ಒಲ್ಮೆಯಲಿ ಕರೆದಿರುವೆ
ಬಾಳ ಬಳಿ ಬಾರೆಂದು
ಯಾವ ಉಲಿತಕೆ ನೀನು
ಕರಗೋ ಹೆಣ್ಣು
ವರುಷವಾಯಿತು ಚಿನ್ನ
ಪ್ರೀತಿ ಕನಸನು ಕೂಡಿ
ನೀ ಬರದಿರೆ ಹೃದಯ
ಬರಿಯ ಹುಣ್ಣು || ಪ್ರೀತಿ ಎನ್ನುವುದು ಗುಬ್ಬಚ್ಚಿ ಗೂಡು ಕಟ್ಟಿದ ಹಾಗೆ. ತುಂಬಾ ನಾಜೂಕಾಗಿ ಹೆಣೆದಿರುವಂತಹ ಬಂಧ ಇದು. ಎಷ್ಟೆಷ್ಟೋ ಕಾಲ ಕನಸುಗಳನ್ನು ಕೂಡಿ.....ಹೃದಯವನ್ನು ಹದಮಾಡಿ ಅದಕ್ಕೊಂದು ಒಲ್ಮೆಯ ಭಾವದ ಕಲೆಕೊಟ್ಟು ಕಡೆದಿರುವಂತಹ ಸ್ಪಟಿಕದಞ್ಟು ತಂಪು ತಂಪು ಈ ಪ್ರೀತಿ.
ಇಂದು ಪ್ರೇಮಿಗಳ ದಿನ........
ಎಷ್ಟು ಹೃದಯಗಳಲ್ಲಿ ಪ್ರೀತಿ ಮೊಗ್ಗಾಗಿ ಕುಳಿತು ಈ ದಿನಕ್ಕಾಗಿ ಕಾಯುತ್ತಿದೆಯೋ....... ನಿನ್ನೆಯ ರಾತ್ರಿಗಳಲ್ಲಿ ನಿದ್ರಿಸದೇ ಅದೆಷ್ಟು ಪ್ರೀತಿ ಹೃದಯದ ಒಡೆಯರು, ನಾಳೆಯ ದಿನವಾದರೂ ಅವಳೆದುರಿಗೆ ಪ್ರೀತಿ ಹೇಳಿಬಿಡೋ ಧೈರ್ಯ ಕೊಡು ಭಗವಂತಾ ಅಂತ ಪ್ರಾರ್ಥಿಸಿದ್ದಾರೋ...... ಎಷ್ಟು ಹೃದಯದ ಗೂಡುಗಳು ಭಾವುಕತೆಯ ಪ್ರಕಂಪನದ ಭೂಕಂಪಕ್ಕೆÌ ನಡುಗಿಬಿಟ್ಟಿದ್ದಾವೋ?
ಪ್ರತಿದಿನ ಬೆಳಿಗ್ಗೆ ಬಾಗಿಲು ತೆರೆದೊಡನೆ ಕಾಣುವ ಎದುರುಮನೆಯ ರಂಗೋಲಿಯ ಹುಡುಗಿ, ಬಸ್ ಸ್ಟಾಪಿನಲ್ಲಿ ಜೊತೆಯಾಗಿ ಬಸ್ಸಿಗಾಗಿ ಕಾಯುವವರು, ವಾರಕ್ಕೊಮ್ಮೆ ಬಸ್ಸಿನಲ್ಲಿ ಕಾಣೋ ಅರೆಪೇಟೆ ಹುಡುಗ, ಶನಿವಾರ ಮಾತ್ರ ಹನುಮಂತನ ಗುಡಿಯಲ್ಲಿ ಪ್ರದಕ್ಷಿಣೆ ಹಾಕುತ್ತಾಕಣ್ಣ ಕೊನೆಯಿಂದ ನೋಡುವ ಎರಡು ಜಡೆಯ ಹುಡುಗಿ, ತಾರಸಿಯ ಮೇಲೆ ಬಾಡಿಗೆಗಿರುವ ಪಕ್ಕಾ ಹಳ್ಳಿಯ ಹುಡುಗ, ವಯಸ್ಸು ಇಪ್ಪತ್ತಾದರೂ ಓಣಿಯ ಮಕ್ಕಳ ಜೊತೆ ಕುಂಟಾ ಬಿಲ್ಲೆ ಆಡುವ ಲಂಗಾ ದಾವಣಿ ಹುಡುಗಿ, ಹೀಗೆ ಯಾರ ಪ್ರೀತಿ ಯಾರ ಕಡೆ ಹರಿಯುತ್ತಿರುತ್ತದೋ.....? ಎಷ್ಟು ಪ್ರೇಮಿಗಳು ಅವಳೆಡೆಗೆ/ಅವನೆಡೆಗೆ ಸಾಗಲು ಭಾವ ಸೇತುವೆಯನ್ನು ನಿರ್ಮಿಸಿ ಈ ದಿನಕ್ಕಾಗಿ ಕಾಯುತ್ತಿದ್ದಾರೋ.....ಅವರೆಲ್ಲರಿಗೂ ಇದು ಹೃದಯ ಹೂಬಿಡುವ ಕಾಲ......
ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ
ನನ್ನ ಮನಸು ||

ಪ್ರೀತಿ ತಾಜಮಹಲ್ ಕಟ್ಟಿಸುತ್ತದೆ, ಪ್ರೀತಿ ತೇಲಾಡಿಸುತ್ತದೆ, ಪ್ರೀತಿ ಬಣ್ಣ ತೋರಿಸುತ್ತದೆ, ಪ್ರೀತಿ ಕನಸ ಕಾಣಿಸುತ್ತದೆ, ಪ್ರೀತಿ ಒಲವ ತೋರಿಸುತ್ತದೆ, ಪ್ರೀತಿ ಪ್ರಾಣ ನೀಡುತ್ತದೆ, ಪ್ರೀತಿ ಪಾತಕಗಳನ್ನು ಮಾಡಿಸುತ್ತದೆ. ಪ್ರೀತಿ ಪ್ರಾಣ ಬೇಡುತ್ತದೆ, ಉತ್ಕೃಷ್ಟರೆಯ ಪ್ರೀತಿ ಏನೇನೆಲ್ಲವನ್ನೂ ಮಾಡಿಸಿಬಿಡುತ್ತದೆ. ಪ್ರೀತಿಯಲ್ಲಿ ಒಂದಾದವರಿಂದ ಹಿಡಿದು ಪ್ರೀತಿಯಿಂದ ತಳ್ಳಲ್ಪಟ್ಟವರ ವರೆಗೆ ಪ್ರತಿಯೊಬ್ಬರೂ ಕೂಡಾ ಒಂದಿಲ್ಲೊಂದು ಸಲ ಕೇಳಿಕೊಂಡಿರುತ್ತಾರೆ.. “ಪ್ರೀತಿ ನೀ ಹೀಗೇಕೆ?”

