ಕೇಳಲು ಕಲಿಯುವಾ ಗೆಳೆಯಾ
ನುಡಿಯುವ ಮುನ್ನ
ನುಡಿಯ ಕೇಳುವ ಕಲೆಯಾ
ಕಲಿತರೆ ಚನ್ನ......

ಅದಕ್ಕೆ ನಾವೆಲ್ಲಾ ಕೇಳುವ ಕಲೆಯನ್ನೂ ಕಲಿತ್ರೆ ಚನ್ನ ಅಲ್ವಾ..
ಇತರರು ಹೇಳೋದನ್ನ ಪೂರ್ಣವಾಗಿ ಕೇಳಿಸಿಕೊಂಡು ಸಮಗೃವಾಗಿ ಗೃಹಿಸುವುದೂ ಒಂದು ಕಲೆ. ಇದು ಮನಸ್ಸಿನ ಆರೋಗ್ಯಕ್ಕೆ ಅವಶ್ಯ. ಕೇಳುವ ಕಲೆಯನ್ನು ಕರಗತ ಮಾಡಿಕೊಂಡು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡವರು ತೀರ ಕಡಿಮೆ. ಇತ್ತೀಚಿನ ದಿನಗಳಲ್ಲಿ ಬೇರೆಯವರು ಏನು ಹೇಳುತ್ತಾರೆಂದು ಕೇಳುವ ತಾಳ್ಮೆ, ಸಹನೆ ಯಾರಿಗೂ ಇಲ್ಲಾ.. ಕೆಲವೊಮ್ಮೆ ನಾವು ಇತರರ ಮಾತನ್ನು ಗಮನವಿಟ್ಟು ಕೇಳುತ್ತಿದ್ದೇವೆಂದು ಭ್ರಮಿಸುತ್ತಿರುತ್ತೇವೆ.. ಆದರೆ ವಾಸ್ತವದಲ್ಲಿ ಹಾಗಿರುವುದಿಲ್ಲ. ಕೆಲವರು ಏನನ್ನೂß ಕೇಳಿಸಿಕೊಳ್ಳುವುದಿಲ್ಲ.è. ಮತ್ತೆ ಕೆಲವರು ಅಧðದಷ್ಟನ್ನು ಮಾತ್ರ ಕೇಳಿಸಿಕೊಳ್ಳುತ್ತಾರೆ.
ಕೆಲವು ಅತಿಮುಖ್ಯ ವಿಚಾರಗಳನ್ನು ಹೇಳುವಾಗ ನಾವು ಸರಿಯಾಗಿ ಆಲಿಸದಿದ್ದರೆ ಅನ್ಯಾಯವಾಗುವುದು ನಮಗೇ ತಾನೇ?. ಮೌಲ್ಯವುಳ್ಳ ಏನೋ ಒಂದನ್ನು ಕಳೆದುಕೊಳ್ಳಬಹುದು. ಅಥವಾ ಯಾವುದೋ ಅವಕಾಶದಿಂದ ವಂಚಿತರಾಗಬಹುದು.. ಆದ್ದರಿಂದ ಬೇರೆಯವರ ಮಾತನ್ನು ಗಮನವಿಟ್ಟು ಕೇಳುವುದು ಅವಶ್ಯ.. ಮಾತನಾಡುವ ಹಾಗೂ ಆಲಿಸುವ ಪ್ರಕ್ರಿಯೆಯನ್ನೊಳಗೊಂಡ ಸಂವಹನದಿಂದ ವ್ಯಕ್ತಿತ್ವ ವಿಕಸನಕ್ಕೆ ದೊರಕುವ ಪ್ರಯೋಜನವನ್ನು ಪೂಣð ಪ್ರಮಾಣದಲ್ಲಿ ಪಡೆಯಲು ನಾವು ಉತ್ತಮ ಕೇಳುಗರಾಗುವುದು ಅಗತ್ಯ.. ಅನೇಕ ಬಾರಿ ನಾವು ಕೇಳಬೇಕಾಗಿರುವುದನ್ನು ಸರಿಯಾಗಿ ಕೇಳಿಸಿಕೊಳ್ಳದೇ ನಮಗೂ ಹೇಳುವವರಿಗೂ ಅರಿವಿಲ್ಲದಂತೆಯೇ ಇದ್ದುಬಿಡುತ್ತೇವೆ. ನಮ್ಮ ಮಾತುಗಳನ್ನು ಎಲ್ರೂ ಕೇಳಬೇಕೆಂಬ ಹಂಬಲ ಎಲ್ರಿಗೂ ಇರುತ್ತೆ. ಹಾಗೇ ಇತರರಿಗೂ ಕೂಡಾ ಅವರ ಮಾತನ್ನು ನಾವು ಕೇಳಬೇಕೆಂಬುದಿರುತ್ತೆ ಅಲ್ವಾ? ನಮ್ಮ ಮಾತನ್ನು ಬೇರೆಯವರು ಆಲಿಸಬೇಕೆಂದರೆ ಮೊದಲು ನಾವು ಅವರ ಮಾತುಗಳನ್ನು ಆಲಿಸಬೇಕು.

ಪ್ರಯತ್ನಿಸೋಣ.
ಹೌದು ಕಣ್ರೀ,
ReplyDeleteನಾವೆಲ್ಲ ಒಂದಿಷ್ಟು
"ನುಡಿಯ ಕೇಳುವ ಕಲೆಯ
ಕಲಿತರೆ ಚನ್ನ..."
ಆಲಿಸುವ ಮೂಲಕ ಮನವ ಅರಳಿಸುವುದ ಕಲಿಯೋಣ...
ಹಾಯ್, ಹೀಗೆ ಬ್ಲಾಗಿನ ಮೂಲಕ ನಿನ್ನ ಪರಿಚಯವಾದದ್ದು ಖುಷಿಯಾಯ್ತು.ನಿನ್ನ ಕೆಲ ಬರಹಗಳನ್ನು ಓದಿದೆ, ಹೀಗೇ ಬರೆಯುತ್ತಿರು.
ReplyDeletenice one!!
ReplyDeleteyes u are right dost.. Listening is also important as talking..
ReplyDeleteವತ್ಸಾ ಅವರೇ.. ನಾನೂ ಕಲಿಯಾಕತ್ತೀನ್ರಿ.....
ReplyDelete****
ವೆಂಕಣ್ಣಾ ನಂಗೂ ಖುಶಿ ಆತೋ....
****
ವಾಣಿಶ್ರೀ ಧನ್ಯವಾದ.
****
ದೋಸ್ತ್ ನಾನೂ ಕಲೀತಾ ಇದ್ನಪ್ಪಾ.....
nija bereyavara matinnu kelodrinda naavu kalibahdu
ReplyDeletearticle tumba chenagiddu
ಶೈಲಜಾ ಧನ್ಯವಾದ....
ReplyDeleteನನ್ನ ಬ್ಲಾಗಿಗೆ ಬ೦ದು ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು.
ReplyDeleteಚೊಲೊ ಇದ್ದು ಬರ್ದಿದ್ದು...
ಲತಾಶ್ರೀಯವರಿಗೂ ನನ್ ಕಡೆಯಿಂದ ಧನ್ಯವಾದಗಳು....
ReplyDeleteಅವಾಗಾವಾಗ ಬರ್ತಾ ಇರಿ... ಓದ್ತಾ ಇರಿ...
super blog!
ReplyDelete