ಏನೂ ಗೊತ್ತಗ್ತಾ ಇಲ್ಲಾ.... ಏನೂಂದ್ರೆ ಏನೂ ಗೊತ್ತಾಗ್ತಾ ಇಲ್ಲಾ.... ನನ್ನ ಕೊನೆಯ exam ನಲ್ಲಾದ್ರೂ ಇಷ್ಟು ಚಂದ ಮಾಡಿ ಪೇಪರ್ ಹಾಗೂ ಪೆನ್ನನ್ನು ರೆಡಿ ಮಾಡಿಕೊಂಡು ಬಂದು ಬರೆಯಲು ಕುಂತಿಲ್ಲಾ.... ಅಂಥಾದ್ದರಲ್ಲಿ ನಿನಗಾಗಿ.........
ಆಸ್ಥೆಯೆಂಬುದು ಹುಟ್ಟಿ ಬಂದಿದೆ
ನಿನ್ನ ನೋಟದಿಂದ
ಹೃದಯದಲ್ಲಿ ಚಂದ ಚಂದದ
ನಿನ್ನ ಪ್ರೀತಿ ಬಂಧ ||
You are lucky ಕಣೇ... ಹಂಗಂತ ನೀನು ತಿಳ್ಕೊಂಡ್ರೆ I am very lucky. ನಿಂಗೊತ್ತಾ B.Com ಗೆ ಅಂತಾ college ಗೆ ನೀನು enter ಆದ ದಿನ ....ಆವತ್ತು ಎಲ್ಲರ ಬಾಯಲ್ಲಿ ನಿಂತ ಹೆಸರು ನಿಂದಲ್ಲಾ ಕಣೇ... ಸುಮಾದು. She is real beauty ಅಂತ... ಅದೆಷ್ಟು ಹುಡುಗರ ಬಾಯಲ್ಲಿ ಕೇಳಿದ್ದೆನೋ.... ಆದರೆ ನನ್ನನ್ನು ಮಾತ್ರ ನಿನ್ನ ನೋಟ ಹಿಡಿದು ಬಿಟ್ಟಿತಲ್ಲೇ..... ನೀನೇನೂ ನನ್ನನ್ನೇ ಅಂತಾ ನೋಡಿಲ್ಲ.. ಸಹಜವಾಗಿಯೇ ನೋಡಿದರೂ ನನ್ ಮನ್ಸು ಅದನ್ನು ಒಪ್ಪಿಕೊಳ್ಳೋಕೆ ರೆಡಿ ಇಲ್ಲಾ... ಇನ್ನೂ ನನಗರ್ಥವಾಗದ ವಿಷ್ಯ ಅಂದ್ರೆ ಅದೇ ಕಣೇ ಹುಡುಗಿ.... ಆ ಒಂದು ನೋಟದಲ್ಲೇ ನೀನು ನನ್ನ ಮನಸ್ಸಿನಲ್ಲಿ ಬೇರು ಬಿಟ್ಟು ಕುಳಿತು ಬಿಟ್ಟೆಯಾ ಅಂತ...?
