ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....

ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
Save

Tuesday, May 29, 2012

ಪ್ರೀತಿಗೆ ಕಾರಣವೇನಿತ್ತೇ........














ಏನಿತ್ತೇ ಹುಡುಗಿ ಏನಿತ್ತೇ?
ಪ್ರೀತಿಗೆ ಕಾರಣವೇನಿತ್ತೇ...

ಭಾವವಿತ್ತೇ.. ಪ್ರಭಾವವಿತ್ತೇ...
ನಿನ್ನ ಕಂಡ ಕ್ಷಣ ಏನಿತ್ತೇ.......
ಮಧುವಿತ್ತೇ ಮಧುರತೆಯಿತ್ತೇ...
ಪ್ರೀತಿಯಲಿ ತೇಯ್ದ ಶ್ರೀಗಂಧವಿತ್ತೇ...||


ಅಂದ ನೋಡಿದೆನಾ ನಾ
ಚಂದ ನೋಡಿದೆನಾ...
ಪ್ರೀತಿ ಅಂಕುರಿಸಲು ನಿನ್ನ ಕಾಡಿದೆನಾ...
ಅರಿತು ಪ್ರೀತಿಸಲಿಲ್ಲ
ಮರೆತು ಹೋಗಲೂ ಇಲ್ಲ..
ಪ್ರೀತಿಗೆ ಕಾರಣ ಏನಿತ್ತೇ.....||


ಕಾರಣವಿಲ್ಲದೇ ಮನಸಲಿ ಕುಳಿತ
ಬಾವನೆಯೊಳಗಡೆ ಏನಿತ್ತೇ....
ಹೃದಯವು ಪಲ್ಲವಿಸಿದ ಆ ಕ್ಷಣಕೆ
ಕಾರಣ ಹುಡುಕುವ ಅರಿವಿತ್ತೇ....||


ಒಲವಿತ್ತೇ ಹುಡುಗಿ ಛಲವಿತ್ತೇ
ಪ್ರೀತಿಯ ಬಾಚುವ ಹಂಬಲವಿತ್ತೇ
ಕಾರಣವಿಲ್ಲದೇ ಪ್ರೀತಿಗೆ ಬೀಳಲು
ಅಮೃತ ಗಂಗೆಯ ಸೆಳವಿತ್ತೇ....||


ಏನಿತ್ತೇ ಹುಡುಗಿ ಏನಿತ್ತೇ?
ಪ್ರೀತಿಗೆ ಕಾರಣವೇನಿತ್ತೇ...

10 comments:

  1. ಹೂಂ.....
    ಮೊದ ಮೊದಲೆಲ್ಲಾ ಹಿಂಗೇ ಇತ್ತು...
    2005 ರಲ್ಲಿ ...........

    ReplyDelete
  2. ಪ್ರೀತಿಗೆ ಕಾರಣ ಹುಡುಕುವ ಹಂಗೇಕೆ...
    ಪ್ರೀತಿ ಫಲಿಸಿದ ಮ್ಯಾಕೆ...
    ಕಾಪಿಟ್ಟುಕೊಂಡರೆ ಸಾಕು ನೂರ್ಕಾಲ ಸಡಿಲದಂತೆ ಅದರ ತೆಕ್ಕೆ...
    :::
    ::
    :
    ಚಂದ ಚಂದ ಸಾಲುಗಳು .....

    ReplyDelete
  3. ಆ ಹಂಗು ನಂಗು ಬ್ಯಾಡಾಗೈತೋ ಯಪ್ಪಾ.....
    ಬದುಕು ತುಂಬಾ ದೂರೈತಿ......

    ಕಂಡವ್ಯಾರಿದಾನ........

    ನಾವ್ ಕಂಡಂಗ್ ಇದ್ರ ಭಾಳ್ ಫಸಂದ್ ಇರ್ತದ ನೋಡ್...

    ಹಂಗ....ಇರ್ಲಿ ಅಂದ್ಕೋಂತ್ ನಡ್ಯೋದ್.....

    ಏನಂತೀದಿ?

    ReplyDelete
    Replies
    1. ಬದುಕಿಗೆ ಅರ್ಥ ಬದುಕಿನ ನಿಗೂಢತೆಯಲ್ಲೇ...
      ನಮ್ಮಂತೆ ಅದೂ ನಡೆದರೆ ಅದಕೇನೈತೆ ಬೆಲೆ...
      ಮನಸು ಸಾವಿರ ಬಯಸತ್ತೆ...
      ಬದುಕು ನೀಡಿಯೂ ನೀಡದಂತೆ ಕಾಡುತ್ತೆ...
      ಅದರಲ್ಲೇ ಐತಲ್ಲೋ ಮಗಾ ಮಜಾ...

      Delete
  4. ನಾವ್ ಕಂಡಂಗ್ ಇದ್ರ ಸುಖಾನ...ಇರ್ತದ........
    ಸುಖಾ ಇರ್ತದ .... ಮಜಾ ಇಲ್ ಬಿಡು....

    ಆ ದ್ಯಾವ್ರು suspence create ಮಾಡಿಡ್ತಾನ್ ನನ್ ಮಗ.....

    ReplyDelete