ಮುಂಬಾಗಿಲಲಿ ನಿಂತು ಏಕೆ ಯೋಚಿಸುವೆ...? ಸ್ವಾಗತದ ಪನ್ನೀರ ನಿನಗೆ ಸಿಂಚಿಸುವೆ....
ನನ್ನ ಹುಚ್ಚುತನವನ್ನ, ಕನಸುಗಳನ್ನ, ಅನಿಸಿಕೆಗಳನ್ನ,ಸುಮ್ ಸುಮ್ನೇ ಅನ್ಸೋ ಸಾಲುಗಳನ್ನ ಯದ್ವಾ ತದ್ವಾ ಬರ್ದ್ಬಿಟ್ಟಿದೀನಿ.... ಜೀರ್ಣಿಸಿಕೊಳ್ಳೊದು ಬಿಡೋದು ನಿಮ್ಗೆ ಬಿಟ್ಟಿದ್ದು....
ತೃಪ್ತ ಬಾಳು......
ಎಷ್ಟು ಪ್ರೀತಿ ಕೃಷ್ಣನಲ್ಲಿ
ಎಂಥ ಭರವಸೆ |
ರಾಧೆ ಜೀವ ಮುರುಳಿಯಲ್ಲೆ
ಮೋಹದ ಮನಸೆ ||
ಎಷ್ಟು ಭಕ್ತಿ ರಾಮನಲ್ಲಿ
ಎಂಥ ಕಾಯ್ವಿಕೆ |
ರಾಮ ಕಂಡ ಶಬರಿ ಭಕ್ತಿ
ಮುಕ್ತಿ ಜೀವಕೆ ||
ಎಂಥ ಮೋಹ ದುಂಬಿಯಲ್ಲಿ
ಅರಳೋ ಹೂವಿಗೆ |
ಒಂದೇ ದಿನದ ತೃಪ್ತ ಬಾಳು
ಅಕಲ್ಪ ಸಾವಿಗೆ ||
ಎಂಥ ಮೋಹದುರಿಯ ಆಟ
ಈ ಪತಂಗಕೆ |
ಬೇಕೇ ನಿನಗೆ ಬೆಂಕಿಯೂಟ
ಸಾವ ಸಂಗಕೆ ||
********** ರಾಘವ್.
ಮೋಹದ ಬಗ್ಗೆ ಮನಮೋಹಕ ಸಾಲುಗಳು ರಾಘವ್.. ತುಂಬಾ ಚೆನ್ನಗಿದೆ..
ReplyDeleteರಾಘವ್, ಮೊದಲಿನ ಎರಡು ಸ್ಟಾಂಜ ಪಾಸಿಟಿವ್ ಹೇಳ್ತಾ ಇದ್ದರೆ, ಮೂರು ಮತ್ತು ನಾಲ್ಕು ನೆಗೆಟಿವ್? ಒಟ್ಟು ಅರ್ಥ ಬರಲ್ಲ ಅನ್ನುಸ್ತಿದೆ. ಬರೆದ ಮೇಲೆ ಮತ್ತೊಮ್ಮೆ ಚೆನ್ನಾಗಿ ಓದಿಕೊಂಡು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಓಕೆ ಶುಭವಾಗಲಿ...
ReplyDeleteಚಿಂವ್ ಚಿಂವ್..
ಪ್ರದೀಪ್... ಧನ್ಯವಾದಗಳು.... ಹೀಗೇ ಓದ್ತಾ ಇರಿ...
ReplyDelete*******
ಸತೀಶ್ ಅವರೇ ಒಂದು ದೃಷ್ಟಿಯಲ್ಲಿ ನೀವು ಹೇಳಿದ್ದು ಸರಿಯಾಗೇ ಇದೆ. ಸ್ವಲ್ಪ ಒಳಹೊಕ್ಕು ನೋಡಿದರೆ ಬೇರೆ ಅರ್ಥವೂ ಹೊಳೆದೀತು... ಇದರಲ್ಲಿ ಮೋಹ,ಸಾರ್ಥಕತೆ ಮತ್ತು ಅನಿವಾರ್ಯತೆಗಳ ಮಿಶ್ರಣವಿದೆ.ಹೂವಿನ ಬಾಳು ಒಂದೇ ದಿನ.. ಪ್ರಕೃತಿ ನಿಯಮ ಅದು.. ಅನಿವಾರ್ಯ ತಾನೇ... ಆದರೆ ಹೂವಿನ ಬಾಳಿನ ಸಾರ್ಥಕತೆ ಅದು ದೇವರ ಪಾದಕ್ಕೆ ಬೀಳುವಲ್ಲಿ... ಹೆಣ್ಣಿನ ಮುಡಿಗೇರುವಲ್ಲಿ, ಪಥಿಕರು ಹೀರುವ ಅದರ ಸುವಾಸನೆಯ ಆಘ್ರಾಣದಲ್ಲಿ.. ಹಾಗೆಯೇ ಮಕರಂದ ಹೀರುವ ದುಂಬಿಯಲ್ಲಿದೆ... ಒಂದೇ ದಿನದಲ್ಲಿ ಸಾವಿಗೆ ಶರಣಾಗುವ ಮೊದಲಿನ ಸಾರ್ಥಕಥೆ ಅದು...