ಆಸ್ಥೆಯೆಂಬುದು ಹುಟ್ಟಿ ಬಂದಿದೆ
ನಿನ್ನ ನೋಟದಿಂದ
ಹೃದಯದಲ್ಲಿ ಚಂದ ಚಂದದ
ನಿನ್ನ ಪ್ರೀತಿ ಬಂಧ ||
You are lucky ಕಣೇ... ಹಂಗಂತ ನೀನು ತಿಳ್ಕೊಂಡ್ರೆ I am very lucky. ನಿಂಗೊತ್ತಾ B.Com ಗೆ ಅಂತಾ college ಗೆ ನೀನು enter ಆದ ದಿನ ....ಆವತ್ತು ಎಲ್ಲರ ಬಾಯಲ್ಲಿ ನಿಂತ ಹೆಸರು ನಿಂದಲ್ಲಾ ಕಣೇ... ಸುಮಾದು. She is real beauty ಅಂತ... ಅದೆಷ್ಟು ಹುಡುಗರ ಬಾಯಲ್ಲಿ ಕೇಳಿದ್ದೆನೋ.... ಆದರೆ ನನ್ನನ್ನು ಮಾತ್ರ ನಿನ್ನ ನೋಟ ಹಿಡಿದು ಬಿಟ್ಟಿತಲ್ಲೇ..... ನೀನೇನೂ ನನ್ನನ್ನೇ ಅಂತಾ ನೋಡಿಲ್ಲ.. ಸಹಜವಾಗಿಯೇ ನೋಡಿದರೂ ನನ್ ಮನ್ಸು ಅದನ್ನು ಒಪ್ಪಿಕೊಳ್ಳೋಕೆ ರೆಡಿ ಇಲ್ಲಾ... ಇನ್ನೂ ನನಗರ್ಥವಾಗದ ವಿಷ್ಯ ಅಂದ್ರೆ ಅದೇ ಕಣೇ ಹುಡುಗಿ.... ಆ ಒಂದು ನೋಟದಲ್ಲೇ ನೀನು ನನ್ನ ಮನಸ್ಸಿನಲ್ಲಿ ಬೇರು ಬಿಟ್ಟು ಕುಳಿತು ಬಿಟ್ಟೆಯಾ ಅಂತ...?
ಮೊದಲ ದಿನದಿಂದ್ಲೇ ನಿನ್ನನ್ನು ನೋಡ್ತಿದೀನಿ ಕಣೆ... ಗುಂಪಿನಲ್ಲಿ ಗೋವಿಂದ ಆಗ್ಬೇಕು ಅಂದ್ಕೋತೀಯಾ.... ಆದರೆ ಕೋಹಿನೂರ್ ವಜ್ರದಂತಹ .. ಹೊಳೆವ ಕಳ್ಳಿ ನೀನು.... ಹೃದಯ ಕದ್ದು ತನಗೆ ಗೊತ್ತೇ ಇಲ್ಲಾ ಅನ್ನೋ ಥರಾ ಹೋಗ್ತಿರ್ತೀಯಾ.. ನನ್ನ ಕಣ್ಣನ್ನು ಮಾತ್ರ ತಪ್ಪಿಸಿಕೊಂಡು ಹೋಗಲಿಕ್ಕೆ ಆಗ್ಲೇ ಇಲ್ವಲ್ಲೇ .....
ನೀನು ಎದುರಾದಾಗಲೆಲ್ಲಾ ಕಳ್ಳಿ ನೀನು ಹೃದಯ ಕದ್ದಿದೀಯಾ ಅನ್ಬೇಕು ಅಂದ್ಕೋತೀನಿ.... ಇನ್ನೂವರೆಗೂ ಆಗ್ಲೇ ಇಲ್ಲಾ.... ನನ್ನ ಹೃದಯವನ್ನು ನನಗೆ ಮರಳಿ ಕೊಡ್ತೀಯೇನೋ ಅಂತ ಕಾಯ್ತಾ ಇದೀನಿ... ಕೊಟ್ಟಿಲ್ಲಾ ನೀನು.. ಕೊಡೋಲ್ಲಾ ನೀನು ಪಾಪಿ... ಕೊನೇ ಪಕ್ಷ ಮರಳಿ ಕೊಡೋದಿಕ್ಕಾ ಹುಡುಗಾ ನಾನು ಕದ್ದುದ್ದು ಅಂತಾದ್ರೂ ಒಂದ್ಮಾತು ಹೇಳ್ಬಹುದಿತ್ತಲ್ಲಾ.... ಯಾಕೆ ಕಾಡಿಸ್ತೀಯಾ.....
