿಡೋಣವೆಂದು....
ಕೇಳುವಳೇ
ಇವಳು....
ಇಲ್ಲಾ.... ನಿನ್ನ ನೆನಪುಗಳ
ಮೂಟೆಯನ್ನೂ
ನಾನೇ
ಹೊತ್ತು
ತರುತ್ತೇನೆ..
ನೀನು
ಹೋಗ್ತಾ
ಇರು...
ನಾನು
ಬರ್ತಾ
ಇರ್ತೇನೆ ನಿನ್ನ ನೆನಪುಗಳ ಜೊತೆ ಎಂದು ಬೆನ್ನು ಬೀಳಬೇಕೇ?
ಇರಲಿ
ಎಂದು
ಕರೆದುಕೊಂಡೇ
ಬರುತ್ತಿದ್ದೇನೆ..
ಅದೇ
ಕಾರಣಕ್ಕೆ..
ನೆನಪುಗಳು
ಎಂದಾಕ್ಷಣ
ಅವಳೂ
ಬಿಡದೇ
ಎದುರು
ನಿಲ್ಲೋದು.....
ಏನೋ ಆಗಬೇಕಿದ್ದ ಬದುಕು ಏನಾಗಿಹೋಯಿತು.....
ಕೆಲವೊಬ್ಬರು
ಮಾಡಿಕೊಂಡ ಅಪಾರ್ಥ, ಇನ್ನೂ ಎಷ್ಟೋ ಜನರ ಪ್ರೋತ್ಸಾಹ....ಇಲ್ಲದ ಕಾರಣಕ್ಕಾಗಿ
ಹೊಂಚು
ಹಾಕಿ
ತರಿಸಿಕೊಂಡ ದುಃಖದ ತುಂಡು... ಎಷ್ಟೋ ಸಲ ತಾನಾಗಿ ಎರಗಿ ಬಂದ ಗೆಲುವು... ಇನ್ನೆಷ್ಟೋ
ಸಲ
ಗೊತ್ತಿದ್ದೂ
ತಪ್ಪಿಸಿಕೊಳ್ಳಲಾಗದ
ಸೋಲು...
ಬೆನ್ನು
ತಟ್ಟುವವರಾಚೆಯಿಂದ
ಕೆನ್ನೆಗಪ್ಪಳಿಸುವವರು....
ಕೆನ್ನೆಗಪ್ಪಳಿಸುವವರ
ನಡುವೆಯೇ
ಪ್ರೀತಿ
ಹರಿಸುವವರು....
ಕಾಡಿಸಿ
ಪ್ರೀತಿಸುವವರು...
ಪ್ರೀತಿಸಿಕೊಂಡು
ಕಾಡುವವರು....
ಒಂದು
ಹನ್ನೊಂದಾಗಲೀ
ಇನ್ನೊಂದಾಗಲೀ
ಕೊಡಚಾದ್ರಿ
ಅಲ್ಲಾ
ಅದರ
ಅಪ್ಪನನ್ನು
ಏರೋಣ
ಅನ್ನೋ
ಸ್ನೇಹಿತರ
ಗುಂಪು....
ಹಿಗ್ಗಾ
ಮಗ್ಗಾ
ಬೈಸಿಕೊಂಡ
ದಿನಗಳು....
ಮತ್ತೆಲ್ಲೋ
ಕ್ಯಾರೇ
ಅನ್ನದ
ಕ್ಯಾರೆಕ್ಟರ್..
ಛೇ....!! ಇಷ್ಟೆಲ್ಲಾ
ಯದ್ವಾ
ತದ್ವಾಗಳ
ನಡುವೆಯೇ
ನನ್ನ
ಬದುಕಿಗೆ
ನೂರಕ್ಕೆ
ತೊಂಭತ್ತರಷ್ಟು
ಅಂಕ
ನೀಡಿ
ನೀನು
ಸುಖವಾಗಿದ್ದೀಯಾ
ಅಂತ
ನನ್ನ
ಬದುಕಿಗೆ
ಕೊಟ್ಟ
ಸರ್ಟೀಫಿಕೇಟಿಗೆ ನೀವೆಲ್ಲಾಸ್ನೇಹಿತರು
ಬಂಧು
ಬಳಗವೆಲ್ಲಾ
ಸೇರಿ
ಲ್ಯಾಮಿನೇಶನ್
ಮಾಡಿಬಿಟ್ಟರಲ್ಲಾ.... s ಸಿಕ್ಕವರೆಲ್ಲಾ "ಏಯ್.. ನಿಂಗೇನು.... ನೀ ಆರಾಮಿದ್ದೀಯಾ...." ಅಂತಾರೆ... ನಾನೇ ಯೋಚನೆಗೆ ಬೀಳೋ ಹಾಗಾಗಿದೆ.... ನಾನಷ್ಟು ಆರಾಮಾಗಿದೀನಾ ಅಂತಾ...... ಫುಲ್ ಹವಾ.....