ಇಂದು ಪ್ರೇಮಿಗಳ ದಿನ. ಪ್ರೀತಿಯನ್ನು ಯಾಚಿಸಿ ಅದೆಷ್ಟು ಪ್ರೇಮ ಹೃದಯಗಳು ಮುಂದೆ ನಿಲ್ಲುತ್ತವೋ.... ನಿಮ್ಮ ಮುಂದೂ ನಿಲ್ಲಬಹುದು. ಇಷ್ಟವಿದ್ದರೆ ಒಪ್ಪಿಕೊಂಡು ಬಿಡಿ. ಬಿಂಕ ತೋರಿಸಬೇಡಿ. ಇಷ್ಟವಿಲ್ಲದಿದ್ದರೆ ಸಾರಿ ಅಂದುಬಿಡಿ.. reject ಮಾಡಿದಾಗ ಬೇಸರ ಆಗೇ ಆಗುತ್ತದೆ ನಿಜ.... ಆದರೆ ಆದಷ್ಟು ಕಡಿಮೆ hurt
ಆಗೋ ಹಾಗೆ ನಯವಾಗಿ reject ಮಾಡಿ.. ಯಾವುದೇ ಕಾರಣಕ್ಕೂ ಪ್ರೀತಿ ಬೇಡಿ ಬಂದವರನ್ನ ಆಡ್ಕೋಬೇಡಿ. ಏಕೆಂದರೆ ನಿಮಗೇ ಗೊತ್ತಿಲ್ಲದೇನೇ ಅವರು ನಿಮಗೋಸ್ಕರ ಏನೇನೋ ಮಾಡಿರಬಹುದು.. ಬರವಣಿಗೆಯೇ ಗೊತ್ತಿಲ್ಲದಿದ್ರೂ ವಾರವಿಡೀ ಕೂತು ಚಂದವಾಗಿ ಅಕ್ಷರಗಳನ್ನು ಹೆಣೆದು ಎರಡು ಪೇಜ್ ಓಲೆ ಬರೆದಿರ್ತಾರೆ..... ಜೀವನದಲ್ಲಿ ಒಂದೇ ಒಂದು ಪದ್ಯ ಓದಿಲ್ದೇ ಇದ್ರೂ ನಿಮಗೋಸ್ಕರ ಒಂದು ಚಂದನೆಯ ಕವನ ಬರೆದಿರ್ತಾರೆ.... ನಿಮಗಿಷ್ಟವಿಲ್ಲಾಂತ ಸಿಗರೇಟ್ ಸೇದೋದನ್ನ ಬಿಟ್ಟಿರ್ತಾರೆ, ನಿಮಗಿಷ್ಟಾಂತ ಇನ್ ಶರ್ಟ ಮಾಡ್ತಿರ್ತಾರೆ, ನಿಮಗೆ ದೇವರ ಮೇಲೆ ಭಕ್ತಿ ಜಾಸ್ತಿ ... s so ಅವರು ದೇವಸ್ಥಾನಕ್ಕೆ ಹೋಗೋದನ್ನ ರೂಢಿ ಮಾಡ್ಕೊಂಡಿರ್ತಾರೆ...

ಅವಳಾದರೂ ಹಾಗೇ...
ನಿಮಗಿಷ್ಟಾಂತ ಹಣೆಮೇಲೆ ಕುಂಕುಮ ಇಟ್ಕೊಳ್ಳೋದನ್ನ ರೂಢಿ ಮಾಡ್ಕೊಂಡಿರ್ತಾಳೆ, ನಿಮಗಿಷ್ಟವಿಲ್ಲಾಂತ ಜೀನ್ಸ್ì ಹಾಕೋದನ್ನ ಕಡಿಮೆ ಮಾಡಿರ್ತಾಳೆ, ನಿಮಗಿಷ್ಟಾಂತ ಹಾಡೋದನ್ನ ಕಲ್ತಿರ್ತಾಳೆ, ನಿಮಗಿಷ್ಟವಿಲ್ಲಾಂತ ಹುಡುಗರ ಜೊತೆ ಹರಟೆ ಹೊಡೆಯೋದನ್ನ ಕಡಿಮೆ ಮಾಡಿರ್ತಾಳೆ.. ಅವಳ ಇಷ್ಟಗಳನ್ನೆಷ್ಟೋ ನಿಮಗೋಸ್ಕರ
