ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Friday, August 17, 2012

ಪ್ರೇಮ ಸಮರ...ನೀನು ರಾಣಿ.....

ಹೃದಯ ಸಾಮ್ರಾಜ್ಯವೆಲ್ಲಾ ನಿನ್ನದೇ......

ಕೈಯಲ್ಲಿ ಏನೂ ಅಸ್ತ್ರವಿಲ್ಲದೇ

ಕಣ್ಣಲ್ಲೇ ಮಾಯಾ ಯುದ್ಧ ಸಾರುತ್ತೀಯಾ....

ನಿನ್ನ ಕಣ್ಣ ಕಾಮನೆಗಳ ಅಸ್ತ್ರಕ್ಕೆ

ದಿನಕ್ಕೊಂದು ರೂಪ....

ಮಡಿಯಲ್ಲೇ ಏಕೆ ಮಡಿಯಬೇಕು?

ಯುದ್ಧ ಮಾಡಿ ಮಡಿಲಲ್ಲಿ ಮಣಿಯುವ 

ಅವಕಾಶವಿರುವಾಗ...?

ಕರೆ ಇರುವುದು ಹೋರಾಟಕ್ಕೆ.....

ಹೋರಾಟದಲ್ಲಿ ನಿನ್ನನ್ನು ಮಣಿಸಬಹುದು....

ಆದರೆ ಹೃದಯ ಸಾಮ್ರಾಜ್ಯದಲ್ಲಿ ನಾವಿಬ್ಬರೇ ಇರುವಾಗ....

ನಿನ್ನನ್ನು ಮಣಿಸಿ ನಾನೊಬ್ಬನೇ ಹೇಗೆ ಬೀಗಲಿ....

ಮತ್ತೆ ಮತ್ತೆ ನಡೆಯುವ ಈ ಯುದ್ಧ

ಮತ್ತೆ ಸಮಬಲ.....(ಡ್ರಾ..)

.................................ರಾಘವ್ ಲಾಲಗುಳಿ.

2 comments:

 1. ಮಡಿಯಲ್ಲೇ ಏಕೆ ಮಡಿಯಬೇಕು?

  ಯುದ್ಧ ಮಾಡಿ ಮಡಿಲಲ್ಲಿ ಮಣಿಯುವ

  ಅವಕಾಶವಿರುವಾಗ...?
  :::
  ಮತ್ತೆ ಸಮಬಲ.....
  :::
  ನಮಸ್ಕಾರಾ ಕಣಣ್ಣೋ...
  ಚಂದ ಬರದ್ದೆ...
  ಪ್ರೇಮದಲ್ಲಿ ಸದಾ ಸಮಬಲವೇ ಇರಲಿ...

  ReplyDelete
 2. ಏನ್ ಗೀಚಿದ್ರೂ ಓದುವವಿದ್ದಿ ನಿಂಗೋ......

  ಧನ್ಯವಾದ ಅಣ್ಣಾ ಬಾಂಡ್..........

  ReplyDelete