ಯಪ್ಪಾ...!! ನೀವೆಲ್ಲಾ ಸೇರಿ ನೀಡಿದ ಈ ಸರ್ಟೀಫಿಕೇಟನ್ನು ಝರಾಕ್ಸ್
ಮಾಡಿಕೊಳ್ಳೋ
ಹಂಗಿಲ್ಲ....
ನಿಯಮ ಇದು....
ಕಳೆದು ಹೋಗದಿರಲಿ
ಅದು.......
ಇಂದಿಗೆ ವರ್ಷ ನಾಲ್ಕಾಯಿತು ನನ್ನ ಬ್ಲಾಗಿಗೆ..... ಇಷ್ಟೆಲ್ಲಾ ಸ್ನೇಹಿತರು ಜೊತೆಗೂಡುತ್ತಾರೆಂದು ಕಲ್ಪನೆಯೂ ಇಲ್ಲದೇ ಕಾಲಿಟ್ಟವ ನಾನು ಈ ಲೋಕಕ್ಕೆ.... ನಿಮ್ಮ ಪ್ರೀತಿಗೆ... ಸ್ನೇಹಕ್ಕೆ.... ಆದರಗಳಿಗೆ ಏನೆನ್ನಲಿ ನಾನು..... ಎಷ್ಟೋ ಬಾರಿ ಅಂದುಕೊಂಡಿದ್ದೇನೆ ಆಕಸ್ಮಿಕ ಪರಿಚಯಗಳೆಲ್ಲಾ ತೀರಾ ಅನ್ನಿಸುವಷ್ಟು ಆತ್ಮೀಯವಾಗಿಬಿಡುತ್ತಿವೆಯಲ್ಲಾ ಅಂತ.... ಬಳಗ ದೊಡ್ಡದಾಗುತ್ತಿದೆ.... ನೆನೆ ನೆನೆದಂತೆಲ್ಲಾ ಖುಷಿಯ ಕಂಪು.... ಸ್ನೇಹಿಗಳೇ ಹೀಗೇ ನೀವು ಸದಾ ಖುಷಿಯಿಂದ ಕಾಲೆಳೆಯುತ್ತಾ.... ತಮಾಶೆಯಿಂದ ತರಲೆ ಮಾಡ್ತಾ.... ಜಗಳಾ ಮಾಡ್ತಾ ಪ್ರೀತಿ ನೀಡ್ತಾ.. ಓಡಾಡಿಕೊಂಡಿದ್ರೆ ನನ್ನ ಖುಷಿಗೆ ಮತ್ತೇನು ಬೇಕ್ ಹೇಳಿ...
ನಿಮ್ಮೆಲ್ಲರ ಪ್ರೀತಿಗೆ ಮತ್ತೊಮ್ಮೆ ಶುಕ್ರಿಯಾ.....
- ರಾಘವ್ ಲಾಲಗುಳಿ
:) :)
ReplyDelete:) :) :) :).............
Delete:) Abhinandanegalu..mattashtu kushiyu tumbikollali aa mansina padaragalalli..
ReplyDeleteಧನ್ಯವಾದಗಳು ನಿನಗೆ ಜೋಗಿತಿ ಅಕ್ಕಾ...........
Deleteಅಭಿನಂದನೆಗಳು....
ReplyDeleteರಾಘಣ್ಣ.. ಅಪರಿಚಿತರಾಗಿ ಬಂದು, ಆತ್ಮೀಯತೆಯಿಂದ ನಿಂದು ಹೃದಯದಲ್ಲಿ ಇಷ್ಟೊಂದು ಜಾಗವಿದೆಯಾ ಎನ್ನುವಷ್ಟು ಬೆರೆತುಬಿಡುತ್ತಾರೆ... ಖುಷಿಗೆ, ಬೇಸರಕ್ಕೆ ಜಗಳಕ್ಕೆ ಜೊತೆಯಾಗೋ ಸ್ನೇಹಿತರ ಹಲವಾರು ಚಿತ್ತಾರಗಳು ಮನಸಿನಾಳದಲ್ಲಿ ನಗುತ್ತಿರುತ್ತದೆ... ಕಾರಣವೇ ಇಲ್ಲದೇ ಖುಷಿಯ ಪಾಲನ್ನು ಕೊಡೋ ಜೀವಗಳಿದ್ದರೇ ಬದುಕು ಸುಂದರ ಅಲ್ಲವಾ...? ಮತ್ತಷ್ಟು ಸ್ನೇಹ ಜೀವಿಗಳು ಜೊತೆಯಾಗಲಿ.. ಬದುಕಿನ ತುಂಬೆಲ್ಲಾ ಈ ನಿನ್ನ ನಗುವು ಮಾಸದಿರಲಿ...:)
ಅಲ್ವಾ ಮತ್ತೇ..... ಅಪರೂಪಕ್ಕೆ ಜೊತೆಯಾಗೋರೂ ಸಹ ಸುಧಾಮನಂತೆ ಖುಷಿಯ ಅವಲಕ್ಕಿಯನ್ನು ಹಿಡಿದುಕೊಂಡೇ ಬರುತ್ತಾರೆ... ಇನ್ನು ಸದಾ ಆತ್ಮೀಯರಾಗಿ ಸುಳಿದಾಡೋರನ್ನು ಕೇಳಬೇಕೆ.....