sacrifice ಮಾಡ್ಕೊಂಡಿರ್ತಾಳೆ. ಇವೆಲ್ಲವೂ ಕೂಡಾ ಹುಚ್ಚು ಅಂತಾ ಅನ್ಸಬಹುದು.. ಆದರೆ ಅವರದೂ ಕೂಡಾ ಒಂದು ಹೃದಯ ತಾನೇ? ಆ ಹೃದಯದಲ್ಲಿ ನಿಮಗೋಸ್ಕರ ಒಂದು ತಾಜಮಹಲನ್ನು ಕಟ್ಟಿ ಅಲ್ಲಿ ದಿನವೂ ದೀಪ ಹಚ್ಚುತ್ತಿರಬಹುದು. ನಿಮಗೋಸ್ಕರ ಅವರು ಆ ಹೃದಯಕ್ಕೊಂದು ನಿಯತ್ತು ಕಲಿಸಿಕೊಟ್ಟಿರ್ತಾರೆ. ತಪ್ಪು ಎಷ್ಟೋ ಮಾಡಿರ್ಬಹುದು..... ನಿಮಗೋಸ್ಕರ ಶುದ್ಧರಾಗೋ ಪ್ರಾಮಾಣಿಕರಾಗೋ ಪ್ರಯತ್ನ ಮಾಡಿರ್ತಾರೆ. ಹೃದಯದಲ್ಲೊಂದು ಅರಮನೆಯನ್ನು ಕಟ್ಟಿ ಅಲ್ಲಿè ನಿಮ್ಮನ್ನು ರಾಣಿಯನ್ನಾಗಿಸಿಕೊಂಡಿರ್ತಾರೆ. ತಮ್ಮನ್ನು ರಾಜರ ಬದಲು ಸೇವಕರನ್ನಾಗಿ ಮಾಡಿಕೊಂಡಿರ್ತಾರೆ. ನಿಮ್ಮೆದುರಿಗೆ ಬಾಗುತ್ತಿರುತ್ತಾರೆ.. ಪ್ರೀತಿಗೆ ಬಾಗಿಸುವ ಶಕ್ತಿಯಿದೆ… ಮತ್ತು ಅವರು ನಿಮ್ಮನ್ನು ಪ್ರೀತಿಸ್ತಿರ್ತಾರೆ.
Friends ನಿಮ್ಮ ಹೃದಯದಲ್ಲೂ ಪ್ರೇಮ ಮೂಡಿರ್ಬಹುದು.. ನಿಮ್ಮ ಕನಸುಗಳೂ ಕಮಾನು ಕಟ್ಟುತ್ತಿರಬಹುದು.. ಕನಸುಗಣ್ಣು ಕಾಮನ ಬಿಲ್ಲಿನ ಏಳು ಬಣ್ಣಗಳನ್ನು ಎಣಿಸಲಿಕ್ಕಾಗದೇ ಇರುವಷ್ಟು ಬಣ್ಣಗಳಿಂದ ತುಂಬಿರಬಹುದು.. ಓಡಿಸಲು ಸಾಧ್ಯವೇ ಇಲ್ಲ ಎನ್ನುವಷ್ಟುÖ ದಟ್ಟವಾದ ನಗು ಮುಖದಲ್ಲಿ ಮಂದಹಾಸ ಮೂಡಿಸಿರಬಹುದು.. ಮುಟ್ಟಿದರೆಲ್ಲಿè mark ಆಗಿಬಿಡುತ್ತೋ ಎನ್ನುವಷ್ಟು ಹೃದಯ ಮೃದುವಾಗಿರಬಹುದು.. ಭಾವನೆಗಳು ಒಸರುತ್ತಿರಬಹುದು.. ಅವನ/ಅವಳ ನೆನಪಾದಾಗಲೆಲ್ಲಾ ಹೃದಯ ರಚ್ಚೆ ಹಿಡಿಯುತ್ತಿರಬಹುದು.. ಹಾಗಿದ್ದರೆ ತಡಮಾಡಬೇಡಿ.. ಹೇಳಿಬಿಡಿ... ನನ್ ಹೃದಯ ಬೃಂದಾವನದಲ್ಲಿ ಅರಳೋ ಹೂಗಳೆಲ್ಲಾ ನಿನಗೋಸ್ಕರ ಅಂತಾ.
ಕೂಗಿ ಹೇಳಿಬಿಡಿ
I LOVE U….
(Hello…. ನಂಗೂ ಹೇಳೋದಿದ್ರೆ ಹೇಳ್ಬಿಡಿ.. next time ಈ ಅವಕಾಶ ಸಿಗ್ಲಿಕ್ಕಿಲ್ಲಾ..
be brave.. think +++)
************************** ರಾಘವ್.
ಸರ್ವಂ ಪ್ರೇಮಮಯಂ...
ReplyDeleteಆದ್ರೆ
ತುಂಬಾ ಜನ ಹೇಳಿದ್ರೆ ಆಯ್ಕೆ ಕಷ್ಟ ಆದೀತು ಕಣೋ...