ಮಗು ಹುಟ್ಟುವಾಗ ಏನಂದರೆ ಏನೂ ಅರಿಯದ ಶುದ್ಧ ಜೀವಂತ ಗೊಂಬೆ. ಹಸಿವಾಗುತ್ತದೆ.... ತೀಡುತ್ತದೆ.... ಹೊಟ್ಟೆ ತುಂಬಿದಾಗ ಕಣ್ಣು ಪಿಳಿ ಪಿಳಿಸುತ್ತದೆ. ಇಲ್ಲಾ ನಿದ್ರಿಸುತ್ತದೆ. ಇಷ್ಟೇ... ಸ್ವಲ್ಪ ದೊಡ್ಡದಾಗುತ್ತಾ ಬಂದಂತೆ ನೋಡಿ, ಮಗುವಿನ ಮನಸ್ಸು ಕುತೂಹಲಗಳ ಕಣಜ. ಅದಕ್ಕೆ ಕಂಡದ್ದರ ಮೇಲೆಲ್ಲಾ ವಿಪರೀತ ಆಸಕ್ತಿ. ಏಕೆ ಈ ಆಸಕ್ತಿ..? ಏಕೆಂದರೆ ಅದಕ್ಕೆ ಇಲ್ಲಿಯವರೆಗಿನ ಅದರ ಪ್ರಪಂಚದಲ್ಲಿ ಏನೂ ಗೊತ್ತಿರೋದೇ ಇಲ್ಲಾ... ಆಡೋ ಚಂಡಿರಲಿ .... ಬರೆಯೋ ಪೆನ್ನಿರಲಿ..... ವಾಚು, ಕಸ, ಕಡ್ಡಿ, ಗೊಂಬೆ, ಕಾರು, ಪುಸ್ತಕ...ಎಲ್ಲವೂ ಅದರ ಕಣ್ಣಿಗೆ ಹೊಚ್ಚ ಹೊಸದು.... ಅದರ ಪ್ರಪಂಚದಲ್ಲಿ ಆಗ ತಾನೇ ಕಾಣಿಸಿಕೊಂಡ ಅದ್ಭುತಗಳವು. ಅವುಗಳ ಬಗ್ಗೆ ಏನೂ ಗೊತ್ತಿರೋದಿಲ್ಲ.ಆದ್ದರಿಂದ ಈ ಆಸಕ್ತಿ... ಅದೇ ಸ್ವಲ್ಪ ಬೆಳೆಯುತ್ತಾ ಹೋದ ಮೇಲೆ ಅದೆಲ್ಲಾ ನಿತ್ಯ ದರ್ಶಿತ.... ಕೈಯಲ್ಲೇ ಇರುತ್ತೆ.... ಆಸಕ್ತಿ ಕಡಿಮೆಯಾಗುತ್ತೆ.......
yes... ವಿಷ್ಯ ಇರೋದು ಇಲ್ಲಿ.....
ನಾನು ಹೇಳಲು ಹೊರಟಿರೋದೂ ಇದನ್ನೇ....
ಜೀವನದ ಕೊನೆವರೆಗೂ ಅನುಭವಕ್ಕೆ ಏನಾದರೊಂದು ಉಳಿಸಿಕೊಂಡಿರಿ.....
ಕಾಲಮಾನದ ಅಳತೆಯಲ್ಲಿ ಅಜ್ಜನ ತಲೆ ಮೊಮ್ಮಗನ ತಲೆ... ಇಬ್ಬರನ್ನೂ ಇಟ್ಟು ನೋಡಿ.... ಮೊಮ್ಮಗ ಬುದ್ಧಿವಂತ.... ಅಜ್ಜ ಚುರುಕು.... ( ಮೊಮ್ಮಗನಷ್ಟು ವಿಷ್ಯ ಗೊತ್ತಿಲ್ಲದಿರ್ಬಹುದು)
ಅಜ್ಜ ಇನ್ನೂ ಪುಟಿಯೋ ಪಿಂಗ್ ಪಾಂಗ್ ಬಾಲ್....
ಮೊಮ್ಮಗ ಏನೋ ಒಂಥರಾ ರುಟೀನ್ ಬಾಯ್....