Deleteಧನ್ಯವಾದ ಪದ್ಮಾ............
ಭಾವಗಳು ಧುಮ್ಮುಕ್ಕುತಲೇ ಇರಲಿ ಬ್ಲಾಗಲ್ಲಿ...
ReplyDeleteವರ್ಷಗಳ ಲೆಕ್ಕ ತಪ್ಪಲಿ ದೊರೆ...
ಓದುವ ಸುಖ ನಮಗಿರಲಿ...
ತುಂಬಾ ತುಂಬಾ ಖುಷಿಯಿದೆ ಎಂದರೆ ಸಾಕಲ್ಲವಾ...
ವರ್ಷಗಳ ಲೆಕ್ಕ ತಪ್ಪುವುದೇ ಹೆಚ್ಚು....
ReplyDeleteಈ 4 ವರ್ಷಗಳಲ್ಲಿ ನಿನ್ನೆಯ ದಿನ ನೆನಪಾಗಿದ್ದೇ ನಿನ್ನೆ....
ಹ್ಹ ಹ್ಹ ಹ್ಹಾ....
ವಿಚಿತ್ರವಾದರೂ ಇದು ಸತ್ಯ....
ಖುಷಿಗಳು ಬೆಳೆಯಲಿ... ಜೈ ......
ರಾಘವಣ್ಣನಂತಹ ಗೆಳೆಯ ದಕ್ಕಿದ್ದು ಇಲ್ಲಿಂದಲೇ..ಅದಕ್ಕಾಗಿಯೋ ಅಥವಾ ನೀ ಬರೆಯೋ ಭಾವಗಳಿಗೋ ಗೊತ್ತಿಲ್ಲ ನಂಗೀ ಕನಸುಕಂಗಳ ಹುಡುಗನಲ್ಲಿಷ್ಟು ಆತ್ಮೀಯತೆ ಸಿಕ್ಕಿದ್ದು.
ReplyDeleteಭಾವಗಳ ತೇರಲ್ಲಿ ಬದುಕ ಭಾವಗಳ ಹಂಚಿಕೊಂಡಾಗ ದಕ್ಕಿದ್ದ ಅವತ್ತಿನ ಆ ಖುಷಿ ಮತ್ತಿವತ್ತು ಇದ ಓದಿ ಒಮ್ಮೆ ಮನ ಸೋಕಿ ಹೋಯ್ತು...
ಬರೀತಾ, ಬೆಳೀತಾ ,ಖುಷಿಸ್ತಾ,ಸಮಾಧಾನಿಸ್ತಾ ಯಾವಾಗ್ಲೂ ಜೊತೆಯಿರಿ ಹೀಗೆಯೇ
ರಾಘವಣ್ಣ ಸಿಕ್ಕಿದ್ದೊಂದೇ ಅಲ್ಲ... "ದಕ್ಕಿದ" ಅಂದ ಮೇಲೆ ಕೇಳಬೇಕೇ.... ಇನ್ನು ನಾ ಹೇಳುವುದೇನು ಉಳಿಯಿತು.... ಯಾವಾಗಲೂ ಹೇಳಿದ ಹಾಗೆ ಮತ್ತೆ ಹೇಳಬೇಕಿದೆ.... ನಾನು ನೀಡಿದ್ದಕ್ಕಿಂತ ನಿನ್ನ ಭಾವ ದೊಡ್ಡದು...
ReplyDeleteಈ "ದಡೆ" ಅನ್ನೋ ಶಬ್ಧ ಗೊತ್ತಿದೆಯಾ...??
ನನ್ನ ಖುಷಿಗಳಲ್ಲಿ ಎಲ್ಲಾ ಒಂದು ದಡೆಯಾದರೆ... ನೀನೇ ಒಂದು ದಡೆ.
ಶುಕ್ರಿ.....ಯಾ.....
