ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Friday, March 11, 2011

ನಿರ್ದಯಿ ಸಾಗರದ ಸ್ವಾರ್ಥ ಬಯಕೆ...


ಸಮುದ್ರದ ಪ್ರೀತಿ ಉಕ್ಕಿಬಿಟ್ಟಿದೆ ಇಂದು…

ಈ ಸಮುದ್ರಕ್ಯಾಕೋ ಚಂದ್ರನ ಮೇಲೆ ಈ ಪರಿ ವ್ಯಾಮೋಹ? ಅದೆಷ್ಟು ಕಾಲ ಈ ಸಮುದ್ರವು ಉಕ್ಕಿ ಬರುವ ಪ್ರೀತಿಗೆ ಹೋಲಿಕೆಯಾಗಿತ್ತೋ… ಹುಣ್ಣಿಮೆಯ ಚಂದ್ರನ ನೋಡಿ ಉಕ್ಕಿ ಬರುವ ಸಾಗರದಂತೆ ಎಂದು ಅದೆಷ್ಟು ಕವಿಗಳು ವಣಿðಸಿದ್ದರೋ…?  ಅವುಗಳನ್ನೆಲ್ಲವನ್ನೂ ನಿಜ ಮಾಡಲೆಂಬಂತೆ ಉಕ್ಕಿಬಿಟ್ಟಿದೆ ಇಂದು….

       ಈ ಸಾಗರದ ದಡದಲ್ಲಿ ಕನಸು ಕಟ್ಟಿದವರೆಷ್ಟು ಮಂದಿಯೋ…. ಸಾಗರದ ದಡದಲ್ಲೊಂದು ಮನೆ ಮಾಡಬೇಕು… ಏರೇರಿ ಬರುವ ತೆರೆಗಳನ್ನು ನೋಡ್ತಾ ಇರಬೇಕು…. ಸಮುದ್ರದ ಮೊರೆತ ಕಿವಿಯ ಮೇಲೆ ಯಾವಾಗಲೂ ಕೇಳ್ತಿರಬೇಕು…… ಕಣ್ಣ ತುಂಬೆಲ್ಲಾ ಸಮುದ್ರವೇ ಹರಡಿರಬೇಕು…. ಹುಣ್ಣಿಮೆಯ ರಾತ್ರಿ ಮರಳ ದಡದ ಮೇಲೆ ಕುಳಿತು ಚಂದ್ರನಿಗಾಗಿ ಉಕ್ಕುಕ್ಕಿ ಬರುವ ಸಮುದ್ರವನ್ನು ನೋಡ್ತಾ ಆನಂದ ಪಡಬೇಕು ಅಂದುಕೊಂಡು ಸಾಗರದ ದಡದ ಮೇಲೆ ಅದೆಷ್ಟು ಸಾವಿರ ಸಾವಿರ ಮಂದಿ ಬೀಡು ಬಿಟ್ಟಿದ್ದರೋ……..  ಕೊನೆಗೂ ಸಮುದ್ರವು ತನ್ನ ಪ್ರೀತಿಯ ಕಟ್ಟೆ ಒಡೆದೇ ಬಿಟ್ಟಿತಲ್ಲಾ….

        ಇಷ್ಟು ವಷðಗಳ ಕಾಲ ಕೈಗೆ ಸಿಗದ ಚಂದಿರನಿಗಾಗಿ ಉಕ್ಕಿ ಉಕ್ಕಿ ಸುಸ್ತಾಗಿ ಬೇಸತ್ತು ಬಿಟ್ಟಿತ್ತೇನೋ….. ಭೂಮಿಗೆ ಚಂದ್ರ ಹತ್ತಿರವಾಗೋ ದಿನಕ್ಕಾಗಿ ಆ ಸಾಗರವೂ ಕಾಯುತ್ತಿದ್ದಿರಬೇಕು…. ಹತ್ತಿರವಾಗಿಯೇ ಬಿಟ್ಟಿತಲ್ಲಾ…. ಕೊನೆಯ ಬಾರಿಯ ಪ್ರಯತ್ನಕ್ಕೊಂದು ಮುನ್ನಾ ತಯಾರಿಯ ರೀತಿಯಲ್ಲಿ… ಚಂದಿರನ ಹೆಗಲೇರಿ  ಕುಂತುಬಿಡುವ ಆಸೆಯಲ್ಲಿ ಉಕ್ಕಿ ಬಿಟ್ಟಿತಲ್ಲಾ… ಎರಡು ಕೋಟಿ ಜೀವಗಳನ್ನು ತೆಕ್ಕೆಯಲ್ಲಿ ಉಸಿರುಗಟ್ಟಿಸಿಯಾದರೂ ಸರಿ ಚಂದ್ರನ ಸೇರಲೇ ಬೇಕೆಂಬ ಸಾಗರದ ನಿದðಯೀ ಸ್ವಾಥð ಪ್ರೀತಿಯಾ ಇದು?