ಆವತ್ತೊಂದು ದಿನ ಆ ಪುಡಿ ಬಣ್ಣದ ಪುಟ್ಟ ಚುಡಿಯಲ್ಲಿ ಹೆಜ್ಜೆ ಹೆಜ್ಜೆಯಾಗಿ ನಡೆದು ಬಂದು ಅದೆಷ್ಟು ಮಧು ಮಧುರವಾಗಿ ದಿಟ್ಟಿಸಿದ್ದೆ.. ಆಚೂಡಿಯ ಹೊಳೆವ ಝರಿಯಂಚು ನಿನ್ನ ಗೆಜ್ಜೆಗೆ ಸಿಕ್ಕಿ ನೀ ಎಡವಿದಂತಾದಾಗ.. ನನಗೇ ಗೊತ್ತಿಲ್ಲದಂತೆ ಎರಡೆಜ್ಜೆ ಮುಂದೆ ಬಂದು "ಏ" ಅಂದಿದ್ದೆ... ನೆನಪಿದೆಯಲ್ವಾ.....? ಅದನ್ನು ಎಷ್ಟು ಚುರುಕಾಗಿ ಗಮನಿಸಿ ಮುಗುಳು ನಕ್ಕಿದ್ದೆಯಲ್ಲಾ... ನನ್ನೆದೆಯನ್ನು ನಗಾರಿ ಮಾಡಿಸಿ....ಪಾಪಿ ಯಾಕೇ ಗೊತ್ತಾಗಿಲ್ಲಾ ನಿನಗೆ ಇದು ಪ್ರೀತಿ ಅಂತಾ.......
ಹೀಗೇ ದಿನಂಪ್ರತಿ ಏನೇನೋ ತೊಳಲಾಟಗಳ ನಡುವೆಯಲ್ಲೆಲ್ಲೋ ಅಂದ್ಕೊಂಡ್ಬಿಟ್ಟಿದ್ದೀನಿ ಇದು ಪ್ರೀತಿ ಅಂತಾ....
ಧೈರ್ಯ ಮಾಡಿ ಚಂದ ಚಂದಾಗಿ ಒಂದು ಪ್ರೇಮ ಪತ್ರ ಬರೆದು ಬಿಟ್ಟೆನಲ್ಲಾ... ಎಷ್ಟು ಕಸರತ್ತಿನಿಂದ.... ಬೆಳೆಗೆರೆ ಸಾಹಿತ್ಯ ಶೈಲಿ... ಭೈರಪ್ಪನ ತುಂಟು ಕಲ್ಪನೆ.... ಕೆ.ಎಸ್.ನ ಪ್ರೇಮ ಕಾವ್ಯಧಾರೆ.... ಎಲ್ಲಾ ಸೇರಿಸಿ ನಿನಗಾಗಿ ಒಂದು ಪ್ರೇಮ ಲಕೋಟೆ ಸಿದ್ದಪಡಿಸಿಬಿಟ್ಟೆನಲ್ಲಾ... ತಾಜಮಹಲಿನಷ್ಟು ಪ್ರೀತಿಯಿಂದ.....
ಬೆಚ್ಚಗೆ ಪ್ರೀತಿಯಿಂದ ಲಕೋಟೆಯೊಳಗೆ ಮಡಿಸಿಟ್ಟ ಆ ಪತ್ರಾನಾ ನಿನ್ನ ಮಡಿಲಿಗೆ ಹಾಕಬೇಕಂತ ಾವತ್ತು exam ನ ಕೊನೇ ದಿನ ಎಷ್ಟೊತ್ತಿನಿಂದ ಕಾದು ಕುಳಿತಿದ್ದೆ ಗೊತ್ತಾ... ಕೊನೆಗೂ ನೀ ಒಬ್ಳೇ ಬಂದುಬಿಟ್ಟೆ... ನಿನಗೆ ಕೊಡಬೇಕಂತ ಅಂದುಕೊಳ್ಳುವಷ್ಟರಲ್ಲೇ ಧೈರ್ಯ ಉಡುಗಿ... ಕೈ ನಡುಗಿ....ಮಾತು ತೊದಲಿ Best of luck ಅಂತ ಮಾತ್ರ ಅಂದು ಬಂದುಬಿಟ್ನಲ್ಲಾ...
ಅಂದು ಕೈ ಜಾರಿದವಳು ನೀನು ಇನ್ನೂ ಸಿಕ್ಕೇ ಇಲ್ವಲ್ಲೇ.....