ಹಮ್ .. ನಾಲ್ಕು ವಸಂತಗಳನ್ನು ಪೂರೈಸಿದ್ದೆ... ಒಳ್ಳೆದಾಗಲಿ... :) ಹಿಂಗೆ ಭಾವ ಲಹರಿ ಹರೀತಾ ಇರ್ಲಿ .. :)
ReplyDeleteಧನ್ಯವಾದ ಕಾವ್ಯಾ......
Deleteಇಷ್ಟು ಕಾಲದ ನಂತರ ನನ್ ಬ್ಲಾಗ್ ಓಪನ್ ಆತಾ?..
ಶುಭ ಸೂಚನೆ..... ನಿಮ್ಮಂಥವರ ಹರಕೆ ಹಾರೈಕೆಗಳಿದ್ದರೆ ಖಂಡಿತಾ....
ಪ್ರೀತಿ ವಿನಾಕಾರಣವಾಗಿ ಹುಟ್ಟಿದರೇನೇ ಬಾಳಿಕೆ ಬರುವುದು ಎಂಬುದನ್ನು ದೃಡವಾಗಿ ನಂಬುವವಳು ನಾನು...
ReplyDeleteಅಂತಹ ದೊಡ್ಡ ಪ್ರೀತಿ ನಿನಗೆ (ನನಗೂ !! ) ದಕ್ಕಿದೆ... ಖುಷಿಯಾಗಿರು...
ನಾಲ್ಕುಗಳಿಗೆ ಸಂಖ್ಯೆ ಕೂಡುತ್ತಾ ಹೋಗಲಿ...
ಸಾಹಿತ್ಯ ಕೃಷಿ ನಿರಂತರವಾಗಿರಲಿ..
ಶುಭಾಶಯಗಳು...
ನಾನೂ ಹಾಗೇ ನಂಬಿದ್ದೇನೆ. ಆವಿ ಷಯವಾಗಿಯೇ ಒಂದು ಬರಹ
ReplyDeleteನನ್ನ ಬ್ಲಾಗಿನಲ್ಲಿದೆ....
ಬೆನ್ನುತಟ್ಟುವವರಿರುವವರೆಗೆ ಬರೆಯುವುದು ಅನಿವಾರ್ಯ........
ಕೆಲವಷ್ಟು ಸಲ ಆತ್ಮ ತೃಪ್ತಿಗೆ....
ಇದು ನಿರಂತರ....
ಶರಣು ಶರಣು.........
congrats raghavanna :)
ReplyDeletebareeta iru, odo sukha namagirali .
ಧನ್ಯವಾದ ಸುಬ್ಬು.............
ReplyDeleteಓದುವ ಸುಖವೊಂದೇ ಅಲ್ಲಾ..... ಬರೆಯುವ ಸುಖವನ್ನೂ ಅನುಭವಿಸಿ ದೊರೆ...............
Nijvaglu Superb Wordings Formation...Jeevanada Payanavannu Puttudagi Artha Ago Thara Varnisiddira...Gudluck Raghu..
ReplyDeleteಚಂದ್ರಿಕಾ.... ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.....
ReplyDeleteನನ್ನ ಬ್ಲಾಗಿನ ಮನೆಗೆ ಬಂದು ಹರಸಿದ್ದಕ್ಕೆ ಖುಷಿಯಾಯಿತು.
ಧನ್ಯವಾದ.......
Super
ReplyDeleteThank u Hemanth...
ReplyDeleteSuper agiddu raganna..
ReplyDeleteಧನ್ಯವಾದ ಮ್ಯಾನ್...
Deletewaaah chandada baraha :-)
ReplyDeleteನನ್ನ ಬ್ಲಾಗಿಲ ಮನೆಗೆ ಸ್ವಾಗತ.....
Deleteಬಂದಿದ್ದು ಖುಷಿಯಾಯ್ತು... ಹೀಗೇ ಬರ್ತಾ ಇರಿ...
ಪ್ರತಿಕ್ರಿಯೆಗೆ ಧನ್ಯ...
ನೆನಪುಗಳ ಬುಟ್ಟಿಯನ್ನೇ ಹೊತ್ತು ತರುವ ನಿಮ್ಮ ಬರಹ ತುಂಬಾ ಆತ್ಮೀಯವೆನಿಸಿತು ಧನ್ಯವಾದಗಳು ,ಹೀಗೆ ಬರೆಯುತ್ತಿರಿ .
ReplyDeleteನನ್ನ ಬ್ಲಾಗಿಲ ಮನೆಗೆ ಸ್ವಾಗತ.....
Deleteನೀವು ಹೀಗೇ ಬರುತ್ತಿರಿ... ಓದುತ್ತಿರಿ....