        ಹೌದು ಇದೇ ಬರುವ ಹುಣ್ಣಿಮೆಗೆ ತಾನೇ ಭೂಮಿಗೆ ಚಂದ್ರನು ಅತೀ ಸಮೀಪದಲ್ಲಿ ಬರೋದು… ಹದಿನೆಂಟಕ್ಕೆ ಹುಣ್ಣಿಮೆ ಈವತ್ತಿನ್ನೂ ಹನ್ನೊಂದು….. ಮುನ್ನಾ ತಯಾರಿಯಾಗಿಯೇ ಲಕ್ಷಾಂತರ  ಜನರನ್ನು ಒಂದಿಡೀ ದೇಶವನ್ನು ಬಲಿತೆಗೆದುಕೊಂಡ  ಮೇಲಾದರೂ ಹಸಿದ ಬಿಸಿ ತಣಿದಿದೆಯೋ ಏನೋ…. ಸಾಗರದ ಒಡಲಿನ ಹಸಿವಿನ ಬಿಸಿ ಇಷ್ಟಾಗಿಯೂ ಆರದಿದ್ದರೆ ಹದಿನೆಂಟರೊಳಗೆ ಇನ್ನೆಷ್ಟು ಜೀವಗಳ ಬಲಿಯಿದೆಯೋ… ಹಾಗಾಗದಿರಲಿ….

             ಭೂಮಿ ನುಂಗುವ ಬಯಕೆ ನಿನಗೂ ಶುರುವಾಯಿತಾ?...
              ಪದೇ ಪದೇ ಜಪಾನಿನ ಮೇಲೇ ಕಣ್ಣು...

  ಮನೆಗಳೆಂದರೆ ಜನಗಳೆಂದರೆ ಜೀವವಿಲ್ಲದ ಕಲ್ಲಿದ್ದಲ್ಲಿನಂತೆ ಸುಟ್ಟು ಕರಕಲಾಗಿಬಿಟ್ಟವು.
   ಅಣು ಬಾಂಬ್ ನ ಮೊದಲ ಅನುಭವದಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಆಘಾತ.
                           ನಗರದ ತುಂಬೆಲ್ಲಾ ಕರಾಳ ಮೌನ.
ಅಣು ಅಣುವಿನಲ್ಲೂ ಅಪಾಯ ತುಂಬಿರುವ ಅಣು ಸ್ಥಾವರಕ್ಕೇ ಬೆಂಕಿ
ಜಪಾನ್  ಶ್ರಮಜೀವಿಗಳ ದೇಶ. ಹಿಂದೊಂದು ಯುದ್ಧದ ಸಮಯದಲ್ಲಿ ಪೂರ್ತಿ ನೆಲಸಮವಾದ ದೇಶ ಎಷ್ಟು ಬೇಗ ಎದ್ದು  ನಿಂತಿತ್ತು... ಏಳುವಷ್ಟರಲ್ಲಿ ಬೀಳಲಿಕ್ಕಾಯಿತು. ಮತ್ತಂತಹುದೇ ದುರಂತ...
ನಿರುಪದ್ರವೀ ದೇಶಕ್ಕೆ ಪ್ರಪಂಚದ ಎರಡನೇ ಬಲಿಷ್ಟ ದೇಶಕ್ಕೆ  ತಾನಾಯಿತು ತನ್ನ ಕೆಲಸವಾಯಿತು ಅಂತ ಇದ್ದ  ಈ ದೇಶಕ್ಕೆ  ಒದಗಿದ ಈ ಆಘಾತ ನಿಜಕ್ಕೂ ವಿಷಾದನೀಯ.
                     ದೇಶವೆಲ್ಲಾ ಕಸದ ತೊಟ್ಟಿಯಾಯಿತಲ್ಲಾ...
                                ನೆಲವೆಲ್ಲ ಮುಳುಗಿ ನೆನಪೊಂದುಳಿಯಿತಾ?


                ಕುಂಬಾರನಿಗೆ ವರುಷ.. ದೊಣ್ಣೆಗೆ ನಿಮಿಷ.

                    ಎಷ್ಟು ಭಯಂಕರ ಇರಬೇಕಲ್ವಾ.....
          
   ಪ್ರಳಯದ ಕಲ್ಪನೆ ನಿಜವಾಗುತ್ತಿದೆಯಾ........ ಕಣ್ಣಾರೆ ಕಂಡ ಮೇಲೆ ಏನನ್ನೋಣ....

10 comments:

 1. ಭಾರೀ ಫಾಸ್ಟ್ ಉಪ್ಡೇಟಲೋ.