ನನ್ನ ಮನದ ಜಾತ್ರೆಯಲ್ಲಿ ಸುಳಿದ ಜಾಜಿ ಕಣೇ ನೀನು... ಒಂದು ಬಾರಿ ಬಂದು ಬಿಡು ಗೆಳತಿ....
ಓಲೆ ಕೈಲಿಡಿದು ಕಾಯುತ್ತಿದ್ದೇನೆ....
ಹೃದಯ ತುಂಬೆಲ್ಲಾ ಕನಸ ಹೊತ್ತು......
............................. ನಾನು ನಿನ್ನವನು.
-ರಾಘವ್ ಲಾಲಗುಳಿ.
ಅಣ್ಣಾ ಮದ್ವೆ ಆತು ನಿಂಗೆ ಸಾಕು ಓಲೆ ಬಿಸಾಕು.... ;) ಅತ್ಗೆ ಹೊಡಿತು.... ;)
ReplyDeleteನಿಜವಾಗಲು ನೀ ಕನಸಿನ ಹುಡ್ಗಾ ಹೌದಪ ಹೌದು...! nice.. :)
ಕಿಮಿ ಹಿಂಡ್ತೆ ನೋಡು...
ReplyDeleteಮದ್ವೆ ಮಾಡಿರಾರು ಸುದಾರಸ್ತೆ ಅಂದ್ಕಂಡ್ರೆ ಇನ್ನೂ ಬಿಟ್ಟಿದ್ಲ್ಯಲ ಹಳೆ ಕೂಸ್ನ ರಾಗ ಹಾಡುದ...:):):)
:::
::
:
ಆದ್ರೂ ಒನಮ್ನಿ ಲೈಕಿದ್ದು ನೀ ಬರದ್ದು...
ಏನೇನೋ ಹಳೆ ನೆನ್ಪಲ್ಲಾ ಮರಕಳ್ಚದಂಗಾತು...:):):)
ಕಾವ್ಯಾ...ಅತ್ಗೆಗೆ ಕಾಣ್ಸ್ತಾನೇ ಬರ್ದಿದ್ದು ಮಾರಾಯ್ತಿ ಇದು.....
ReplyDeleteತನ್ಗೂ ಒಂದ್ನಾಲ್ಕು ಬರಿ ಹೇಳಿದ್ದು....
ಹ್ಹ ಹ್ಹ ಹ್ಹಾ......
*************
ಮಗಾ....
ಅರೆ ನಡೆಯೋದ್ ನಡೀತು.....
ನಾವ್ ಬದಲಾಗ;ಲಾಗ್ತಾ ....
ನಾವು ನಾವೇ....
ಕೈಗೆ ಸಿಗದೇನೇ ಕಾಡ್ತಾ ಇರಲಿ ಬಿಡು
ReplyDeleteಈಗ ಬಂದ್ರೆ ಸಮಸ್ಯೆ ಅಪ್ಪು...
ಚೆನ್ನಾಗಿದ್ದು
s.....
Deleteಯಾವ್ದೇ ಆದ್ರೂ ಕೈಗೆ ಸಿಗದೇ ಕಾಡ್ತಾ ಇದ್ರೇನೇ ಚಂದ.....
ಕೈಗೆ ಸಿಕ್ಕರೆ ಅದರೆಡೆಗಿನ ತುಡಿತ ಮುಗೀತು......
ಕೆಳಗಿನ ಸಾಲಿನ ಸಮಸ್ಯೆಗೆ ಉತ್ತರ ಇಲ್ಲಾ ದೊರೆ......
Great CRUSH!!!
ReplyDeleteಟ್ರೈನ್ ಹೋದಮೇಲೆ AC ಟಿಕೆಟ್ ಕೇಳಿದಾಂಗೆ ಕಾಣ್ತು. ...
ಚೆನ್ನಾಗಿದ್ದು..
ಅಷ್ಟ್ ಕಂಡ್ರೆ ಬರ್ದಿದ್ದು ಸರಿ ಆದಂಗಾತು.....
ReplyDeleteಧನ್ಯವಾದ.....
istha aithyu
ReplyDelete