ಅಜ್ಜನಿಗೆ touch screen ಮೊಬೈಲ್ ಅಂದ್ರೆ ತುಂಬಾ ಕುತೂಹಲ...ಆಸಕ್ತಿ.
ಮೊಮ್ಮಗನಿಗೆ ಅದೊಂದು ವಿಷ್ಯಾನೇ ಅಲ್ಲಾ.....
ಬದಲಾಗಿಬಿಟ್ಟಿದೆ ಕಾಲ........ಏಕಿದು ಹೀಗೆ?
ಹೂಂ.... because ಅಜ್ಜನ ಕಾಲದಲ್ಲಿ ಒಂದು ಮೋಟರ್ಬೈಕ್ ಬಂದ್ರೆ ರಸ್ತೆಯ ಆಚೆ ಈಚೆ ಜನ ನಿಂತು ನೋಡಿ
"ಇದು ಮೋಟರ್ ಸೈಕಲ್ ಅಂತೆ.. ಪೇಡಲ್ ತುಳೀದೇನೇ ಮುಂದೆ ಹೋಗುತ್ತಂತೆ ಅಂತಾ ಮಾತಾಡ್ತಿದ್ರಂತೆ..
ಅಜ್ಜ ಚಿಕ್ಕವನಿರೋವಾಗ ಆಡಿದ್ದು ಕಬ್ಬಡ್ಡಿ ಗಿಲ್ಲಿ ಮಣ್ಣು ಕಲ್ಲುಗಳಾಟ..... ಕುಂಟಾಟ...
ಆವಾಗ ಟಿ.ವಿ.ಗೊತ್ತಿಲ್ಲಾ ಮೊಬೈಲ್ ಗೊತ್ತಿಲ್ಲಾ ಕಂಪ್ಯೂಟರ್ ಕಾಲಾನೇ ಅಲ್ಲಾ...
ಮೊಮ್ಮಗನ ಕಾಲ ಹಾಗಲ್ಲಾ....
ಭೂಮಿಗೆ ಬರ್ತಾ ಬರ್ತಾನೇ ಕಿವಿಗೆ ಸಿಡಿ ನಲ್ಲಿ song ಕೇಳ್ತಿರುತ್ತೆ....
ಕಣ್ ಬಿಡೋವಷ್ಟರಲ್ಲಿ ಟಿವಿ ಕಾಣುತ್ತೆ.....
ಆಟ ಆಡೋವಷ್ಟಾಗೋದ್ರೊಳ್ಗೆ vedio game ಸಿಗುತ್ತೆ...
abcd ಕಲಿಯೋಕೂ ಮುನ್ನ ಕೈಯಲ್ಲಿ ಮೊಬೈಲ್ ಇರುತ್ತೆ......
ಕಾಲೇಜಿಗೆ ಬರೋ ಹೊತ್ತಿಗೆ ಅಪ್ಪ ಮಾಡಿಟ್ಟಿರೋ ದುಡ್ಡು.... ಬೈಕು ಕಾರುಗಳಿರುತ್ವೆ....
ಹದಿನೆಂಟಕ್ಕೆಲ್ಲಾ ಚಾಟಿಂಗು ಡೇಟಿಂಗು........
ನನ್ ಮಗಾ ಇಪ್ಪತ್ತೆರಡಕ್ಕೆಲ್ಲಾ ಫುಲ್ ಲೈಫ್ ಕವರ್ ಮಾಡ್ಬಿಟ್ಟಿರ್ತಾನೆ.....
ಆಮೇಲೇನಿದೇರಿ ಅನುಭವಿಸೋಕೆ?
ಏನೇ ಮಾಡೋಕೋದ್ರೂ ಬೋರ್ ಹೊಡೆಯೋಕೆ ಶುರುವಾಗ್ಬಿಡುತ್ತೆ.....
ಆಸಕ್ತಿಗಳು ಹಗುಟ್ಟೋದ್ರೊಳ್ಗಡೆ ಕಡಿಮೆಯಾಗಿ ಬಿಡುತ್ವೆ....

once again ಗೆಳೆಯರೇ.......
ಜೀವನದ ಕೊನೆವರೆಗೂ ಅನುಭವಕ್ಕೆ ಏನಾದರೊಂದು ಉಳಿಸಿಕೊಂಡಿರಿ.....
.................................................ರಾಘವ್.