  ReplyDelete
 2. ಹೂಂ.. ಯಾವ ಯಾವ್ದೋ ವಿಷ್ಯಾನ ಬರೀತೀವಿ.... ಇದನ್ನ ಬರೀದೇ ಇದ್ರೆ ಹೇಗೆ ಅನ್ಸಿತ್ತು.....

  ReplyDelete
 3. ಪ್ರೀತಿಯ ಸ್ವಾರ್ಥ ಅಷ್ಟು ಘೋರವಾ..?
  ಪ್ರೀತಿಯ ಮತ್ತೊಂದು ಮುಖ ಕ್ರೌರ್ಯವಾ..?  ಚೆನ್ನಾಗಿ ಬರೆದಿದ್ದೀರಾ...

  ReplyDelete
 4. ವತ್ಸಾ ಪ್ರೀತಿಯಲ್ಲಿಯ ಸ್ವಾರ್ಥ ಘೋರಾನೇ ಇರುತ್ತೆ... many times..
  but ಪ್ರೀತಿಯ ಮತ್ತೊಂದು ಮುಖ ಕ್ರೌರ್ಯ ಖಂಡಿತಾ ಅಲ್ಲಾ.. ಆದರೆ ಪ್ರೀತಿ ಕಲಿಸಿದ ಪ್ರಕೃತಿಯಿಂದಲೇ ಹೀಗಾದರೆ ನಮ್ಮ ನಿಮ್ಮಂಥವರ ಪಾಡೇನು ಅಂತಾ....

  *****


  ಧನ್ಯವಾದಗಳು

  ReplyDelete
 5. ಪ್ರಕೃತಿಯ ಮೇಲೆ ನಿರಂತರ ನಡೆಯುತ್ತಿರುವ ಅತ್ಯಾಚಾರ ಇದಕ್ಕೆಲ್ಲ ಕಾರಣ...

  ಎಲ್ಲದಕ್ಕೂ ಒಂದು ಕೊನೆ ಎನ್ನುವುದುದಿದೆಯಲ್ಲ...!

  ತನ್ನ ಸಮತೋಲವನ್ನು ಕಾಪಾಡಿಕೊಳ್ಳಲು ಪ್ರಕೃತಿಯೇ ಕಂಡುಕೊಂಡ ದಾರಿ ಇದು ಇರಬಹುದು..

  ಭಾವನಾತ್ಮಕವಾದ ಈ ಲೇಖನ ಇಷ್ಟವಾಯಿತು... ಅಭಿನಂದನೆಗಳು..

  ReplyDelete
 6. ನಿಜವೇ....
  ನಮಗೋಸ್ಕರಾನಾದ್ರೂ ಅದು ತನ್ನ ಸಮತೋಲನ ಕಾಪಾಡಿಕೊಳ್ಳಬೇಕಿದೆ..
  ಆದ್ರೂ ಪ್ರಕಾಶಣ್ಣ ನಂಗೆ ಜಪಾನಿನ ಮೇಲೆ ಒಂದು ಸಣ್ಣ ಕರುಣೆಯಿದೆ.

  ReplyDelete
 7. ಕಲ್ಪನೆ ಮತ್ತು ವಾಸ್ತವ ಇದಕ್ಕೆ ಇರುವ ಅಂತರ ಇದೆ ಅಲ್ಲವೇ? ಬರೆದಿರುವ ರೀತಿ,ಉಪಯೋಗಿಸಿರುವ ಪದಗಳು ಚೆನ್ನಾಗಿವೆ.. ಮತ್ತೆ ಸಾಗರಕ್ಕೆ ಚಂದ್ರನ ಮೇಲೆ ಪ್ರೀತಿ ಉಕ್ಕದಿರಲಿ.ವಿರಹ ವಿದ್ದರು ಸರಿಯೇ..ಕೊಲ್ಲುವ ಮೋಹ ಬೇಡ...

  ReplyDelete
 8. ಹೂಂ... ಸರಿಯಾಗಿ ಹೇಳಿದ್ದೆ... ನನ್ನ ಆಶಯವೂ ಅದೇ...

  ReplyDelete
 9. ತು೦ಬಾ ಭಯ೦ಕರ..ನೆನೆಸಿಕೊ೦ಡರೆ ಮನ ನೋಯುತ್ತದೆ.

  ಭಾವುಕತೆ ತು೦ಬಿದ ಬರಹ..

  ReplyDelete
 10. ಮನಮುಕ್ತಾ....
  ನಿಜ ಹೇಳಿದಿರಿ... ಮೊದಲೆಲ್ಲಾ ಇಂಥ ಭಯಂಕರಗಳು ಕಥೆಯಲ್ಲಿ ಮಾತ್ರ ಇರ್ತಿತ್ತು..

  ಧನ್ಯವಾದ.

  ReplyDelete