ಮೌನ ಬದುಕಿಗೆ ಅರ್ಥ
ಮೌನ ಮಾತಿಗೆ ವ್ಯರ್ಥ
ಭಾವ ಭಾವದ ತುಣುಕು
ಮೃದು ಮೌನದಲಿ ಹುಡುಕು ||
ಮೌನ ಸಾಗರವಹುದು
ಮಾತೊಂದು ಕೆರೆ ಹುಚ್ಛ
ಮೌನ ಸಂವೇದನೆಗೆ
ಮೌನದರ್ಥವೇ ಸ್ವಚ್ಛ ||
ಕಳೆದದ್ದು ಮಾತು
ಹುಡುಕಿದ್ದು ಮೌನ
ಮೌನ ಪ್ರಖರತೆ ಮುಂದೆ
ಮಾತೊಂದು ಗೌಣ ||
ಮಾತು ತಾರಿಕೆಯಾಯ್ತು
ಮೌನ ತಾ ಚಂದ್ರಮನು
ಮೌನ ಹಗಲೂ ಇರುಳು
ಮಾತು ಬೆಳಕಿಗೆ ಮರುಳು||
ಮಾತು ಮಾಣಿಕ ನಿಜ
ಮಾತೆಲ್ಲ ಮಾಣಿಕವಲ್ಲ
ಮೌನದಲಿ ವಿರಸವಿಲ್ಲ
ಮಾತಿನಲಿ ಉಂಟಲ್ಲ.||
(ಮಾತು ತಾರಿಕೆಯಾಯ್ತು, ಮೌನ ತಾ ಚಂದ್ರಮನು ಇಲ್ಲಿ ಮಾತನ್ನು ನಕ್ಷತ್ರಕ್ಕೂ ಮೌನವನ್ನು ಚಂದ್ರನಿಗೂ ಹೋಲಿಸಿ, ಮೌನ ಹಗಲೂ ಇರುಳು ಅಂದರೆ ರಾತ್ರಿ ಕಳೆದು ಬೆಳಕಾದ ಮೇಲೂ ಚಂದ್ರ ಬಾನಿನಲ್ಲಿ ಕಾಣಿತ್ತಾನೆ ಆದರೆ ನಕ್ಷತ್ರಗಳು ಹಾಗಲ್ಲ ॒ಬೆಳಕಾಗುತ್ತಿದ್ದ ಹಾಗೆ ಜಾರಿ ಮಾಯವಾಗಿ ಬಿಡುತ್ತವಲ್ಲಾ ॒ಹಾಗೇ ಮೌನ ಯಾವಾಗಲೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಿಡುತ್ತೆ ಅಂತ ಹೇಳೋ ಪ್ರಯತ್ನ ಅಷ್ಟೇ)
10.06.2013ರಂದು “ಪಂಜು” ವಿನಲ್ಲಿ ಪ್ರಕಟಿಸಲ್ಪಟ್ಟಿದೆ. ಪಂಜುವಿನ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ
ಇಲ್ಲಿ ಮಾತೂ ಮೌನದೊಂದಿಗೆ ಮಾತಾಡಿದಂತೆ ಭಾಸವಾಯಿತು... ಇಷ್ಟವಾಯಿತು ರಾಘವ್ ಜೀ..
ReplyDeleteಮಾತು ಹಾಗೂ ಮೌನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ...
Deleteಒಂದಕ್ಕೊಂದು ಪೂರಕ ಮತ್ತು ವಿರುದ್ಧ... ಒಂದು ದೃಷ್ಡಿಯಲ್ಲಿ ಎರಡೂ...
ಎಲ್ಲಾ ಸೇರಿ ಹೀಗೆ ಬಂದಿದೆ ನೋಡಿ.....
ಇಷ್ಟಪಟ್ಟಿದ್ದಕ್ಕೆ ಖುಷಿಯಿದೆ..
nimma prayatna yashasviyaagide....
ReplyDeletetumbaa chennaagi barediddeeri...
ಸರ್... ಹಾಗಂತೀರಾ.....
Deleteಹೀಗೆ ಅನುಭವಸ್ಥರು ಹೇಳಿದರೇನೆ ನಮಗೆ ಧೈರ್ಯ ಬರೋದು..
ಶರಣು ಶರಣು...
ಎಲ್ಲಾ ಭಾವಗಳನೂ ಮೌನದಲೇ ಬಿಡಿಸಿಟ್ಟಿದ್ದು ಖುಷಿ ಕೊಡ್ತು ..
ReplyDeleteಮೌನದ ಮಾತನ್ನೂ ತೀರಾ ಸುಂದರವಾಗಿ ಬಿಂಬಿಸಬಹುದೆಂದು ತೋರಿಸಿಕೊಟ್ರಿ...
