ಓ ಶಿಲ್ಪಿ ನಿನ್ನಾಟ
ರಸಿಕಮನಕೂಟ
ಶಿಲೆಯಲ್ಲ ಕಲೆಯಾಗಿ
ಹಬ್ಬುತಿಹುದು |
ಕಲ್ಲಿಗಿಡೊ ಚಾಣ
ಶಿಲೆಯೊಳಗೆ ರಸಿಕತೆಯ
ತೆರೆದಿಡುವ ಜಾಣ |
ಎಷ್ಟು ಅಜ್ಞಾತರು
ನಶಿಸಿದರು ಇಲ್ಲಿ
ಕೊಟ್ಟ ಕಲೆಮಾತ್ರ
ಉಳಿದಿಹುದು ಶಿಲೆಯಲ್ಲಿ |
ಉಳಿದಿಲ್ಲ ನೋಡು
ಶಿಲೆಯರಳಿ ಕಲೆಯಾಗಿ
ಹಂಪೆ ಹಳೆಬೀಡು |
ಮತ್ತೊಮ್ಮೆ ಬಾ ಜಗಕೆ
ಕಲೆಯ ಒಡಲೊಳಗಿಟ್ಟು
ಕರೆಯುತಿರುವೆನು ಶಿಲ್ಪಿ
ಕುಂಭ ಸ್ವಾಗತ ಕೊಟ್ಟು |
******************** ರಾಘವ್.
[ಈಗ ಆರು ವರ್ಷಗಳ ಹಿಂಹೆ ಹಂಪೆ ಹಳೆಬೀಡಿಗೆ ಹೋದಾಗ ಏನೋ ಅನ್ಸಿದ್ದನ್ನ ಬರ್ದುಬಿಟ್ಟಿದ್ದೆ. ಒಂದಕ್ಷರಾನೂ ಹಿಂದೆ ಮುಂದೆ ಮಾಡದೇ ಈಗ ನಿಮ್ ಮುಂದೆ ಇಟ್ಟಿದೀನಿ..
(ಹೊಸ ಸೀಸೆ ಹಳೆ ಮದ್ಯ)]
Raghu, that's a sweet little poem!
ReplyDeleteUr's wish...
ReplyDeleteThank u sir...
ಚೆಂದದ ಸಾಲುಗಳು.. :)
ReplyDeleteಧನ್ಯವಾದ ಪ್ರದೀಪ್.
ReplyDeleteಹಾಗೆಯೇ... ಕನಸಿಗೆ ಸ್ವಾಗತ..
ಮಧ್ಯ ಹಳೆಯದಾದಷ್ಟೂ ರುಚಿಯಂತೆ ಕಣೋ...
ReplyDeleteಹೂಂ.... ಅದರ ಬಗ್ಗೆ ಸರೀ ಕಲ್ಪನೆ ಇಲ್ಯೋ ನಂಗೆ....
ReplyDeleteಹ್ಹ ಹ್ಹ ಹ್ಹಾ....
******
ಧನ್ಯವಾದಗಳು ವಸಂತ್....
ಶಿಲೆಯಲ್ಲ ಶಿಲೆಯಾಗಿ
ReplyDeleteಉಳಿದಿಲ್ಲ ನೋಡು
ಶಿಲೆಯರಳಿ ಕಲೆಯಾಗಿ
ಹಂಪೆ ಹಳೆಬೀಡು |
ಮೇಲಿನ ಸಾಲು "ಶಿಲೆಯಿಲ್ಲಿ...: ಅಂತ ಇರಬೇಕಿತ್ತಲ್ವಾ? ಪದ್ಯ ಚೆನ್ನಾಗಿದೆ. ನೀವು ಹೇಳಿದಂತೆ (ಹಳೆ ಮದ್ಯ ಹೊಸ ಸೀಸೆ)ಮಾಡದೆ. ಮತ್ತೊಮ್ಮ ತಿದ್ದಿದ್ದರೆ ಇದು ಸರಿಯಾಗುತ್ತಿತ್ತೇನೋ?
ಚೆಂದದ ಪದ್ಯಕ್ಕೆ ಅಭಿನಂದನೆಗಳೊಂದಿಗೆ,
ಪ್ರೀತಿಯಿಂದ, ಗುಬ್ಬಚ್ಚಿ ಸತೀಶ್.
ಸೊಗಸಾದ ಸಾಲುಗಳಿಗೆ...
ReplyDeleteಅದರ ಭಾವಗಳಿಗೆ ವಂದನೆಗಳು...
ಜೈ ಹೋ !
ಸತೀಶ್ ಅವರೆ ನಿಮ್ಮ ಸಲಹೆಗಳಿಗೆ ಧನ್ಯವಾದಗಳು.
ReplyDelete"ಶಿಲೆಯೆಲ್ಲ" ಅನ್ನುವುದನ್ನು ಯೋಚಿಸಿಯೇ ಬರೆದಿದ್ದೇನೆ. ಆ ಪದದ ಬಳಿ ಸ್ವಲ್ಪ ಅನುಮಾನ ಕಾಡುವುದು ಸಹಜ.ಅಥಱದಲ್ಲಿ ಸ್ವಲ್ಪವಷ್ಟೇ ವ್ಯತ್ಯಯ ಅಷ್ಟೇ... "ಶಿಲೆಯೆಲ್ಲ ಶಿಲೆಯಾಗಿ" ಅಂದರೆ ಶಿಲೆಗಳೆಲ್ಲಾ ಕೇವಲ ಶಿಲೆಯಾಗಿ ಮಾತ್ರ ಉಳಿದಿಲ್ಲ.. ಶಿಲ್ಪಿಯ ಚಾಣಕ್ಕೆ ಸಿಕ್ಕಿ ಕಲೆಗಳಾಗಿ ಅರಳಿವೆ ಅಂತಾ...
*"ಶಿಲೆಯಲ್ಲಿ ಶಿಲೆಯಾಗಿ" ಅಂದರೆ ಶಿಲೆಗಳ ಮಧ್ಯ ಇವುಗಳು ಶಿಲೆಗಳಾಗಿಯೇ ಅಳಿದು ಹೋಗಲಿಲ್ಲ ಮೂರ್ತಿಗಳಾಗಿ ಆರಳಿದವು ಅಂತಾ...
ಎರಡೂ ರೀತಿ ಹೇಳಬಹುದು...
ತಮ್ಮ ಸಲಹೆಗಳು ಯಾವತ್ತೂ ಬೇಕು ನಮಗೆ...
ಥ್ಯಾಂಕ್ಯೂ ಪ್ರಕಾಶಣ್ಣಾ....
ReplyDeleteಸುಂದರ ಕವನ ..
ReplyDeleteಧನ್ಯವಾದ ಶ್ರೀಧರ್....
ReplyDelete