ನನ್ನ ಕಲ್ಪನೆಗೆ ನಿಲುಕಿದಂತೆ ಪ್ರತೀ ಪ್ಯಾರಾದಲ್ಲು ಎರಡರ್ಥವನ್ನು ಹಿಡಿದಿರಲು ಪ್ರಯತ್ನಿಸಿದ್ದೇನೆ...
ಕಡೆದಾಗ ಮಾತ್ರ ಬೆಣ್ಣೆ.... ಹಾಗೇ ವಿಮರ್ಷೆಗಳಿದ್ದಾಗ ಮಾತ್ರ ಹೊಸದೊಂದು ಅರ್ಥ ಗೋಚರಿಸೋದು... ಆ ಕೆಲಸ ನೀವ್ ಮಾಡಿದ್ದೀರಾ. ಖುಷಿಯಾಯ್ತು... ಸಲಹೆಗಳಿಗೆ ಧನ್ಯವಾದ. ನಿಮ್ಮ ಸಲಹೆಗಳು ಸದಾ ಬೇಕು...
*******
ತು೦ಬಾ ಚೆನ್ನಾಗಿದೆ...
ReplyDeleteಧನ್ಯವಾದ ದಿಗ್ವಾಸ್....
ReplyDeleteಪರಿಣಿತರು ತಾವು....
ಸಲಹೆಗಳೂ ಬೇಕು....
ಇಷ್ಟ ಆಯ್ತು .. ಚೆನ್ನಾಗಿದೆ
ReplyDeleteಉಷಾ ರವರೆ.... ಧನ್ಯವಾದ....
ReplyDeleteಹಾಗೆಯೆ ನನ್ನ blog ಗೆ ಸ್ವಾಗತ....
ಮತ್ತೆ ಮತ್ತೆ ಈ blog ಗೆ ಬರ್ತಾ ಇರಿ....
eno
ReplyDeletebala prerne sigta iddano?
moha premada bagge barita idde
tumba chalo aydo.
sundara abhivyakti
irali sada i shakti
jotegondistu bhakti
moha madhurya
ReplyDeleteheli title kotre chand itto
ವಿನಾಯಕಣ್ಣಾ thank ಸೋ ಪ್ಪಾ....
ReplyDeleteನಾನು title ಕೊಡೆ ಅಂದ್ಕಂಡವ್ನೇಯಾ...
but ತಪ್ಪಿ ಹೋಗಿತ್ತು
title ಕೊಡ್ತೆ ಈಗ...
ಧನ್ಯವಾದ...
ಅಬ್ಬಾ.. ಎಂತೆಂತ ಸುಂದರ ಸಾಲುಗಳು..ತೃಪ್ತವಾಯಿತು ಮನಸು....!!
ReplyDeletereally nice poem in very short line. man.. a great effort.
ReplyDeleteನಾಗ್ರಾಜಣ್ಣಾ..... ಧನ್ಯವಾದ......
ReplyDeleteನಿನ್ನಂಥವರ ಫೋಟೋಗಳೂ ಕೂಡಾ ಎಷ್ಟೋ ಕವನಗಳಿಗೆ ಪ್ರೇರಣೆ ಆಗ್ತು....
**********
ಹಾಯ್ ಕಮಲ್...
thank u.
ಬರೆಯೋ ಮೂಡ್ ಬಂದ್ರೆ... ಅಂಥಾ situation ಇದ್ರೆ....
feelings ಇದ್ರೆ effort ಬೇಕೇ ಆಗ್ತ್ಲೆ....
ತನ್ನಿಂತಾನೇ ಬರ್ದೋಗ್ತು....
****@ರಾ******