ಮೌನಿಯನ್ನ ಚಂದ್ರಂಗೆ ಹೋಲಿಸಿದ್ದು ,ಮಾತನ್ನ ನಕ್ಷತ್ರಗಳ ಜೊತೆ ಸೇರಿಸಿರೋ ನಿಮ್ಮ ಕಲ್ಪನೆಗೊಂದು ನಮನ ..
ಪಂಜುವಿನಲ್ಲಿ ಪ್ರಕಟವಾದುದ್ದಕ್ಕೆ ಅಭಿನಂದನೆಗಳು .
ಭಾವ ಕವಿಯಿಂದ ಇನ್ನಷ್ಟು ಭಾವಗಳ ನಿರೀಕ್ಷೆಯಲ್ಲಿ
ಹೆಚ್ಚು ಅರ್ಥಬದ್ಧ ಹಾಗೂ ಗೊಂದಲ ಎರಡೂ
Deleteಮೌನವೇ ಇರಬೇಕು. ಅದಕ್ಕೇ ಅಲ್ಲವಾ ನಾವು ನಮಗಿಷ್ಟವಾದದ್ದನ್ನು
ಮೌನದಲ್ಲೇ ಕಂಡುಕೊಳ್ಳೋದು..... ಮೌನದ ಬಗ್ಗೆ ನಿನಗೆ ಇಲ್ಲಿ
ನಾ ಮಾತಾಡಲ್ಲ...ಏಕೆಂದರೆ ಮೌನವನ್ನೇ ಚನ್ನಾಗಿ ಅರ್ಥ ಮಾಡಿಕೊಳ್ಳೋ
ಪುಟಾಣಿ ನೀನು...
ಓದಿ ಅಭಿನಂದಿಸುವ ನೀವೆಲ್ಲ ಇರುವಾಗ ಮತ್ತೇನು ಬೇಕು...
ಶುಕ್ರಿಯಾ.....
ನಿಮ್ಮ ಮೌನದ ಮಾತುಗಳು ಇಷ್ಟವಾಯಿತು
ReplyDeleteಇಷ್ಟಪಟ್ಟಿದ್ದದಕ್ಕೆ ತುಂಬಾ ಖುಷಿಯಾಯಿತು....
Deleteಬರ್ತಾ ಇರಿ............
ರಾಘೂ -
ReplyDeleteಮೌನ ಮಾತು ಎರಡೂ ಸೊಗಸಾದ ಬದುಕ ನಿರ್ವಹಣೆಗೆ ಅಗತ್ಯವೇ...ಎರಡಕ್ಕೂ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆಯದೇ ಆಯಾಮಗಳಿವೆ...ಸೂತಕದ ಮನೆಯ ಮೌನ, ನಗು ಮೂಡಿಸದ ಮಾತು ಎರಡೂ ಅಸಹನೀಯವೇ...ಹಿತಮಿತವಾಗಿ ಇರುವಲ್ಲಿ ಇದ್ದರೆ ಮೌನಕೂ ಮಾತಿಗೂ ಶಾಂತಿಯ ಸೂಸುವ ಚೆಲುವುಂಟು...ಕಲಿಯಬೇಕಿದೆ ಮೌನದ ಮಾತ, ಮಾತಿನ ಸೊಗಸ...
ಕಳೆದದ್ದು ಮಾತು
ಹುಡುಕಿದ್ದು ಮೌನ...ತುಂಬ ಇಷ್ಟವಾದ ಸಾಲುಗಳು...
ಚಂದದ ಭಾವ ಬರಹ...ಇಷ್ಟವಾಯಿತು...
ಶರಣು ದೊರೆ..... ಸರಿಯಾಗಿದೆ ನೀನು ಹೇಳಿದ್ದು..... ಚಂದ್ರನಿಲ್ಲದೇ ಹುಣ್ಣಿಮೆಯಿಲ್ಲ.... ನಕ್ಷತ್ರಗಳಿಲ್ಲದೇ ಚಂದ ಚಿತ್ತಾರವಿಲ್ಲ....
Deleteಒಂದು ನಾಣ್ಯ ಎರಡು ಮುಖ ಅಷ್ಟೇ....
ಮಾತು ಮೌನ ಎರಡೂ ಬೇಕು....
ಮಾತಿದ್ದರೆ ನಿನ್ನಂತೆ....
ಮೌನವಿದ್ದರೆ.........
ನಿಮ್ಮ ಕವನದಲ್ಲಿ ಮೌನಕ್ಕೂ ಒಂದು ಧ್ವನಿಯಿದೆ.. ಇಲ್ಲಿ ಮೌನವೂ ಮಾತಾಡಿದೆ ಮಾತಿನೊಂದಿಗೆ. ಮಾತು ಮೌನಗಳ ಸಂವಾದ ಚೆಂದ ಚೆಂದ ..
