ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Saturday, June 10, 2017

ನೆನಪಿಲ್ಲವೇ ಹುಡುಗಿ...

ದೀಪವಿಲ್ಲದ ಸಂಜೆ
ಕಣ್ಣುಗಳ ಹೊಳಪಲ್ಲಿ
ನನ್ನನ್ನು ನೀ ನೋಡಿ
ಕರೆದಿಲ್ಲವೇ?
ಕತ್ತಲೆಯ ಭಯದಲ್ಲಿ
ಸಾಂತ್ವನದ ನೆಪದಲ್ಲಿ
ನನ್ನನ್ನು ನಿನ್ನೆದೆಗೆ
ಸೆಳೆದಿಲ್ಲವೇ? ||

ಭಾಗ್ಯವಾಯಿತು ದೊರೆಯೇ
ಎಂದೆದೆಗೆ ತಲೆಯಿಟ್ಟು
ಮೆದುವಾಗಿ ಎದೆ ತೀಡಿ
ಬಳಸಿಲ್ಲವೇ |
ಹುಚ್ಚು ಹುಡುಗಿಯೆ ಭಯವೇ
ಎಂದು ಕೆನ್ನೆಗೆ ಮುತ್ತ
ಕೊಟ್ಟು ಆಲಂಗಿಸಿದ ನೆನಪಿಲ್ಲವೇ?||

ಎದೆಬಡಿತ ಜೋರಾಗಿ
ಕೆನ್ನೆಗಳು ಕೆಂಪಾಗಿ
ಅಧರಗಳು ಅದುರಿದ್ದು ನೆನಪಿಲ್ಲವೇ..?
ಮನಸುಗಳು ಮೃದುವಾಗಿ
ಕೈಹಿಡಿದು ಜೊತೆಯಾಗಿ
ನದಿ ದಡವ ಸವೆಸಿದ್ದು ನೆನಪಿಲ್ಲವೇ?

No comments:

Post a Comment