ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Monday, July 22, 2013

ಅವಳ ನೆನಪಾಗಿ....


ನಾನು ನನ್ನವಳಿಗೆ
ನನ್ನವಳು ನನಗೆ
ಕೊಟ್ಟು ಕೊಂಡಿದ್ದೊಂದೇ ಪ್ರೀತಿ ಹಾಡು |
ಭಾವನೆಗಳೊಂದಾಗಿ
ಬದುಕೆಲ್ಲಾ ಚೆಂದಾಗಿ
ಹೆಣೆದು ಕಟ್ಟಿರುವುದೇ ಒಲುಮೆ ಗೂಡು ||

ಅವಳಿಟ್ಟ ಆ ಹೆಜ್ಜೆ
ಘಲ್ಲೆನುವ ಕಾಲ್ಗೆಜ್ಜೆ
ಹೃದಯ ಬಾಗಿಲ ಬಳಿಯೇ ಸದ್ದು ಮಾಡಿ |
ಅವಳ ಆ ಕಣ್ಣೋಟ
ಕನ್ಸನ್ನೆಯೇ ಪಾಠ
ಹೇಗೆ ತಿದ್ದಿದಳೆನ್ನ ಮುದ್ದು ಮಾಡಿ ||

ಅವಳ ಹಣೆ ಬಿಂದಿಯೋ
ಬಿಗಿದ ತೋಳ್ಬಂದಿಯೋ
ಎಲ್ಲಿ ತಾ ಮೈಮುರಿದು ಕೂತಿಹುದು ಅಂದ |
ಆ ಸೀರೆಯಾ ನೆರಿಗೆ
ಹಾಕುವಾಗಲೇ ಮರೆಗೆ
ಹೋಗುತಲಿ ತೋರುವಾ ಹುಸಿಮುನಿಸೇ ಚಂದ ||

ನನ್ನನ್ನೇ ನನ್ನಲ್ಲಿ
ಬಿಡಿ ಬಿಡಿಸಿ ತೋರಿಸುವ
ನನ್ನ ಮನಸು ಇಲ್ಲಿ ಬಿಂಬವಾಗಿಹುದು|
ಕೈಸೊಡರು ಅವಳಾಗಿ
ಬಂದ ದಿನ ನೆನಪಾಗಿ
ಮನದಿ ಮಾಸದ ನೆನಪು ಚಂದವಾಗಿಹುದು ||

                                    - ರಾಘವ್ ಲಾಲಗುಳಿ

["ಪಂಜು"ವಿನ ಪುಟಗಳಲ್ಲಿ ನೋಡಬೇಕೆನಿಸಿದರೆ ಈ ಲಿಂಕ್ ಬಳಸಿ http://www.panjumagazine.com/?p=3282 ]

12 comments:

  1. ಅವಳ ನೆನಪು ಚಂದದ ಕವನವಾಗಿದೆ ರಾಘವ್ ಭಟ್ರೇ...
    ಚೆನ್ನಾಗಿದೆ..

    ReplyDelete
  2. ಅವಳ ಬಗೆಗಿನ ಪದ ಪ್ರಾಸ ಸುಂದರವಾಗಿದೆ.
    " ನನ್ನನ್ನೇ ನನ್ನಲ್ಲಿ
    ಬಿಡಿ ಬಿಡಿಸಿ ತೋರಿಸುವ
    ನನ್ನ ಮನಸು ಇಲ್ಲಿ ಬಿಂಬವಾಗಿಹುದು|"
    ಚೆನ್ನಾಗಿದೆ

    ReplyDelete
  3. ನವಿರು ಭಾವಗಳ ಮೆರವಣಿಗೆ..... ಇಷ್ಟವಾಯ್ತು :)

    ReplyDelete
    Replies
    1. thanks ಕಣೋ...

      ಮೆರವಣಿಗೆಗೆ ಜನ ಬಂದಷ್ಟು ಸಂಬ್ರಮ.....

      Delete
  4. ಸ್ವರ್ಣಾ ಧನ್ಯವಾದಗಳು,...
    ನಿಮಗಿಷ್ಟವಾದರೆ ನಮಗೆ ಖುಷಿ....

    ಬರ್ತಾ ಇರಿ.....

    ReplyDelete
  5. ishta aaythu kavana:)

    "ಅವಳ ಹಣೆ ಬಿಂದಿಯೋ
    ಬಿಗಿದ ತೋಳ್ಬಂದಿಯೋ
    ಎಲ್ಲಿ ತಾ ಮೈಮುರಿದು ಕೂತಿಹುದು ಅಂದ" khushi kotta saalugalu :)

    ReplyDelete
    Replies
    1. ಜೀ....
      ನಿಮ್ಮ ಖುಷಿಯಲ್ಲಿದೆ ನಮ್ಮ ಖುಷಿ...
      ಹೀಗೇ ಬರ್ತಾ ಇರಿ.....

      Delete
  6. ಕಣ್ಣಾ ಸನ್ನೆಯಲೇ ಹೆಣ್ಣಾ ಕೇಳೋನಿವ ...
    ಯಾರಿವ ...ಯಾರಿವನು ?

    ಅವಳಿಗೆ ಬರೆದ ನಿಮ್ಮ ಭಾವ ತುಂಬಾ ಇಷ್ಟವಾಯ್ತು ...
    ತುಂಬಾ ದಿನದ ನಂತರ ಕನಸುಕಂಗಳ ಹುಡುಗನ ಆಲಾಪ ಕೇಳಿದ ಖುಷಿ ನಂದು .

    ಬರೀತಾ ಇರಿ
    ನಮಸ್ತೆ

    ReplyDelete
    Replies
    1. ಚಂದದ ಸಾಲುಗಳ ಪ್ರತಿಕ್ರಿಯೆ...

      ಯಾರಿವ ಯಾರಿವನು,.....

      ಹೂಂ. ಖಂಡಿತಾ... ನೀವೂ ಬರ್ತಾ ಇರಿ
      ನಾವು ಬರೀತಾ ಇರ್ತೀವಿ....

      Delete