ReplyDeleteಸಂಧ್ಯಾ..... ನನ್ನ ಕವನದಲ್ಲಿ ಮೌನಕ್ಕೂ ಒಂದು ಧ್ವನಿಯಿದೆ ಅಂದೆಯಲ್ಲಾ....
Deleteಮೌನಕ್ಕೆ ಧ್ವನಿ ಬರೋದು ಹೇಗೆ... ನಿನ್ನ ಹಾಗೆ ಆ ಮೌನಕ್ಕೆ ಮೌನದ ಭಾಷೆಯಲ್ಲಿ ಅರ್ಥ ಹುಡುಕಿ ಕಲ್ಪಿಸಿಕೊಂಡಾಗ ತಾನೇ... ನಿಮ್ಮಿಂದಲೇ ಬಂದ ಧ್ವನಿಯದು...
ಮೌನದೊಂದಿಗೆ ಧ್ವನಿಯಾಗೋ ನೀವಿದ್ದೀರಲ್ಲಾ... ಆ ಖುಷಿಯಿದೆ..
ಶುಕ್ರಿಯಾ...
ರಾಘವ್, ಮೌನಕ್ಕೆ ಬಹಳ ಶಕ್ತಿ ಇದೆ.. ಕೆಲವೊಮ್ಮೆ ಮಾತಲ್ಲಿ ಹೇಳಲಾಗದ್ದನ್ನ ಮೌನದಿ೦ದ ವ್ಯಕ್ತಪಡಿಸಿಬಿಡುತ್ತೇವೆ.. ಅದಕ್ಕೆ ಇರಬೇಕು ಸ್ವಾಮಿ ರಾಮ ಅವರು ಹೇಳಿದ್ದಾರೆ, ಭಾಷೆ ಭಾವ ಸ೦ವೇದನೆಯ ದುರ್ಬಲ ಮಾಧ್ಯಮ ಅ೦ತ... ಸು೦ದರವಾದ ಕವನ ಇಷ್ಟವಾಯಿತು..
ReplyDeleteನಿಜ ಶೃತಿ.. ಮೌನವನ್ನು ನಾವು ಎಷ್ಟು ಆಳವಾಗಿ ಕಲ್ಪಿಸಿಕೊಳ್ಳುತ್ತೇವೆಯೋ ಅಷ್ಟು ಆಳ ಅದು.. ಎಷ್ಟೋ ಸಲ ಮೌನ ಅಷ್ಟೇ ನಿರಾಳ.... ಮೌನಕ್ಕೆ ಅದರದೇ ಆದ ತೂಕವಿದೆ... ಆದರೆ ಮಾತಿಗೆ ಆ ತೂಕವನ್ನು ನಾವು ಕೊಡಬೇಕಾಗುತ್ತೆ... ಅಂದರೆ ಚಂದ....
ReplyDeleteಹೀಗೇ ಬರ್ತಾ ಇರು.... ಖುಷಿಯಾಯ್ತು...
>>
ReplyDeleteಮಾತು ತಾರಿಕೆಯಾಯ್ತು
ಮೌನ ತಾ ಚಂದ್ರಮನು
ಮೌನ ಹಗಲೂ ಇರುಳು
ಮಾತು ಬೆಳಕಿಗೆ ಮರುಳು<<
ನಿಮ್ಮ ಹೋಲಿಕೆಗಳಿಗೆ ಶರಣು :-)
ಸಖತ್ತಾಗಿದೆ ರಾಘವ್.. ಬ್ಲಾಗ್ ವಿನ್ಯಾಸ, ಅದರಲ್ಲೂ ಬಳಸಿರೋ ಫಾಂಟ್ಗಳು ಮನಮೋಹಕವಾಗಿವೆ
ಪ್ರಶಸ್ತೀ ಜೀ.. ಧನ್ಯವಾದ...
Deleteಬ್ಲಾಗ್ ವಿನ್ಯಾಸ, ಬಳಸಿರೋ ಫಾಂಟ್ಗಳೂ ಕೂಡಾ ಕಣ್ಣಿಗೆ ಹೋದವೆಂದರೆ
ಇದು ಇಂಜಿನಿಯರ್ ಮೈಂಡೇ ಅಂತ ನೋಡದೇ ಹೇಳಬಹುದು
Engineering... ಸಾಪ್ಟವೇರೋ.... ಟೆಕ್ನಿಕಲ್ಲೋ ಗೊತ್ತಿಲ್ಲಾ...
ಮೊದಲ ಸಲ ನಮ್ ಬ್ಲಾಗ್ ಮನೆಯಲ್ಲಿ ಅನ್ನ ಮುಹೂರ್ತ ಆದಂಗಾಯ್ತು ತಮ್ಮದು...
ಸ್ವಾಗತ...
Lovely lines...!
ReplyDeleteThank u ಪ್ರಕಾಶಣ್ಣಾ.......
ReplyDelete